newsfirstkannada.com

ರಾಮಲಲ್ಲಾ ಪ್ರತಿಷ್ಠಾಪನೆಯಂದು ಹುಟ್ಟಿದ ಮಗುವಿಗೆ ‘ರಾಮ್ ರಹೀಮ್​’ ಎಂದು ಹೆಸರಿಟ್ಟ ಮುಸ್ಲಿಂ ದಂಪತಿ​!

Share :

Published January 23, 2024 at 1:59pm

Update January 23, 2024 at 2:09pm

  ರಾಮ ಮಂದಿರ ಉದ್ಘಾಟನೆಯಂದು ಹುಟ್ಟಿದ ಕಂದಮ್ಮ

  ಮೊಮ್ಮಗನಿಗೆ ‘ರಾಮ್​ ರಹೀಮ್’​ ಎಂದು ಹೆಸರಿಟ್ಟ ಅಜ್ಜಿ

  ಹಿಂದೂ-ಮುಸ್ಲಿಂ ಐಕ್ಯತೆಯ ಸಂದೇಶವನ್ನು ಸಾರಿದ ದಂಪತಿ

ಉತ್ತರ ಪ್ರದೇಶ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಂಡಿದೆ. ರಾಮಲಲ್ಲಾನ ಪ್ರತಿಷ್ಠಾಪನೆ ನಡೆದಿದೆ. ಅದರಂತೆಯೇ ನಿನ್ನೆ ಜನಿಸಿದ ಮಕ್ಕಳಿಗೆ ಪೋಷಕರು ‘ರಾಮ’ ಎಂದು ಹೆಸರಿಟ್ಟಿರುವ ಹಲವು ಘಟನೆಗಳು ಬೆಳಕಿಗೆ ಬಂದಿದೆ. ಆದರಲ್ಲೊಂದು ಅಚ್ಚರಿ ಎಂದರೆ ಮುಸ್ಲಿಂ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ ‘ರಾಮ್​ ರಹೀಮ್​’ ಎಂದು ಹೆಸರಿಟ್ಟಿದ್ದಾರೆ.

ಫರ್ಜಾನಾ ಎಂಬ ಉತ್ತರ ಪ್ರದೇಶದ ಫಿರೋಜಾಬಾದ್​ ಮಹಿಳೆ ಸೋಮವಾರದಂದು ಜಿಲ್ಲಾ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮುಸ್ಲಿಂ ದಂಪತಿ ಹಿಂದೂ-ಮುಸ್ಲಿಂ ಐಕ್ಯತೆಯ ಸಂದೇಶವನ್ನು ಸಾರುವ ಸಲುವಾಗಿ ಮಗುವಿನ ‘ರಾಮ್​ ರಹೀಮ್’​ ಎಂದು ಹೆಸರನಿಟ್ಟಿದ್ದಾರೆ.

ಡಾ. ನವೀನ್​ ಜೈನ್​ ಈ ಬಗ್ಗೆ ಮಾತನಾಡಿದ್ದು, ‘ತಾಯಿ ಮತ್ತು ಮಗು ಇಬ್ಬರೂ ಚೆನ್ನಾಗಿದ್ದಾರೆ’ ಎಂದು ಹೇಳಿದ್ದಾರೆ. ಮಗುವಿನ ಅಜ್ಜಿ ಹುಸ್ನಾ ಬಾನು ಮಗುವಿಗೆ ‘ರಾಮ್​ ರಹೀಮ್​’ ಎಂದು ಹೆಸರನಿಟ್ಟಿದ್ದಾರೆ. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಲಲ್ಲಾ ಪ್ರತಿಷ್ಠಾಪನೆಯಂದು ಹುಟ್ಟಿದ ಮಗುವಿಗೆ ‘ರಾಮ್ ರಹೀಮ್​’ ಎಂದು ಹೆಸರಿಟ್ಟ ಮುಸ್ಲಿಂ ದಂಪತಿ​!

https://newsfirstlive.com/wp-content/uploads/2024/01/Firozabad.jpg

Load More