/newsfirstlive-kannada/media/post_attachments/wp-content/uploads/2024/05/manjumol-boys.jpg)
ಇತ್ತೀಚೆಗೆ ಮಾಲಿವುಡ್​ನಲ್ಲಿ ಬಿಡುಗಡೆಗೊಂಡು ದೊಡ್ಡ ಸಕ್ಸಸ್​ ಕಂಡ ಮಂಜುಮ್ಮೆಲ್ ಬಾಯ್ಸ್​ಗೆ ಇದೀಗ ಸಂಕಷ್ಟ ಎದುರಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜರವರು ಮಂಜುಮ್ಮೆಲ್ ಬಾಯ್ಸ್ ಚಿತ್ರತಂಡಕ್ಕೆ ಕೃತಿಚೌರ್ಯದ ಆರೋಪದ ಮೇಲೆ ಶಾಕ್​ ನೀಡಿದ್ದಾರೆ.
ಹೌದು. ಇಳಯರಾಜರವರು ಮಂಜುಮ್ಮೆಲ್ ಬಾಯ್ಸ್ ಚಿತ್ರತಂಡಕ್ಕೆ ಲೀಗಲ್ ನೋಟಿಸ್​ ಕಳುಹಿಸಿದ್ದಾರೆ. ಈ ಸಿನಿಮಾದಲ್ಲಿ ಅನುಮತಿ ಇಲ್ಲದೇ 'ಗುಣ' ಸಿನಿಮಾದ ಹಾಡು ಬಳಕೆ ಮಾಡಿದ್ದಲ್ಲದೆ, ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೃತಿಚೌರ್ಯದ ಆರೋಪ ಮೇರೆಗೆ ಲೀಗಲ್ ನೋಟಿಸ್ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/05/manjumol-boys-1.jpg)
ಅನುಮತಿ ಪಡೆಯದೆ ಹಾಡು ಬಳಕೆ
'ಕಣ್ಮಣಿ ಅನ್ಬೋದು ಕಾದಲ್' ಸಾಂಗ್ ಬಳಕೆಗೆ ಇಳಯರಾಜರವರು ನೋಟಿಸ್ ನೀಡಿದ್ದಾರೆ. ಅಂದಹಾಗೆಯೇ ಇದು 1991ರಲ್ಲಿ ರಿಲೀಸ್ ಆಗಿ ಹಿಟ್​ ಆಗಿದ್ದ 'ಗುಣ' ಸಿನಿಮಾ ಹಾಡಾಗಿದೆ. ಕಮಲ್ ಹಾಸನ್ ನಟಿಸಿದ್ದ ‘ಗುಣ’ ಸಿನಿಮಾಗೆ ಇಳಯರಾಜ ಸಂಗೀತ ನೀಡಿದ್ದರು. ಆದರೆ ಸಿನಿಮಾ ಚಿತ್ರಕತೆಗೆ ಅನುಗುಣವಾಗಿ ಮಂಜುಮ್ಮೆಲ್ ಬಾಯ್ಸ್ ತಂಡ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಗುಣ ಹಾಡು ಬಳಸಿದ್ದಾರೆ. ಆದರೆ ಈ ಹಾಡು ಮರುಬಳಕೆಗೆ ಅನುಮತಿ ಪಡೆದಿಲ್ಲ ಎಂಬ ಆರೋಪವನ್ನು ಇಳಿಯರಾಜರವರು ಮಾಡಿದ್ದಾರೆ. ಮಂಜುಮ್ಮೆಲ್ ಬಾಯ್ಸ್​ ಪ್ರೊಡ್ಯೂಸರ್​ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
[caption id="attachment_65621" align="alignnone" width="800"]
1991ರಲ್ಲಿ ರಿಲೀಸ್ ಆಗಿ ಹಿಟ್​ ಆಗಿದ್ದ 'ಗುಣ' ಸಿನಿಮಾ[/caption]
ಇದನ್ನೂ ಓದಿ: ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದು ಕಳ್ಳಾಟವಾಡಿದ್ದ ನಟಿ ಹೇಮಾಳ ಬ್ಲಡ್​ ಟೆಸ್ಟ್ ಪಾಸಿಟಿವ್..!
200 ಕೋಟಿ ಬಾಚಿದ ಸಿನಿಮಾ
ಮಂಜುಮ್ಮೆಲ್ ಬಾಯ್ಸ್ ಸಿನಿಮಾ ಫೆಬ್ರವರಿ 24ರಂದು ತೆರೆಕಂಡ ಸಿನಿಮಾ. ನೈಜ ಘಟನೆ ಆಧರಿತ ಸಿನಿಮಾ. ವರ್ಲ್ಡ್​ವೈಡ್​ ಬಾಕ್ಸ್​ ಆಫೀಸ್​ನಲ್ಲಿ 200 ಕೋಟಿ ಗಳಿಸಿರೋದು ವರದಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us