/newsfirstlive-kannada/media/post_attachments/wp-content/uploads/2025/03/ENERGY-DRINK-SHAMI.jpg)
ಭಾರತೀಯ ಕ್ರಿಕೆಟ್ ಟೀಂನ ಬೆಂಕಿ ಬೌಲರ್ ಎಂದೇ ಹೆಸರಾಗಿರುವ ಮೊಹಮ್ಮದ ಶಮಿ ಭಾರತ ಮತ್ತು ಆಸ್ಟ್ರೇಲಿಯಾದ ನಡುವೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಎನರ್ಜಿ ಡ್ರಿಂಕ್ ಕುಡಿದಿದ್ದು ದೊಡ್ಡ ಸುದ್ದಿಯಾಗಿತ್ತು. ಈಗ ಇದೇ ಸುದ್ದಿಯಿಂದಾಗಿ ಮೊಹಮ್ಮದ ಶಮಿ ವಿರುದ್ಧ ಮುಸ್ಲಿಂ ಸಮುದಾಯದ ಮೌಲ್ವಿಗಳು ಸಿಡಿದೆದ್ದಿದ್ದಾರೆ. ಇದು ಇಸ್ಲಾಂ ಸಮುದಾಯವು ಒಪ್ಪುವಂತ ಕಾರ್ಯವಲ್ಲ ಎಂದು ವಾಗ್ದಾಳಿ ಮಾಡಿದ್ದಾರರೆ
ಅಸಲಿಗೆ ಮೌಲ್ವಿಗಳು ಹೀಗೆ ಮೊಹಮದ್ ಶಮಿ ವಿರುದ್ಧ ಸಿಡಿದೇಳಲು ಕಾರಣ ಸದ್ಯ ಒಂದು ತಿಂಗಳ ರೋಜಾ ಆಚರಣೆ ಚಾಲ್ತಿಯಲ್ಲಿರುವುದಕ್ಕೆ. ಪ್ರತಿಯೊಬ್ಬ ಮುಸ್ಲಿಂ ಧರ್ಮಿಯೂ ಇದನ್ನು ಕಡ್ಡಾಯವಾಗಿ ಪಾಲಿಸುತ್ತಾರೆ. ಇಡೀ ದಿನ ಉಪವಾಸವಿದ್ದು, ಮುಂಜಾನೆ ರೋಜಾ ಮುರಿಯುತ್ತಾರೆ. ಆದರೆ ಮೊಹಮದ್ ಶಮಿ ಈ ರಂಜಾನ್ ಜಾರಿಯಲ್ಲಿದ್ದ ದಿನಗಳಲ್ಲಿಯೇ ಹೀಗೆ ಎನರ್ಜಿ ಡ್ರಿಂಕ್ ಕುಡಿದಿದ್ದು ಮೌಲಿಗಳನ್ನು ಕೆರಳಿಸಿದೆ.
ರೋಜಾವನ್ನು ಆನುಸರಿಸಲು ಸಾಧ್ಯವಾಗದ ರೋಗಿಗಳು, ವಯಸ್ಸಾದವರು ಹಾಗೂ ಮಕ್ಕಳಿಗೆ ವಿನಾಯಿತಿ ಇದೆ. ಆದ್ರೆ ಕ್ರಿಕೆಟ್ ಆಡಲು ಶಕ್ತವಿರೋ ಮೊಹಮದ್ ಶಮಿ ರೋಜಾ ಪಾಲಿಸದಿರೋದು ಇಸ್ಲಾಂ ಧರ್ಮ ಒಪ್ಪಿಕೊಳ್ಳುವುದಿಲ್ಲ. ಶಮಿ ಎನರ್ಜಿ ಡ್ರಿಂಕ್ ಕುಡಿಯುವುದನ್ನು ಎಲ್ಲರೂ ನೋಡಿದ್ದಾರೆ.ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಮೌಲಿಗಳ ಈ ಕೋಪ ವಿನಾಕಾರಣವಾದದ್ದು ಎಂದು ನೆಟ್ಟಿಗರು ವಾಗ್ದಾಳಿ ನಡೆಸುತ್ತಿದ್ದಾರೆ. ದೇಶದ ಪರವಾಗಿ ಆಟ ಆಡುತ್ತಿರುವ ವ್ಯಕ್ತಿಗೂ ಜಾತಿಯ ಸಂಕೋಲೆಯಲ್ಲಿ ಬಂಧಿಸೋದು ಎಷ್ಟರ ಮಟ್ಟಿಗೆ ಸರಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿಉತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ