/newsfirstlive-kannada/media/post_attachments/wp-content/uploads/2025/06/Hamsalekha-Kamal-hassan.jpg)
ಬೆಂಗಳೂರು: ಕನ್ನಡಿಗರ ಕ್ಷಮೆ ಕೇಳಲು ಮೊಂಡಾಟ ಪ್ರದರ್ಶಿಸುತ್ತಿರುವ ತಮಿಳು ನಟ ಕಮಲ್ ಹಾಸನ್ ಅವರ ಮೇಲೆ ಸಂಗೀತ ನಿರ್ದೇಶಕ ಹಂಸಲೇಖ ಮತ್ತೆ ಗರಂ ಆಗಿದ್ದಾರೆ. ನನಗಿಂತಲೂ ಕಮಲ್ಗೆ ಯಾರ್ ಬುದ್ಧಿ ಹೇಳಿದ್ದಾರೆ. ಕಲಾವಿದರು ಕಲಾವಿದರಾಗಿದ್ದುಕೊಂಡು ವರ್ತಿಸಬೇಕು. ಅರ್ಥ ಮಾಡಿಕೊಂಡು, ಇದಕ್ಕೆ ಇತಿಶ್ರಿ ಹಾಡಬೇಕು ಎಂದಿದ್ದಾರೆ.
ಕನ್ನಡಕ್ಕೆ ಈಗ ಒಳ್ಳೆಯ ಸಮಯ ಬಂದಿದೆ. ಎಲ್ಲರೂ ಸುಮ್ಮನೆ ಇರುವ ಸಮಯದಲ್ಲಿ ವಿಶ್ವಾದ್ಯಂತ ಭಾಷೆಯ ಬಗ್ಗೆ ಚರ್ಚೆ ಆಗ್ತಿದೆ. ಕಮಲ್ ಹಾಸನ್ ಅವರು ಇನ್ನೂ ತುಂಬಾ ವರ್ಷ ಬದುಕಬೇಕು. ತುಂಬಾ ಸಿನಿಮಾಗಳಲ್ಲಿ ನಟಿಸಬೇಕು.
ಇದನ್ನೂ ಓದಿ: ಕನ್ನಡಿಗರಿಗೆ ಸೆಡ್ಡು.. ಥಗ್ ಲೈಫ್ ಬಿಡುಗಡೆಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಟ ಕಮಲ್ ಹಾಸನ್!
ಇವತ್ತು ಒಂದೇ ಭಾಷೆಯಲ್ಲಿ ಸಿನಿಮಾಗಳು ಬಿಡುಗಡೆ ಆಗಲ್ಲ. ಎಲ್ಲಾ ಪ್ಯಾನ್ ಇಂಡಿಯಾ. ಪ್ಲಾನ್ ಇಂಡಿಯಾ ಆಗಿದೆ. ಅದರಿಂದ ಎಲ್ಲಾ ಕಲಾವಿದರು ಕಲಾವಿದರಾಗಿದ್ದುಕೊಂಡು ವರ್ತಿಸಬೇಕು. ದೊಡ್ಡ, ದೊಡ್ಡ ಕಲಾವಿದರು ಸ್ಕ್ರಿಪ್ಟ್ ಇಲ್ಲದೇ ಎಲ್ಲಿಯೂ ಬಂದು ಮಾತಾಡಬಾರದು. ದೊಡ್ಡ ದೊಡ್ಡ ಸ್ಟಾರ್‌ಗಳಿಗೆ ಸ್ವಂತ ಸ್ಕ್ರಿಪ್ಟ್ ಇರಲ್ಲ. ಡೈಲಾಗ್ ರೈಟರ್ ಸ್ಕ್ರಿಪ್ಟ್ ಕೊಟ್ಟರೆ ಮಾತ್ರವೇ ಚೆನ್ನಾಗಿ ಮಾತಾಡುತ್ತಾರೆ.
ಕಮಲ್ ಹಾಸನ್ ಥಗ್ ಲೈಫ್ ಸಿನಿಮಾವನ್ನು ಸಾರ್ವಜನಿಕವಾಗಿ ಬ್ಯಾನ್ ಮಾಡಬಹುದು. ಆದರೆ ಸರ್ಕಾರ ಕಾನೂನಿನ ಭದ್ರತೆ ಕೊಡಲೇಬೇಕು. ಅಷ್ಟು ದೂರ ಹೋಗುವುದು ಬೇಡ. ಕಮಲ್ ಹಾಸನ್ ಅವರಿಗೆ ಒಳ್ಳೆಯ ಹೃದಯ ಇದೆ. ಅವರು ಪುಷ್ಪಕ ವಿಮಾನ ಅಂತ ಸೈಲೆಂಟ್ ಸಿನಿಮಾ ಮಾಡಿದವರು. ಈಗ ಸೈಲೆಂಟ್ ಆಗಿ ಕ್ಷಮೆ ಕೇಳಿದರೆ ಎಲ್ಲವೂ ಬಗೆ ಹರಿಯುತ್ತದೆ ಎಂದು ಹಂಸಲೇಖ ಅವರು ಬುದ್ಧಿವಾದ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ