Advertisment

ಮಾಜಿ ಡಾನ್ ಮುತ್ತಪ್ಪ ರೈ ಆಸ್ತಿ ವಿವಾದ ಇತ್ಯರ್ಥ; ಮಾಜಿ ಡಾನ್ ಎರಡನೇ ಪತ್ನಿಗೆ ಬಂದ ಆಸ್ತಿ ಎಷ್ಟು?

author-image
Gopal Kulkarni
Updated On
ಮಾಜಿ ಡಾನ್ ಮುತ್ತಪ್ಪ ರೈ ಆಸ್ತಿ ವಿವಾದ ಇತ್ಯರ್ಥ; ಮಾಜಿ ಡಾನ್ ಎರಡನೇ ಪತ್ನಿಗೆ ಬಂದ ಆಸ್ತಿ ಎಷ್ಟು?
Advertisment
  • ಕೊನೆಗೂ ಇತ್ಯರ್ಥಗೊಂಡ ಮಾಜಿ ಡಾನ್ ಮುತ್ತಪ್ಪ ರೈ ಆಸ್ತಿ ವಿವಾದ
  • ರೈ ನಿಧನದ ಬಳಿಕ ಆಸ್ತಿಯಲ್ಲಿ ಪಾಲು ಕೇಳಿ ದಾವೆ ಹೂಡಿದ್ದ 2ನೇ ಪತ್ನಿ
  • 2ನೇ ಪತ್ನಿ ಅನುರಾಧಗೆ 100 ಕೋಟಿ ಆಸ್ತಿ ನೀಡಲು ಮುಂದಾದ ರೈ ಪುತ್ರರು

ಬೆಂಗಳೂರಿನ 19ನೇ ಸಿಟಿ ಸಿವಿಲ್ ಹಾಗೂ ಸೆಷನ್​ ಕೋರ್ಟ್​ನಲ್ಲಿ ಮಾಜಿ ಡಾನ್ ಮುತ್ತಪ್ಪ ರೈ ಆಸ್ತಿ ವಿವಾದ ಇತ್ಯರ್ಥಗೊಂಡಿದೆ. ಲೋಕ ಅದಾಲತ್ ಮೂಲಕ ಕೋರ್ಟ್​ನಲ್ಲಿ ಸಂಧಾನ ಮಾಡಿ ಆಸ್ತಿ ವಿವಾದವನ್ನು ಬಗೆಹರಿಸಲಾಗಿದೆ. ಮುತ್ತಪ್ಪ ರೈ ಆಸ್ತಿಯಲ್ಲಿ ಪಾಲು ಕೇಳಿ ರೈ ಅವರ ಎರಡನೇ ಪತ್ನಿ ಅನುರಾಧಾ ರೈ ಕೋರ್ಟ್ ಮೆಟ್ಟಿಲು ಏರಿದ್ದರು. ಈಗ ಆ ವಿವಾದ ಇತ್ಯರ್ಥಗೊಂಡಿದೆ.

Advertisment

ಇದನ್ನೂ ಓದಿ:ರಾಮನಗರ ತೋಟದ ಮನೆಯಲ್ಲಿ ಮಹತ್ವದ ಬೆಳವಣಿಗೆ; ಜೆಡಿಎಸ್ ಸಭೆಯಲ್ಲಿ ಒಮ್ಮತದ ನಿರ್ಧಾರ..!

publive-image

ಮುತ್ತಪ್ಪ ರೈ, ತಾವು ಮೃತಪಡುವ ಒಂದು ವರ್ಷದ ಹಿಂದೆ ಅಂದ್ರೆ 2019ರಲ್ಲಿ ಆಸ್ತಿಗೆ ಸಂಬಂಧಿಸಿದಂತೆ ವಿಲ್ ಮಾಡಿಟ್ಟಿದ್ದರು. ವಕೀಲ ನಾರಾಯಣಸ್ವಾಮಿಯವರನ್ನು ವಿಲ್ ಎಕ್ಸಿಕ್ಯೂಟರ್ ಆಗಿ ನೇಮಿಸಿ, ಅಡ್ವೋಕೇಟ್​ ಗೀತಾರಾಜ್ ಎಂಬುವವರ ಮೂಲಕ ಆಸ್ತಿಗೆ ಸಂಬಂಧಿಸಿದಂತೆ ವಿಲ್ ಬರೆಸಿದ್ರು. ಸಾವಿರ ಕೋಟಿಗೂ ಅಧಿಕ ಮೌಲ್ಯದ ಆಸ್ತಿಗೆ ಸುಮಾರು 41 ಪುಟಗಳ ವಿಲ್ ಬರೆಸಿದ್ದ ಮುತ್ತಪ್ಪ ರೈ, ಪುತ್ರರಾದ ರಾಕಿ ರೈ, ರಿಕ್ಕಿ ರೈ, ಸಹೋದರನ ಪುತ್ರ ಅಶ್ವಿನ್ ರೈ, ಎರಡನೇ ಪತ್ನಿ ಅನುರಾಧ ರೈ ಸೇರಿ ಮನೆಗೆಲಸದವರ ಬಗ್ಗೆಯೂ ಉಲ್ಲೇಖ ಮಾಡಿದ್ದರು.

ಇದನ್ನೂ ಓದಿ:ಷಡ್ಯಂತ್ರ ಮಾಡಿದವರ ಹೆಸರು ಜೈಲಿನ ಗೋಡೆ ಮೇಲೆ ಬರೆದು ಬಂದಿದ್ದೀನಿ.. ಬಿ ನಾಗೇಂದ್ರ ಕಣ್ಣೀರು

Advertisment

2020ರಲ್ಲಿ ಮುತ್ತಪ್ಪ ರೈ ನಿಧನರಾದ ಬಳಿಕ ಕೋರ್ಟ್​ನಲ್ಲಿ ಆಸ್ತಿಯಲ್ಲಿ ಪಾಲು ಕೇಳಿ ರೈ ಅವರ ಎರಡನೇ ಪತ್ನಿ ಅನುರಾಧ ದಾವೆ ಹೂಡಿದ್ದರು. ಮುತ್ತಪ್ಪ ರೈ ಪುತ್ರರಾದ ರಾಕಿ ರೈ, ರಿಕ್ಕಿ ರೈರನ್ನು ಪ್ರತಿವಾದಿಗಳಾಗಿ ಮಾಡಿ ದಾವೆ ಹೂಡಿದ್ದರು. ಸದ್ಯ ಕಾಂಪ್ರಮೈಸ್ ಪಿಟಿಷನ್ ಮೂಲಕ ಆಸ್ತಿ ವಿವಾದ ಇತ್ಯರ್ಥಗೊಂಡಿದೆ. ಸುಮಾರು ನೂರು ಕೂಟಿ ರೂಪಾಯಿ ಮೌಲ್ಯದ ಆಸ್ತಿಯನ್ನ ಮುತ್ತಪ್ಪ ರೈ ಎರಡನೇ ಪತ್ನಿಗೆ ನೀಡಲಾಗಿದೆ. ಕೋರ್ಟ್​ ಸಂಧಾನದ ಮೂಲಕ ಅನುರಾಧ ರೈ ಅವರಿಗೆ ಮುತ್ತಪ್ಪ ರೈ ಮಕ್ಕಳಾದ ರಿಕ್ಕಿ ರೈ, ರಾಕಿ ರೈ ನೀಡಿರುವ ಆಸ್ತಿ ವಿವಿರ ಹೀಗಿದೆ

*ಏಳು ಕೋಟಿ ಹಣ
*ಮಂಡ್ಯದ ಪಾಂಡವಪುರದ ಬಳಿ 22 ಎಕರೆ ಜಮೀನು
*ಮೈಸೂರಿನಲ್ಲಿ 4800 ಚದರಡಿ ನಿವೇಶನ ಹಾಗೂ ನಿವೇಶನದಲ್ಲಿನ ಮನೆ
*ನಂದಿಬೆಟ್ಟ ಬಳಿಯ ಕೆಂಪತಿಮ್ಮನಹಳ್ಳಿಯಲ್ಲಿ ಐದೂವರೆ ಎಕರೆ ಜಮೀನು

ಸದ್ಯ ಅನುರಾಧ ರೈ ಕೋರ್ಟ್‌ ಮೂಲಕ ಮುತ್ತಪ್ಪ ರೈ ಪುತ್ರರಿಂದ ಪಡೆದಿರುವ ಆಸ್ತಿ ಮೌಲ್ಯ ನೂರು ಕೋಟಿ ಬೆಲೆಬಾಳುತ್ತೆ ಎನ್ನಲಾಗ್ತಿದೆ.

Advertisment
Advertisment
Advertisment
Advertisment