/newsfirstlive-kannada/media/post_attachments/wp-content/uploads/2025/05/MUSK.jpg)
ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥ (Tesla and SpaceX CEO) ಎಲೋನ್ ಮಸ್ಕ್ ಅವರು, ಟ್ರಂಪ್ ಸರ್ಕಾರದ ಸೇವೆಯಿಂದ ಹೊರ ಬರುತ್ತಿರೋದಾಗಿ ಘೋಷಣೆ ಮಾಡಿದ್ದಾರೆ. ಅಮೆರಿಕ ಸರ್ಕಾರದಲ್ಲಿ ವಿಶೇಷ ಸರ್ಕಾರಿ ಉದ್ಯೋಗಿಯಾಗಿ (SGI: pecial government employee) ನನ್ನ 130 ದಿನಗಳ ಅವಧಿ ಕೊನೆಗೊಳ್ಳುತ್ತಿದೆ. ಅವಕಾಶ ನೀಡಿದ್ದಕ್ಕಾಗಿ ಟ್ರಂಪ್ಗೆ ಧನ್ಯವಾದಗಳು ಎಂದು ಮಸ್ಕ್ ಟ್ವೀಟಿಸಿದ್ದಾರೆ.
ಮಸ್ಕ್ ಕೆಲಸ ಏನಾಗಿತ್ತು..?
ಅಲ್ಲಿನ ಸರ್ಕಾರಿ ದಕ್ಷತೆ ಇಲಾಖೆ (DOGE) ಆಡಳಿತಾತ್ಮಕವಾಗಿ ಬದಲಾಗುತ್ತಿರುತ್ತದೆ. ಅದರಲ್ಲಿ ಟ್ರಂಪ್ಗೆ ಉನ್ನತ ಸಲಹೆಗಾರನಾಗಿ ಮಸ್ಕ್ ಸೇವೆ ಸಲ್ಲಿಸುತ್ತಿದ್ದರು. ಮಸ್ಕ್‌ಗೆ ಸರ್ಕಾರಿ ವೆಚ್ಚವನ್ನು ಕಡಿತಗೊಳಿಸುವ ಮತ್ತು ದಕ್ಷತೆಯನ್ನು ಹೆಚ್ಚಿಸುವ ಜವಾಬ್ದಾರಿ ನೀಡಲಾಗಿತ್ತು. ವಿದೇಶಿ ನೆರವು ಮತ್ತು ಸಾರ್ವಜನಿಕ ಪ್ರಸಾರದ ಮೇಲಿನ ವೆಚ್ಚವನ್ನು ಕಡಿಮೆ ಮಾಡಲು ಮಸ್ಕ್ ಸಲಹೆಗಳನ್ನು ನೀಡ್ತಿದ್ದರು. ಆ ಮೂಲಕ ಮಸ್ಕ್, ಟ್ರಂಪ್ ಸರ್ಕಾರದಲ್ಲಿ ಅಧಿಕಾರದ ವ್ಯವಸ್ಥೆಯನ್ನು ಸುವ್ಯವಸ್ಥೆಗೊಳಿಸಲು ಪ್ರಯತ್ನಿಸುತ್ತಿದ್ದರು.
ಇದನ್ನೂ ಓದಿ: RCB vs PBKS: ಇಂದು ಫೈನಲ್ಗೆ ಎಂಟ್ರಿ ನೀಡೋ ತಂಡ ಯಾವುದು..? ಹೇಗಿದೆ ಪಿಚ್..?
ಅಮೆರಿಕ ಸರ್ಕಾರದಲ್ಲಿ ಅನಾವಶ್ಯಕ ಖರ್ಚು ಕಡಿಮೆ ಮಾಡಲು ಅವಕಾಶ ನೀಡಿದ್ದಕ್ಕಾಗಿ ಅಧ್ಯಕ್ಷ ಟ್ರಂಪ್ಗೆ ಧನ್ಯವಾದ ಹೇಳಲು ಬಯಸುತ್ತೇನೆ. DOGE ಮಿಷನ್ ಕಾಲಾನಂತರದಲ್ಲಿ ಬಲಗೊಳ್ಳುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಟ್ರಂಪ್ ಸರ್ಕಾರದ ಒನ್ ಬಿಗ್ ಬ್ಯೂಟಿಫುಲ್ ಬಿಲ್ ಆ್ಯಕ್ಟ್ (One Big Beautiful Bill Act) ಅನ್ನು ಮಸ್ಕ್ ಟೀಕಿಸಿದ್ದರು. ಬೆನ್ನಲ್ಲೇ ಇಂತಹ ನಿರ್ಧಾರ ಹೊರಬಿದ್ದಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಟ್ರಂಪ್ ಸರ್ಕಾರದ ಬಿಗ್ ಬ್ಯೂಟಿಫುಲ್ ಮಸೂದೆಯು ಬಹು-ಟ್ರಿಲಿಯನ್ ಡಾಲರ್ ತೆರಿಗೆ ವಿನಾಯಿತಿಗಳು, ರಕ್ಷಣಾ ವೆಚ್ಚದಲ್ಲಿ ಭಾರೀ ಹೆಚ್ಚಳ ಮತ್ತು ವಲಸೆ ನಿಯಂತ್ರಣ ಕ್ರಮಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಒಳಗೊಂಡಿದೆ. ಈ ಮಸೂದೆಯು DOGEನ ಕೆಲಸವನ್ನು ದುರ್ಬಲಗೊಳಿಸುತ್ತದೆ ಅಂತಾ ಮಸ್ಕ್ ಟೀಕಿಸಿದ್ದರು. ಮಸ್ಕ್ ನಿರ್ಧಾರವನ್ನು ರಿಪಬ್ಲಿಕನ್ನ ಕೆಲವು ನಾಯಕರು ಬೆಂಬಲಿಸಿದ್ದಾರೆ.
ಇದನ್ನೂ ಓದಿ: Qualifier-1: ಬೆಂಗಳೂರು ತಂಡ ಸಂಪೂರ್ಣ ಬದಲಾಗಲಿದೆಯೇ..? RCB ಸಂಭಾವ್ಯ ಪ್ಲೇಯಿಂಗ್ 11 ಪಟ್ಟಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ