/newsfirstlive-kannada/media/post_attachments/wp-content/uploads/2024/10/Gold-Rate.jpg)
ಎಲ್ಲರೂ ಕಷ್ಟಪಟ್ಟು ದುಡಿಯುತ್ತಾರೆ. ಇವತ್ತಿನ ಜೀವನಕ್ಕೆ ಎಷ್ಟು ಬೇಕೋ ಅಷ್ಟು ಖರ್ಚು ಮಾಡಿ ರಿಟೈರ್ಮೆಂಟ್ ಲೈಫ್ಗೆ ಒಂದಷ್ಟು ಸೇವಿಂಗ್ಸ್ ಮಾಡಿಕೊಳ್ಳುತ್ತಾರೆ. ಅದು ಸೇವಿಂಗ್ಸ್ ಆದ್ರೂ ಆಗಿರಬಹುದು ಅಥವಾ ಹೂಡಿಕೆ ಆಗಿರಬಹುದು. ಯಾವುದರಲ್ಲಿ ಹೆಚ್ಚು ಹೂಡಿಕೆ ಮಾಡಬೇಕು ಅನ್ನೋದು ಕೂಡ ಸಹಜವಾದ ಪ್ರಶ್ನೆ.
ಯುವಕರು ಹೆಚ್ಚು ಷೇರ್‌ಗಳಲ್ಲಿ ಹಣ ಹೂಡಲು ಇಷ್ಟ ಪಡುತ್ತಾರೆ. ಇನ್ನೂ ಹಲವರು ಮ್ಯೂಚವಲ್ ಫಂಡ್ಸ್ ಅಥವಾ ರಿಯಲ್ ಎಸ್ಟೇಟ್ನಲ್ಲೂ ಇನ್ವೆಸ್ಟ್ ಮಾಡಬಹುದು. ಈಗಂತೂ ಹಣ ಹೂಡಿಕೆ ಮಾಡಲು ಚಿನ್ನ ಬೆಸ್ಟ್. ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡಲು ಎಂದೂ ಹಿಂದೇಟು ಹಾಕುವುದಿಲ್ಲ. ಇದಕ್ಕೆ ಕಾರಣ ನೀವು ಹೂಡಿಕೆ ಮಾಡಿದ ಹಣ ಡಬಲ್ ರಿಟರ್ನ್ಸ್ ತರುತ್ತದೆ. ಆದರೆ, ಚಿನ್ನ ಖರೀದಿ ಮಾಡೋರು ಎಚ್ಚರ ವಹಿಸಲೇಬೇಕು. ನೀವು ಬಂಗಾರ ಖರೀದಿ ಮಾಡೋ ಮುನ್ನ ಈ ವಿಷಯಗಳು ತಿಳಿದುಕೊಳ್ಳಲೇಬೇಕು.
ಕೇಂದ್ರದಿಂದ ಮಹತ್ವದ ಘೋಷಣೆ
ಹಬ್ಬದ ಸೀಸನ್ನಲ್ಲಿ ಚಿನ್ನ ಖರೀದಿ ಮಾಡೋರಿಗೆ ಕೇಂದ್ರ ಸರ್ಕಾರ ಮಹತ್ವದ ಎಚ್ಚರಿಕೆ ನೀಡಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ತಾಜಾ ಹಾಲ್‌ಮಾರ್ಕ್ ಹೊಂದಿರೋ ಚಿನ್ನ ಮಾತ್ರ ಖರೀದಿ ಮಾಡಲು ಸೂಚನೆ ನೀಡಿದೆ. ಬೆಳ್ಳಿ ಖರೀದಿಸುವವರು ಕೂಡ ಹಾಲ್ ಮಾರ್ಕ್ ಇರೋ ಆಭರಣಗಳನ್ನೇ ಖರೀದಿಸಬೇಕು. ಯಾವುದೇ ಹಾಲ್ ಮಾರ್ಕ್ ಇಲ್ಲದಿದ್ದರೆ, ನೀವು ಮೋಸ ಹೋಗಬಹುದು ಅನ್ನೋ ಮಾಹಿತಿ ಹೊರಬಿದ್ದಿದೆ.
ಏನಿದು ಹಾಲ್‌ಮಾರ್ಕ್?
ಚಿನ್ನದಲ್ಲಿ 24 ಕ್ಯಾರೆಟ್, 22 ಕ್ಯಾರೆಟ್ ಅಥವಾ 18 ಕ್ಯಾರೆಟ್ ಇದೆ. ಇದನ್ನು ಗಮನಿಸಿ ಚಿನ್ನ ಖರೀದಿ ಮಾಡಬೇಕು. ಚಿನ್ನದ ಹಾಲ್‌ಮಾರ್ಕಿಂಗ್‌ನಲ್ಲಿ ಮೂರು ಅಂಶಗಳಿವೆ. BIS ಸ್ಟ್ಯಾಂಡರ್ಡ್ ಮಾರ್ಕ್, ಚಿನ್ನದ ಶುದ್ಧತೆ, 6 ಅಂಕಿ ಆಲ್ಫಾನ್ಯೂಮರಿಕ್ HUID ಕೋಡ್ ಇರಲಿದೆ. ಇವು ಇದ್ದರೆ ಮಾತ್ರ ಚಿನ್ನ ಖರೀದಿ ಮಾಡಿ.
ಬಂಗಾರದ ಬೆಲೆ ಏರಿಕೆ
ದೀಪಾವಳಿ ಹಬ್ಬದ ನಡುವೆ ಚಿನ್ನದ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಬುಧವಾರ ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ 650 ರೂ ಏರಿಕೆ ಕಂಡಿದೆ. ಇದರ ಪರಿಣಾಮ 10 ಗ್ರಾಂ ಚಿನ್ನದ ದರ 80,450 ರೂ. ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ