ಬೀದಿ ಬದಿ ಕಟ್​ ಮಾಡಿಟ್ಟ ಹಣ್ಣು ತಿನ್ನೋರೇ ಎಚ್ಚರ! ಸಾರ್ವಜನಿಕರು ಓದಲೇಬೇಕಾದ ಸ್ಟೋರಿ

author-image
Ganesh Nachikethu
Updated On
ಬೀದಿ ಬದಿ ಕಟ್​ ಮಾಡಿಟ್ಟ ಹಣ್ಣು ತಿನ್ನೋರೇ ಎಚ್ಚರ! ಸಾರ್ವಜನಿಕರು ಓದಲೇಬೇಕಾದ ಸ್ಟೋರಿ
Advertisment
  • ರಾಜಧಾನಿಯಲ್ಲಿ ಹೆಚ್ಚಾಯ್ತು ಕಾಲರಾ ರೋಗದ ಭೀತಿ
  • ಕಾಲರಾ ಓಟಕ್ಕೆ ಬ್ರೇಕ್​ ಹಾಕಲು ಬಿಬಿಎಂಪಿ ಪ್ಲ್ಯಾನ್​​!
  • ಇನ್ಮುಂದೆ ಬೀದಿ ಬದಿ ಫ್ರೂಟ್ಸ್ ಕತ್ತರಿಸಿ ಇಟ್ರೆ ಎಚ್ಚರ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗ್ತಾಯಿದೆ. ಇದರಿಂದ ಬೇಸತ್ತ ಸಿಟಿ ಮಂದಿ ಹಣ್ಣು, ಜ್ಯೂಸ್​​ ಮೊರೆ ಹೊಗ್ತಿದ್ದಾರೆ. ಆದ್ರೆ, ಇನ್ಮುಂದೆ ಬಿದಿ ಬದಿಯಲ್ಲಿ ನೀವು ಗಂಟೆಗಟ್ಟಲೇ ತೆರೆದಿಟ್ಟ ಹಣ್ಣು ತಿನ್ನೋ ಹಾಗ್​ ಇಲ್ಲ. ಇದು ವ್ಯಾಪಾರಿಗಳಿಗೆ ತಲೆನೋವಾಗೋದಂತು ಪಕ್ಕಾ.

ಬನಾನಾ.. ಪಪ್ಪಾಯ.. ಆ್ಯಪಲ್​​.. ಪೈನಾಪಲ್.. ಈ ಮಿಕ್ಸಡ್​​ ಫ್ರೂಟ್ಸ್ ಅಂದ್ರೆ ಬಹುತೇಕರಿಗೆ ಅಚ್ಚುಮೆಚ್ಚು. ಬಾಯಿ ಚಪ್ಪರಿಸಿ ತಿನ್ತಾರೆ. ಆದ್ರೆ ಇನ್ಮುಂದೆ ಕಟ್​ ಮಾಡಿರೋ ಹಣ್ಣು ತಿನ್ನೋ ಹಾಗಿಲ್ಲ. ವೈಟ್​​ ಮಾಡ್ಬೇಕಂತೆ. ಹೀಗಂತಾ ಹೇಳ್ತಿರೋದು ಬಿಬಿಎಂಪಿ..!

ಕಾಲರಾ ಅನ್ನೋ ವಿಚಿತ್ರ ರೋಗ ಕಾಣಿಸಿಕೊಳ್ತಿದ್ದಂತೆ ಎಚ್ಚೆತ್ತ ಬಿಬಿಎಂಪಿ ಬೀದಿ ಬದಿ ವ್ಯಾಪಾರಿಗಳು ಹಣ್ಣುಗಳನ್ನ ಮೊದ್ಲೇ ಕಟ್​ ಮಾಡಿ ಮಾರಾಟ ಮಾಡೋದನ್ನ ಬ್ಯಾನ್​ ಮಾಡಲು ಚಿಂತನೆ ನಡೆಸಿದೆ. ಹೀಗೆ ಸಿಕ್ಕ ಸಿಕ್ಕಲ್ಲಿ ಮೊದ್ಲೇ ಕಟ್​​ ಮಾಡಿರೋ ಇಂತಹ ಫ್ರೂಟ್ಸ್​​​ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದ್ರ ಬದಲು ಗ್ರಾಹಕರು ಬಂದಾಗ ಕಟ್​ ಮಾಡಿ ಕೊಡ್ಬೇಕು. ಜನರ ಡಿಮ್ಯಾಂಡ್​​ಗೆ ತಕ್ಕನಾಗಿ ಸಪ್ಲೈ ಮಾಡ್ಬೇಕು ಅಂತ ಬಿಬಿಎಂಪಿ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಒಟ್ಟಾರೆ, ಕಲುಷಿತ ನೀರು, ಕಟ್ ಮಾಡಿದ ಹಣ್ಣುಗಳನ್ನ ತಿನ್ನೋದ್ರಿಂದ ಕಾಲಾರ ಬರುತ್ತೆ. ಇದ್ರಿಂದ ತಪ್ಪಿಸಿಕೊಳ್ಳಲು, ಕಾಲಾರದ ಕರಾಳ ಓಟಕ್ಕೆ ಬ್ರೇಕ್ ಹಾಕಲು ಬಿಬಿಎಂಪಿ ಪ್ಲಾನ್ ಮಾಡ್ಕೊಂಡಿದೆ. ಆದ್ರೆ ಈ ನಿಯಮ ಜನರ ಸುರಕ್ಷತೆಗಾಗಿ ಕಟ್ಟುನಿಟ್ಟಾಗಿ ಪಾಲನೆಯಾಗಬೇಕಷ್ಟೇ.

ಇದನ್ನೂ ಓದಿ:ಸೌತ್​ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು; ಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್​​, ಭಾರತ ಜಿದ್ದಾಜಿದ್ದಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment