newsfirstkannada.com

ಮಂಜುಮ್ಮೆಲ್ ಬಾಯ್ಸ್​ಗೆ ಸಂಕಷ್ಟ.. ನೈಜ ಘಟನೆಯಾಧಾರಿತ ಸಿನಿಮಾಗೆ ಶಾಕ್​ ಕೊಟ್ಟ ಸಂಗೀತ ಮಾಂತ್ರಿಕ!

Share :

Published May 23, 2024 at 1:55pm

    ಫೆಬ್ರವರಿ 24ರಂದು ತೆರೆಕಂಡ ಸಿನಿಮಾ 'ಮಂಜುಮ್ಮೆಲ್ ಬಾಯ್ಸ್'

    200 ಕೋಟಿ ರೂಪಾಯಿ ಬಾಚಿದ ಸಿನಿಮಾಗೆ ಲೀಗಲ್​ ನೋಟೀಸ್​

    ಖ್ಯಾತ ಸಂಗೀತ ನಿರ್ದೇಶಕ ಇಳಯರಾಜರಿಂದ ಚಿತ್ರತಂಡಕ್ಕೆ ಶಾಕ್​!

 ಇತ್ತೀಚೆಗೆ ಮಾಲಿವುಡ್​ನಲ್ಲಿ ಬಿಡುಗಡೆಗೊಂಡು ದೊಡ್ಡ ಸಕ್ಸಸ್​ ಕಂಡ ಮಂಜುಮ್ಮೆಲ್ ಬಾಯ್ಸ್​ಗೆ ಇದೀಗ ಸಂಕಷ್ಟ ಎದುರಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜರವರು ಮಂಜುಮ್ಮೆಲ್ ಬಾಯ್ಸ್ ಚಿತ್ರತಂಡಕ್ಕೆ ಕೃತಿಚೌರ್ಯದ ಆರೋಪದ ಮೇಲೆ ಶಾಕ್​ ನೀಡಿದ್ದಾರೆ.

ಹೌದು. ಇಳಯರಾಜರವರು ಮಂಜುಮ್ಮೆಲ್ ಬಾಯ್ಸ್ ಚಿತ್ರತಂಡಕ್ಕೆ ಲೀಗಲ್ ನೋಟಿಸ್​ ಕಳುಹಿಸಿದ್ದಾರೆ. ಈ ಸಿನಿಮಾದಲ್ಲಿ ಅನುಮತಿ ಇಲ್ಲದೇ ‘ಗುಣ’ ಸಿನಿಮಾದ ಹಾಡು ಬಳಕೆ ಮಾಡಿದ್ದಲ್ಲದೆ, ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೃತಿಚೌರ್ಯದ ಆರೋಪ ಮೇರೆಗೆ ಲೀಗಲ್ ನೋಟಿಸ್ ನೀಡಿದ್ದಾರೆ.

ಅನುಮತಿ ಪಡೆಯದೆ ಹಾಡು ಬಳಕೆ

‘ಕಣ್ಮಣಿ ಅನ್ಬೋದು ಕಾದಲ್’ ಸಾಂಗ್ ಬಳಕೆಗೆ ಇಳಯರಾಜರವರು ನೋಟಿಸ್ ನೀಡಿದ್ದಾರೆ. ಅಂದಹಾಗೆಯೇ ಇದು 1991ರಲ್ಲಿ ರಿಲೀಸ್ ಆಗಿ ಹಿಟ್​ ಆಗಿದ್ದ ‘ಗುಣ’ ಸಿನಿಮಾ ಹಾಡಾಗಿದೆ. ಕಮಲ್ ಹಾಸನ್ ನಟಿಸಿದ್ದ ‘ಗುಣ’ ಸಿನಿಮಾಗೆ ಇಳಯರಾಜ ಸಂಗೀತ ನೀಡಿದ್ದರು. ಆದರೆ ಸಿನಿಮಾ ಚಿತ್ರಕತೆಗೆ ಅನುಗುಣವಾಗಿ ಮಂಜುಮ್ಮೆಲ್ ಬಾಯ್ಸ್ ತಂಡ ಸಿನಿಮಾದ  ಕ್ಲೈಮ್ಯಾಕ್ಸ್​ನಲ್ಲಿ ಗುಣ ಹಾಡು ಬಳಸಿದ್ದಾರೆ. ಆದರೆ ಈ ಹಾಡು ಮರುಬಳಕೆಗೆ ಅನುಮತಿ ಪಡೆದಿಲ್ಲ ಎಂಬ ಆರೋಪವನ್ನು ಇಳಿಯರಾಜರವರು ಮಾಡಿದ್ದಾರೆ. ಮಂಜುಮ್ಮೆಲ್ ಬಾಯ್ಸ್​ ಪ್ರೊಡ್ಯೂಸರ್​ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

1991ರಲ್ಲಿ ರಿಲೀಸ್ ಆಗಿ ಹಿಟ್​ ಆಗಿದ್ದ ‘ಗುಣ’ ಸಿನಿಮಾ

ಇದನ್ನೂ ಓದಿ: ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದು ಕಳ್ಳಾಟವಾಡಿದ್ದ ನಟಿ ಹೇಮಾಳ ಬ್ಲಡ್​ ಟೆಸ್ಟ್ ಪಾಸಿಟಿವ್..!

200 ಕೋಟಿ ಬಾಚಿದ ಸಿನಿಮಾ

ಮಂಜುಮ್ಮೆಲ್ ಬಾಯ್ಸ್ ಸಿನಿಮಾ ಫೆಬ್ರವರಿ 24ರಂದು ತೆರೆಕಂಡ ಸಿನಿಮಾ. ನೈಜ ಘಟನೆ ಆಧರಿತ ಸಿನಿಮಾ. ವರ್ಲ್ಡ್​ವೈಡ್​ ಬಾಕ್ಸ್​ ಆಫೀಸ್​ನಲ್ಲಿ 200 ಕೋಟಿ ಗಳಿಸಿರೋದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಜುಮ್ಮೆಲ್ ಬಾಯ್ಸ್​ಗೆ ಸಂಕಷ್ಟ.. ನೈಜ ಘಟನೆಯಾಧಾರಿತ ಸಿನಿಮಾಗೆ ಶಾಕ್​ ಕೊಟ್ಟ ಸಂಗೀತ ಮಾಂತ್ರಿಕ!

https://newsfirstlive.com/wp-content/uploads/2024/05/manjumol-boys.jpg

Load More