/newsfirstlive-kannada/media/post_attachments/wp-content/uploads/2024/04/pakistan-1.jpg)
ಪತಿಯೋರ್ವ ತನ್ನ ಪತ್ನಿ ಮತ್ತು ಏಳು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಭಯಾನಕ ಘಟನೆಯೊಂದು ಪಾಕಿಸ್ತಾನದಲ್ಲಿ ಬೆಳಕಿಗೆ ಬಂದಿದೆ. ಸಜ್ಜದ್​ ಖೋಖರ್​ ತನ್ನ 42 ವರ್ಷದ ಪತ್ನಿ ಕೌಸರ್​ ಮತ್ತು ಮಕ್ಕಳನ್ನು ಕೊಲೆಗೈದಿದ್ದಾನೆ.
ಸಜ್ಜದ್​ ಖೋಖರ್ ಕೂಲಿ ಕಾರ್ಮಿಕನಾಗಿದ್ದು, 10 ವರ್ಷದೊಳಗಿನ ನಾಲ್ವರು ಪುತ್ರಿಯನ್ನು ಮತ್ತು ಮೂವರು ಪುತ್ರರನ್ನು ಕೊಂದಿದ್ದಾನೆ.
ಪಂಬಾಜ್​ ಪೊಲೀಸರ ಮಹಿತಿಯಂತೆ, ಕೂಲಿ ಕಾರ್ಮಿಕ ಮಾನಸಿಕವಾಗಿ ತೊಂದರೆಗೀಡಾಗಿದ್ದಾನೆ. ಆತ ಆಗಾಗ ತನ್ನ ಹೆಂಡತಿ ಜೊತೆಗೆ ಜಗಳ ಮಾಡುತ್ತಿದ್ದನು. ಸದ್ಯ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಪತ್ನಿಯ ಕುಟುಂಬದವರು ಆತನ ಮೇಲೆ ಕೇಸ್​ ನೀಡಿದ್ದಾರೆ.
ಇದನ್ನೂ ಓದಿ: 4 ತಿಂಗಳ ಹಿಂದೆ ಮದುವೆ.. ನಾಯಂಡಹಳ್ಳಿ ಫ್ಲೈ ಓವರ್​ನಿಂದ ಜಿಗಿದು ವಿವಾಹಿತ ಯುವಕ ಆತ್ಮಹತ್ಯೆ
ಕೂಲಿ ಕಾರ್ಮಿಕ ಸಜ್ಜದ್​ ಖೋಖರ್ ತನ್ನ ಪತ್ನಿ ಮತ್ತು 7 ಮಕ್ಕಳನ್ನು ಕೊಂದಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಕುಟುಂಬವನ್ನು ನಿರ್ವಹಿಸಲು ಸಾಧ್ಯವಾಗದ ಕಾರಣ 8 ಜನರನ್ನು ಕೊಂಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us