newsfirstkannada.com

ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಲ್ಲಿ ವಾದ್ಯ ನುಡಿಸಲಿದೆ ಕರ್ನಾಟಕದ ತಂಡ..!

Share :

Published January 19, 2024 at 8:45am

    48 ದಿನ ಅಯೋಧ್ಯೆಯಲ್ಲಿ ಬಾಲ ರಾಮನಿಗೆ ರಾಗ ಸೇವೆ

    ರಾಮನಗರ, ಮೈಸೂರು, ಮಂಡ್ಯ ಕಲಾವಿದರಿಗೆ ಆಹ್ವಾನ

    ಅಭಿಷೇಕ ಹಾಗೂ ಪೂಜೆಯ ವೇಳೆ ರಾಗ ಮೊಳಗಲಿದೆ

ರಾಮನಗರ: ಅಯೋಧ್ಯೆಯಲ್ಲಿ ರಾಮಲಲ್ಲಾ (ಬಾಲರಾಮ)ನ ಮೂರ್ತಿ ಪ್ರತಿಷ್ಠಾಪನೆಗೆ ವಾದ್ಯ ನುಡಿಸಲು ಕರ್ನಾಟಕದಿಂದ ಮಂಗಳವಾದ್ಯ ತಂಡ ತೆರಳುತ್ತಿದ್ದು, 48 ದಿನಗಳ ಕಾಲ ಅಯೋಧ್ಯೆಯಲ್ಲಿ ಬಾಲ ರಾಮನಿಗೆ ರಾಗ ಸೇವೆ ನೀಡಲಿದ್ದಾರೆ.

ರಾಮನಗರ ಜಿಲ್ಲೆಯ ವಿಜಿಕುಮಾರ್ ಮತ್ತವರ ವಾದ್ಯ ತಂಡವೂ ಅಯೋಧ್ಯೆಗೆ ಮಂಗಳವಾದ್ಯ ನುಡಿಸಲು ತೆರಳುತ್ತಿದೆ. ಜನವರಿ 23 ರಿಂದ ಮಾರ್ಚ್ 10ರ ತನಕ ಬರೋಬ್ಬರಿ 48 ದಿನಗಳ ಕಾಲ ಅಯೋಧ್ಯೆ ರಾಮ ಮಂದಿರದಲ್ಲಿ ಮಂಗಳವಾದ್ಯ ನುಡಿಸಲಿದ್ದಾರೆ. ಅಯೋಧ್ಯೆ ರಾಮಜನ್ಮಭೂಮಿ ಟ್ರಸ್ಟ್ ವತಿಯಿಂದ ವಿಜಿಕುಮಾರ್ ಅವರಿಗೆ ಮಂಗಳವಾದ್ಯ ನುಡಿಸುವ ಸಂಬಂಧ ಆಹ್ವಾನ ಬಂದಿದೆ. ಹಾಗಾಗಿ ಈ ತಿಂಗಳ 19ರಂದು ಈ ಮಂಗಳವಾದ್ಯ ತಂಡವೂ ಅಯೋಧ್ಯೆಗೆ ಪ್ರಯಾಣ ಬೆಳೆಸಲಿದೆ. ಈ 10 ಮಂದಿ ತಂಡದಲ್ಲಿ ರಾಮನಗರ, ಮೈಸೂರು, ಶ್ರೀರಂಗಪಟ್ಟಣ ಹಾಗೂ ಮಂಡ್ಯದ ಆಯ್ದ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ತಂಡವೂ ರಾಮನಿಗೆ ಪ್ರಿಯವಾದ ರಾಗವನ್ನು ನುಡಿಸಲಿದ್ದು, ಆಮೂಲಕ ಅಳಿಲು ಸೇವೆ ಸಲ್ಲಿಸಲಿದೆ.

ಅಯೋಧ್ಯೆಯಲ್ಲಿ ತಮಿಳುನಾಡು ಮೂಲದ ಅಮ್ಮಾಜಿ ದೇವಾಲಯವಿದೆ. ಈ ದೇವಾಲಯದಲ್ಲಿ ವಿಜಿಕುಮಾರ್ ಮತ್ತವರ ತಂಡ ಕಳೆದ 10 ವರ್ಷದಿಂದ ಮಂಗಳವಾದ್ಯ ನುಡಿಸುತ್ತಿದೆ. ಇವರ ಮಂಗಳವಾದ್ಯವನ್ನು ವೀಕ್ಷಣೆ ಮಾಡಿದ ರಾಮ ಜನ್ಮಭೂಮಿ ಟ್ರಸ್ಟ್ನ ಚಂಪತ್ ರಾಯ್ ಹಾಗೂ ಗೋಪಾಲ್ ಜೀ ಅವರು ಪ್ರತಿ ವರ್ಷ ಶ್ರೀರಾಮನವಮಿಯಂದು ಅಯೋಧ್ಯೆಯಲ್ಲಿ ಕಾರ್ಯಕ್ರಮ ನೀಡುವಂತೆ ಸೂಚಿಸಿದ್ದರು. ಇವರ ಸೂಚನೆ ಮೇರೆಗೆ ಕಳೆದ ನಾಲ್ಕು ವರ್ಷದಿಂದ ವಿಜಿಕುಮಾರ್ ಅವರ ಮಂಗಳವಾದ್ಯ ತಂಡವೂ ಪ್ರತಿ ವರ್ಷ ರಾಮನವಮಿ ದಿನದಂದು ಮಂಗಳವಾದ್ಯ ನುಡಿಸಿಕೊಂಡು ಬಂದಿದೆ. ಇದರ ಆಧಾರದ ಮೇಲೆ ದೇವಾಲಯ ಉದ್ಘಾಟನೆಯಂದು ವಾದ್ಯ ನುಡಿಸಲು ಅವಕಾಶ ಲಭಿಸಿದೆ.

ಜನವರಿ 23ರಿಂದ ಮಂಗಳವಾದ್ಯ ನುಡಿಸುವಂತೆ ಸೂಚಿಸಲಾಗಿದೆ. ದೇವಾಯದಲ್ಲಿ ಅಭಿಷೇಕ ಹಾಗೂ ಪೂಜೆಯ ವೇಳೆ ರಾಗ ಮೊಳಗಲಿದೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯ ಉದ್ಘಾಟನೆ ನೆರವೇರಿಸಲಿದ್ದಾರೆ. ಅಂದು ಶಿಷ್ಟಾಚಾರ ಇರುವುದರಿಂದ ಮಂಗಳವಾದ್ಯ ನುಡಿಸಲು ಅವಕಾಶ ಸಿಗುವುದು ಕಷ್ಟ. ಹಾಗಾಗಿ ಜ.23ರಿಂದ 48ದಿನಗಳ ಕಾಲ ಕರ್ನಾಟಕ ತಂಡದಿಂದ ಮಂಗಳವಾದ್ಯ ಮೊಳಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಲ್ಲಿ ವಾದ್ಯ ನುಡಿಸಲಿದೆ ಕರ್ನಾಟಕದ ತಂಡ..!

https://newsfirstlive.com/wp-content/uploads/2024/01/RMG-RAMAMADNIR.jpg

Load More