/newsfirstlive-kannada/media/post_attachments/wp-content/uploads/2025/06/500_NOTES.jpg)
ನವದೆಹಲಿ: ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು ಎಂದರೆ 500 ರೂಪಾಯಿ ನೋಟುಗಳ ಚಲಾವಣೆಯನ್ನು ನಿಲ್ಲಿಸಬೇಕು ಎಂದು ಆಂಧ್ರಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು ಹೇಳಿದ್ದಾರೆ.
ಆಂಧ್ರಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು ಸಂದರ್ಶನ ಒಂದರಲ್ಲಿ ಮಾತನಾಡಿ, ದೊಡ್ಡ ದೊಡ್ಡ ಕರೆನ್ಸಿ ನೋಟುಗಳನ್ನು ರದ್ದು ಪಡಿಸಬೇಕು. ಇದರಿಂದ ದೇಶದಲ್ಲಿ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತಡೆಯಬಹುದು. 100, 200 ರೂಪಾಯಿ ಒಳಗೆ ಮಾತ್ರ ನೋಟುಗಳು ಚಲಾವಣೆಯಲ್ಲಿ ಇರಬೇಕು. ಆವಾಗ ಮಾತ್ರ ನಾವು ಭ್ರಷ್ಟಾಚಾರ ನಿರ್ಮೂಲನೆ ಮಾಡಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ:26 ಜೀವ ಹೋಯ್ತು, PM ಮೋದಿ ರಾಜೀನಾಮೆ ಕೇಳಿದ್ವಾ..? ಸಿಎಂ, ಡಿಸಿಎಂ ಪರ ಸತೀಶ್ ಜಾರಕಿಹೊಳಿ ಬ್ಯಾಟಿಂಗ್
2016ರ ನವೆಂಬರ್ನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 500 ಮತ್ತು 1,000 ರೂಪಾಯಿ ನೋಟುಗಳನ್ನು ನಿಷೇಧ ಮಾಡಿತು. ಇದರಿಂದ ಕಪ್ಪು ಹಣ ಹಾಗೂ ಭ್ರಷ್ಟಾಚಾರವನ್ನು ಎದುರಿಸುವ ಗುರಿಯನ್ನು ಈ ನೋಟು ರದ್ದತಿ ಹೊಂದಿತ್ತು. ಈಗ ಸಂಪತ್ತು ಸೃಷ್ಟಿ ಆಗುತ್ತಿದೆ. ಆದರೆ ಇದು ಉಳ್ಳವರು, ಇಲ್ಲದವರು ಎನ್ನುವ ಅಂತರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.
500 ರೂಪಾಯಿ ನೋಟ್‌ಗಳು 2026ಕ್ಕೆ ಸ್ಥಗಿತಗೊಳಿಸಲಾಗುತ್ತಾ?. ಕ್ಯಾಪಿಟಲ್ ಟಿವಿ ಅನ್ನೋ ಯೂಟ್ಯೂಬ್ ಚಾನೆಲ್‌ನಲ್ಲಿ ಹೀಗೊಂದು ವಿಡಿಯೋ ಅಪ್ಲೋಡ್ ಮಾಡಿತ್ತು. ವಿಡಿಯೋದಲ್ಲಿ 2026 ಮಾರ್ಚ್‌ನಲ್ಲಿ 500 ರೂಪಾಯಿ ನೋಟ್‌ಗಳನ್ನು ಸ್ಥಗಿತ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಇದರ ಬೆನ್ನಲ್ಲೇ ಸಿಎಂ ಚಂದ್ರಬಾಬು ನಾಯ್ಡು ಅವರು ಸಂದರ್ಶನವೊಂದರಲ್ಲಿ ದೊಡ್ಡ ಕರೆನ್ಸಿ ನೋಟುಗಳನ್ನು ರದ್ದುಗೊಳಿಸಿದರೆ ಭಷ್ಟಾಚಾರ ತಡೆಯಬಹುದು ಎಂದು ಹೇಳಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ