newsfirstkannada.com

AR ರೆಹಮಾನ್ ಸೋದರಳಿಯ, ಖ್ಯಾತ ಮ್ಯೂಸಿಕ್​ ಡೈರೆಕ್ಟರ್ ಜಿವಿ ಪ್ರಕಾಶ್ ದಾಂಪತ್ಯದಲ್ಲಿ ಬಿರುಕು, ಡಿವೋರ್ಸ್..!

Share :

Published May 14, 2024 at 9:21am

  ಶಾಲಾ ದಿನಗಳಿಂದಲೂ ಲವ್ ಮಾಡಿ, ಒಪ್ಪಿಸಿ ಮದುವೆಯಾಗಿದ್ದ ಜೋಡಿ

  ಡಾರ್ಲಿಂಗ್, ಅಸುರನ್, ರಾಜಾರಾಣಿ ಚಿತ್ರಕ್ಕೆ ಸಂಗೀತ ನೀಡಿದ್ದ​ ಡೈರೆಕ್ಟರ್

  11 ವರ್ಷದ ವೈವಾಹಿಕ ಜೀವನಕ್ಕೆ ಅಂತ್ಯ ಹೇಳ್ತಿರುವ ನಟ ಜಿವಿ ಪ್ರಕಾಶ್

ತಮಿಳು ಸಿನಿಮಾದ ಮ್ಯೂಸಿಕ್ ಡೈರೆಕ್ಟರ್, ನಿರ್ಮಾಪಕ ಹಾಗೂ ನಟ ಜಿವಿ ಪ್ರಕಾಶ್ ಅವರು ತಮ್ಮ 11 ವರ್ಷದ ವೈವಾಹಿಕ ಜೀವನಕ್ಕೆ ಅಂತ್ಯ ಹೇಳುತ್ತಿದ್ದಾರೆ. ತನ್ನ ಹೆಂಡತಿ ಖ್ಯಾತ ಸಿಂಗರ್ ಸೈಂಧವಿ ಪ್ರಕಾಶ್​ಗೆ ವಿಚ್ಛೇದನ ನೀಡುವುದಾಗಿ ಸೋಷಿಯಲ್​ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಜಿವಿ ಪ್ರಕಾಶ್ ಅವರು ಖ್ಯಾತ ಸಿಂಗರ್ ಎ.ಆರ್ ರೆಹಮಾನ್ ಅವರ ಸೋದರಳಿಯ ಆಗಿದ್ದಾರೆ.

ಸಿನಿಮಾ ಕ್ಷೇತ್ರಗಳಲ್ಲಿ ಬಹುಮುಖ ಪ್ರತಿಭೆಯಾಗಿರುವ ಜಿವಿ ಪ್ರಕಾಶ್ ಹಾಗೂ ಹೆಂಡತಿ ಸೈಂಧವಿ ದಂಪತಿ ನಡುವೆ ಬಿರುಕು ಉಂಟಾಗಿದೆ. ಹೀಗಾಗಿ ಕಳೆದ ಕೆಲವು ವರ್ಷಗಳಿಂದ ದಂಪತಿ ಮಧ್ಯೆ ಸರಿಯಾದ ಹೊಂದಾಣಿಕೆ ಇಲ್ಲದೇ ಸಂಬಂಧ ಉತ್ತಮ ಸ್ಥಿತಿಯಲ್ಲಿ ಇರಲಿಲ್ಲ. ಜಿವಿ ಪ್ರಕಾಶ್ ಮತ್ತು ಸೈಂಧವಿಗೆ ಒಂದು ಹೆಣ್ಣು ಮಗು ಇದ್ದು ಅದಕ್ಕೆ ಅವ್ನಿ ಎಂದು ಹೆಸರಿಟ್ಟಿದ್ದಾರೆ. 2022 ಏಪ್ರಿಲ್ 16 ರಂದು ಅವ್ನಿ ಜನಿಸಿದ್ದಳು. ಸದ್ಯ ಇದೀಗ ಇಬ್ಬರ ಮಧ್ಯೆ ಮನಸ್ತಾಪ ಬಂದಿದ್ದರಿಂದ ಕಾನೂನಾತ್ಮಕವಾಗಿ ಡಿವೋರ್ಸ್ ಪಡೆಯುವುದಾಗಿ ತಿಳಿಸಿದ್ದಾರೆ.

ಜಿವಿ ಪ್ರಕಾಶ್ ಹಾಗೂ ಸೈಂಧವಿ ಶಾಲಾ ದಿನಗಳಿಂದಲೇ ಪ್ರೀತಿ ಮಾಡಿದ್ದರು. ದೀರ್ಘವಾದ ಪ್ರೇಮಾಂಕುರದಿಂದ ಇಬ್ಬರು ಮನೆಯಲ್ಲಿ ಪೋಷಕರನ್ನು ಒಪ್ಪಿಸಿ 2013ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಲ್ಲಿಗೆ ಅವರಿಗೆ ದಾಂಪತ್ಯದಲ್ಲಿ 11 ವರ್ಷಗಳನ್ನು ಕಳೆದಿದ್ದರು. ಆದರೆ ಕೆಲ ಕಾರಣಗಳಿಂದ ತಮ್ಮ ಸುಂದರ ಸಂಸಾರಕ್ಕೆ ಅಂತ್ಯ ಹೇಳುತ್ತಿದ್ದಾರೆ.

ಸೈಂಧವಿ ಪ್ರಕಾಶ್ ಕರ್ನಾಟಕ ಸಂಗೀತ ಗಾಯಕಿ ಮತ್ತು ಹಿನ್ನೆಲೆ ಗಾಯಕಿ. ಜಿವಿ ಪ್ರಕಾಶ್ ಬಹುಮುಖ ಪ್ರತಿಭೆಯಾಗಿದ್ದು ನಿರ್ದೇಶಕ, ನಟ, ನಿರ್ಮಾಪಕ ಹಾಗೂ ಮ್ಯೂಸಿಕ್ ಕಾಂಪೋಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಪತ್ನಿ ಸೈಂಧವಿ ಖ್ಯಾತ ಕರ್ನಾಟಿಕ್ ಸಂಗೀತಗಾರ್ತಿ ಆಗಿದ್ದಾರೆ. ಸದ್ಯ ಸಂಸಾರದಲ್ಲಿ ಬಿರುಕು ಉಂಟಾಗಿದ್ದು ಇಬ್ಬರು ಬೇರೆ ಬೇರೆಯಾಗಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.

ಜಿವಿ ಪ್ರಕಾಶ್ ಅವರು ಕನ್ನಡದ ಪುಂಡ, ತಮಿಳಿನ ಪೊಲ್ಲಾದವನ್, ಆಡುಕಳಂ, ಕುಚೇಲನ್, ಸೂರರೈ ಪೋಟ್ರು, ಯುಗಾನಿಕಿ ಒಕ್ಕಡು, ಅಸುರನ್, ರಾಜಾರಾಣಿಯಂತಹ ಸೂಪರ್ ಹಿಟ್ ಸಿನಿಮಾಗಳಿಗೆ ಮ್ಯೂಸಿಕ್ ನೀಡಿದ್ದಾರೆ. ತೆಲುಗಿನಲ್ಲಿ ಉಲ್ಲಾಸಂಗ ಉತ್ಸಾಹಂಗ, ಪ್ರಭಾಸ್ ಅವರ ಡಾರ್ಲಿಂಗ್, ಎಂದುಕಂಟೆ ಪ್ರೇಮಂಟಾ, ಒಂಗೋಲ್ ಗಿತ್ತ, ರಾಜಾಧಿರಾಜ, ಜೆಂಡಾ ಪೈ ಕಪಿರಾಜು ಎನ್ನುವ ಸಿನಿಮಾಗಳಿಗೆ ಸಂಗೀತ ನೀಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

AR ರೆಹಮಾನ್ ಸೋದರಳಿಯ, ಖ್ಯಾತ ಮ್ಯೂಸಿಕ್​ ಡೈರೆಕ್ಟರ್ ಜಿವಿ ಪ್ರಕಾಶ್ ದಾಂಪತ್ಯದಲ್ಲಿ ಬಿರುಕು, ಡಿವೋರ್ಸ್..!

https://newsfirstlive.com/wp-content/uploads/2024/05/GV_PRAKASH_WIFE.jpg

Load More