newsfirstkannada.com

ಲೈಂಗಿಕ ದೌರ್ಜನ್ಯ ಕೇಸ್​; ಮಧ್ಯಾಹ್ನ ಅರೆಸ್ಟ್‌; ಸಂಜೆ ರಿಲೀಸ್; ಗಳಗಳನೆ ಕಣ್ಣೀರಿಟ್ಟ ಮುರುಘಾ ಶ್ರೀ!

Share :

Published November 20, 2023 at 8:39pm

    ಮುರುಘಾ ಸ್ವಾಮೀಜಿ ಬಂಧನ-ಬಿಡುಗಡೆ ಹೈಡ್ರಾಮಾ

    ಮಧ್ಯಾಹ್ನ ಅರೆಸ್ಟ್‌.. ಸಂಜೆ ಮುರುಘಾ ಶ್ರೀ ರಿಲೀಸ್‌..!

    2ನೇ ಪೋಕ್ಸೋ ಕೇಸ್‌ನಲ್ಲೂ ಸ್ವಾಮೀಜಿಗೆ ರಿಲೀಫ್!

ಬೆಂಗಳೂರು: ಮುರುಘಾ ಶ್ರೀ ವಿರುದ್ಧದ ಪೋಕ್ಸೋ ಪ್ರಕರಣ ಇವತ್ತು ರೋಚಕ ಟ್ವಿಸ್ಟ್‌ಗೆ ಕಾರಣವಾಯಿತು. ಮೊದಲ ಕೇಸ್‌ನಲ್ಲಿ ಜಾಮೀನು ಪಡೆದು ರಿಲೀಸ್‌ ಆಗಿದ್ದ ಶ್ರೀ, ಎರಡನೇ ಕೇಸ್‌ನಲ್ಲಿ ಮತ್ತೆ ಅರೆಸ್ಟ್ ಆಗೋ ಹಾಗಾದ್ರು. ಚಿತ್ರದುರ್ಗ ನ್ಯಾಯಾಲಯದ ಆದೇಶದಂತೆ ಶಿವಮೂರ್ತಿ ಶ್ರೀಗಳನ್ನ ಪೊಲೀಸರು ಅರೆಸ್ಟ್‌ ಕೂಡಾ ಮಾಡಿದ್ರು. ಆದ್ರೆ ಹೈಕೋರ್ಟ್‌ ಆದೇಶ ಇಡೀ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್‌ ಕೊಟ್ಟಿದೆ. ಹೀಗಾಗಿ ಇಡೀ ದಿನ ಈ ಕೇಸ್‌ ಪ್ರಹಸನಕ್ಕೆ ಆಸ್ಪದ ಕಲ್ಪಿಸಿತು.

ಪೋಕ್ಸೋ ಕೇಸ್ ಎಂಬ ಜೀವಮಾನದ ಕಳಂಕವನ್ನ ಹೊತ್ತು ಮುರುಘಾ ಶ್ರೀ ಜೈಲುಪಾಲಾಗಿದ್ರು. ಕಳೆದ 14 ತಿಂಗಳ ಜೈಲಿನ ವನವಾಸದ ಬಳಿಕ ಕಳೆದ ನಾಲ್ಕು ದಿನಗಳ ಹಿಂದಷ್ಟೇ ಬೇಲ್ ಮೇಲೆ ಹೊರಬಂದಿದ್ರು. ಆದ್ರೀಗ ಮತ್ತೊಂದು ಕೇಸ್‌ನಲ್ಲಿ ಶ್ರೀಗಳು ಅರೆಸ್ಟ್ ಆಗೋ ಸನ್ನಿವೇಶ ಸೃಶ್ಟಿಯಾಗಿತ್ತು. ಆದ್ರೆ ಕಡೇ ಕ್ಷಣದಲ್ಲಿ ಹೈಕೋರ್ಟ್‌ ಮಧ್ಯ ಪ್ರವೇಶದೊಂದಿಗೆ ಜೈಲು ಸೇರಬೇಕಿದ್ದ ಶ್ರೀಗೆ ರಿಲೀಫ್ ಸಿಕ್ಕಿದೆ.

2ನೇ ಪೋಕ್ಸೋ ಕೇಸ್‌ನಲ್ಲೂ ಮುರುಘಾ ಶ್ರೀಗೆ ರಿಲೀಫ್!

ಮುರುಘಾ ಶ್ರೀ ನವೆಂಬರ್ 16ರಂದು ಜೈಲಿನಿಂದ ರಿಲೀಸ್ ಆಗಿದ್ರು. ಚಿತ್ರದುರ್ಗಕ್ಕೆ ಪ್ರವೇಶಿಸಬಾರದು ಎಂಬ ಷರತ್ತಿನ ಮೇಲೆ ದಾವಣಗೆರೆಯ ಮುರುಘಾ ಮಠದ ವಿರಕ್ತ ಮಠದಲ್ಲಿ ಶ್ರೀಗಳು ವಾಸ್ತವ್ಯ ಹೂಡಿದ್ರು.. ಆದ್ರೆ, 2ನೇ ಕೇಸ್‌ನಲ್ಲಿ ಮುರುಘಾ ಶ್ರೀಗಳನ್ನ ಬಂಧಿಸುವಂತೆ ಚಿತ್ರದುರ್ಗದ 2ನೇ ಜಿಲ್ಲಾ ಸತ್ರ ನ್ಯಾಯಾಲಯದ ಆದೇಶ ಹೊರಡಿಸಿತ್ತು.. ಈ ಅರೆಸ್ಟ್ ವಾರೆಂಟ್ ಹಿಡಿದು ಪೊಲೀಸರು ದಾವಣಗೆರೆಗೆ ದೌಡಾಯಿಸಿದ್ರು. ಚಿತ್ರದುರ್ಗ ಗ್ರಾಮಾಂತರ ಠಾಣೆ ಸಿಪಿಐ ಮುದ್ದುರಾಜ್‌ ಅಂಡ್ ಟೀಂ ದಾವಣಗೆರೆಯ ವಿರಕ್ತ ಮಠಕ್ಕೆ ಆಗಮಿಸಿ ಮುರುಘಾ ಶ್ರೀಗಳನ್ನ ಬಂಧಿಸಿದ್ರು.. ಬಳಿಕ ವಿರಕ್ತ ಮಠದಿಂದ ಚಿತ್ರದುರ್ಗಕ್ಕೆ ಶ್ರೀಗಳನ್ನ ಪೊಲೀಸರು ಕರೆದೊಯ್ದಿದ್ರು..

ಬಂಧನದ ವೇಳೆ ಕಣ್ಣೀರಿಟ್ಟ ಶಿವಮೂರ್ತಿ ಸ್ವಾಮೀಜಿ

ದಾವಣಗೆರೆಯ ವಿರಕ್ತಮಠದಲ್ಲಿ ಪೊಲೀಸರು ಬಂಧಿಸುತ್ತಲೇ ಶಿವಮೂರ್ತಿ ಶ್ರೀಗಳು ಕಣ್ಣೀರಿಟ್ಟಿದ್ದಾರೆ. ಚಿತ್ರದುರ್ಗ ಪೊಲೀಸರು ಬಂಧಿಸಿ ಕರೆದೊಯ್ಯುತ್ತಿದ್ದ ವೇಳೆ ಶಿವಮೂರ್ತಿ ಶ್ರೀ ಕಣ್ಣೀರು ಹಾಕುತ್ತಲೇ ಪೊಲೀಸ್ ಜೀಪ್ ಹತ್ತಿದ್ದಾರೆ..

ಮುರುಘಾ ಶ್ರೀಗಳನ್ನ ಬಂಧಿಸಿ ಚಿತ್ರದುರ್ಗದ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಕ್ಕೆ ಪೊಲೀಸರು ಹಾಜರುಪಡಿಸಿದ್ರು.. ಬಳಿಕ ಜಿಲ್ಲಾ ಕೋರ್ಟ್‌ ಶಿವಮೂರ್ತಿ ಶ್ರೀಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನವನ್ನೂ ವಿಧಿಸಿತ್ತು. ಹೀಗಾಗಿ ಮುರುಘಾ ಸ್ವಾಮೀಜಿಗೆ ಮತ್ತೆ ಜೈಲುವಾಸವೇ ಪಕ್ಕಾ ಎನ್ನಲಾಗಿತ್ತು.

ಮಧ್ಯಾಹ್ನ ಅರೆಸ್ಟ್‌.. ಸಂಜೆ ವೇಳೆಗೆ ಮುರುಘಾ ಶ್ರೀ ರಿಲೀಸ್‌!

ಮುರುಘಾ ಶ್ರೀಗಳ ಬಂಧನವಾಗ್ತಿದ್ದಂತೆ ಅವರ ಪರ ವಕೀಲರು ಬಾಡಿ ವಾರೆಂಟ್ ಪರಿಶೀಲನೆ ನಡೆಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ರು.. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ಶ್ರೀಗಳಿಗೆ ರಿಲೀಫ್ ನೀಡಿದೆ.

ಚಿತ್ರದುರ್ಗ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್‌ ತಡೆ

ಚಿತ್ರದುರ್ಗದ ಎರಡನೇ ಜಿಲ್ಲಾ ಸತ್ರ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.. ಈ ಮೂಲಕ ವ ಶ್ರೀಗಳ ಬಂಧನ ರದ್ದು ಮಾಡಿ ಹೈಕೋರ್ಟ್​ ಆದೇಶ ಹೊರಡಿಸಿದೆ. ಅಲ್ಲದೇ ನಾನ್ ಬೇಲಬಲ್ ವಾರಂಟ್‌ಗೆ ಹೈಕೋರ್ಟ್ ತಡೆಯಾಜ್ಞೆಯನ್ನೂ ನೀಡಿದೆ.. ಜೊತೆಗೆ ಚಿತ್ರದುರ್ಗ ಜಿಲ್ಲಾ ಜೈಲರ್​​ಗೆ ಈ ಕೂಡಲೇ ಮುರುಘಾ ಶ್ರೀಗಳನ್ನ ಬಿಡುಗಡೆ ಮಾಡುವಂತೆ ಸೂಚನೆಯನ್ನೂ ನೀಡಡಿದೆ.. ಅಲ್ಲದೇ ಮುರುಘಾ ಶ್ರೀಗಳು ವಿಸಿ ಮೂಲಕ ವಿಚಾರಣೆಗೆ ಹಾಜರಾಗಬೇಕು ಅಂತ ಹೈಕೋರ್ಟ್ ಸೂಚನೆ ನೀಡಿದೆ.

ಒಟ್ಟಾರೆ, ಮತ್ತೆ ಸೆರೆವಾಸಕ್ಕೆ ಸಿಲುಕಿದ್ದ ಮುರುಘಾ ಶ್ರೀಗಳಿಗೆ ಹೈಕೋರ್ಟ್‌ನ ಆದೇಶ ರಿಲೀಫ್ ತಂದಿದೆ.. ಇಷ್ಟಾದ್ರೂ ಪೊಲೀಸರಂತೂ ಮುರುಘಾ ಶ್ರೀಗಳನ್ನ ಚಿತ್ರದುರ್ಗ ಕಾರಾಗ್ರಹದ ವರೆಗೂ ಕರೆದೊಯ್ದು ತಮ್ಮ ಪಾಡಿಗೆ ಪ್ರಕ್ರಿಯೆ ನಡೆಸಿದ್ದರು. ಹೈಕೋರ್ಟ್‌ ಆದೇಶ ಬಂದ ಮೇಲೆ ಮತ್ತೊಮ್ಮೆ ಶ್ರೀಗಳ ಬಿಡುಗಡೆಗೆ ಪ್ರಕ್ರಿಯೆ ಮಾಡಬೇಕಾಯಿತು. ಎರಡನೇ ಕೇಸ್‌ನಲ್ಲೂ ಸದ್ಯ ಜಾಮೀನು ಸಿಕ್ಕಿರೋದು ಮುರುಘಾ ಶ್ರೀಗೆ ಸಣ್ಣದೊಂದು ನಿರಾಳತೆಯನ್ನಂತೂ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೈಂಗಿಕ ದೌರ್ಜನ್ಯ ಕೇಸ್​; ಮಧ್ಯಾಹ್ನ ಅರೆಸ್ಟ್‌; ಸಂಜೆ ರಿಲೀಸ್; ಗಳಗಳನೆ ಕಣ್ಣೀರಿಟ್ಟ ಮುರುಘಾ ಶ್ರೀ!

https://newsfirstlive.com/wp-content/uploads/2023/11/Murugha-Swamiji-Arrest.jpg

Load More