/newsfirstlive-kannada/media/post_attachments/wp-content/uploads/2025/03/AR-Rahman-hospitalised.jpg)
ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಎ.ಆರ್ ರೆಹಮಾನ್ ಅವರು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತೀಚೆಗೆ ರೆಹಮಾನ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ರೆಹಮಾನ್ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಬೆಳಗ್ಗೆ 7.30ರ ಸುಮಾರಿಗೆ ರೆಹಮಾನ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ರೆಹಮಾನ್ ಅವರನ್ನು ಚೆನ್ನೈ ಗ್ರೀಮ್ಸ್ ರಸ್ತೆಯಲ್ಲಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಇದನ್ನೂ ಓದಿ: ಒಂದು ಸಾಂಗ್‌ಗೆ 3 ಕೋಟಿ, ಬಂಗಲೆ, ಐಷಾರಾಮಿ ಕಾರು, ಸ್ಟುಡಿಯೋ; ಎ.ಆರ್ ರೆಹಮಾನ್ ಆಸ್ತಿ ಎಷ್ಟು ಕೋಟಿ ಗೊತ್ತಾ?
ಎದೆನೋವಿನ ಹಿನ್ನೆಲೆಯಲ್ಲಿ ಎ.ಆರ್ ರೆಹಮಾನ್ ಅವರಿಗೆ ECG, ಎಕೋಕಾರ್ಡಿಯೋಗ್ರಾಮ್ ಸೇರಿ ವಿವಿಧ ಪರೀಕ್ಷೆಗಳನ್ನು ಮಾಡಲಾಗಿದೆ. ಸದ್ಯಕ್ಕೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷೆ ಮಾಡಲಾಗುತ್ತಿದೆ.
ಆಸ್ಪತ್ರೆ ಮೂಲಗಳ ಪ್ರಕಾರ ಚಿಕಿತ್ಸೆ ನೀಡುತ್ತಿರುವ ವೈದ್ಯರು ರೆಹಮಾನ್ ಅವರಿಗೆ ಆಂಜಿಯೋಗ್ರಾಮ್ ಮಾಡುವ ಸಾಧ್ಯತೆ ಇದೆ.
/newsfirstlive-kannada/media/post_attachments/wp-content/uploads/2024/11/AR-RAHMAN.jpg)
ಎ.ಆರ್ ರೆಹಮಾನ್ ಅವರಿಗೆ 58 ವರ್ಷ ವಯಸ್ಸಾಗಿದೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಇತ್ತೀಚೆಗೆ ಪತ್ನಿಯಿಂದ ಡಿವೋರ್ಸ್ ಪಡೆದು ಸುದ್ದಿಯಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us