/newsfirstlive-kannada/media/post_attachments/wp-content/uploads/2025/06/Muttaiah-1.jpg)
ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಹಾಗೂ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳಿಧರನ್ ಅವರು ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ತೆರೆಯಲು ಉದ್ದೇಶಿಸಿದ್ದ ತಂಪು ಪಾನೀಯ ಕೈಗಾರಿಕೆಗೆ (Ceylon Beverage Can Pvt Ltd) ಮೇಲಿಂದ ಮೇಲೆ ವಿಘ್ನಗಳು ಬರುತ್ತಲೇ ಇದ್ದವು. ಇದೀಗ ವಿಘ್ನಗಳು ನಿವಾರಣೆಯಾಗಿ ಮುರಳೀಧರನ್ ಅವರ ಕಂಪನಿ ಧಾರವಾಡಕ್ಕೆ ಬರೋದು ಪಕ್ಕಾ ಎಂದೇ ಹೇಳಲಾಗುತ್ತಿದ್ದು, ಇದರಿಂದ ಮತ್ತಷ್ಟು ಉದ್ಯೋಗ ಸೃಷ್ಟಿಯಾಗಲಿದೆ.
ಇದನ್ನೂ ಓದಿ: ಶತಕ ಬಾರಿಸ್ತಿದ್ದಂತೆ ಪಲ್ಟಿ ಹೊಡಿ ಎಂದ ಗವಾಸ್ಕರ್.. ಪಂತ್ ಪ್ರತಿಕ್ರಿಯೆ ಹೇಗಿತ್ತು? ಹೃದಯಗೆದ್ದ ವಿಡಿಯೋ..!
ಕಳೆದ ಒಂದೂವರೆ ವರ್ಷದ ಹಿಂದೆಯೇ ಮುತ್ತಯ್ಯ ಮುರಳೀಧರನ್ ಅವರು ತಮ್ಮ ಮಾಲೀಕತ್ವದ ತಂಪು ಪಾನೀಯ ಕಂಪನಿ ತೆರೆಯಲು ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ 39 ಎಕರೆ ಜಮೀನು ನೋಡಿಕೊಂಡು ಹೋಗಿ, ಆ ಬಗ್ಗೆ ಕೆಐಎಡಿಬಿ ಮತ್ತು ಕೈಗಾರಿಕಾ ಸಚಿವರೊಂದಿಗೆ ಒಪ್ಪಂದವನ್ನೂ ಮಾಡಿಕೊಂಡು ಹೋಗಿದ್ದರು. ಈ ಕೈಗಾರಿಕೆಗೆ ಸಮರ್ಪಕ ನೀರು ಪೂರೈಕೆ ಮಾಡಲು ಆಗುವುದಿಲ್ಲ. ಈ ಭಾಗದಲ್ಲಿ ನೀರಿನ ಕೊರತೆ ಇದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಕೈಗಾರಿಕೆಗೆ ಪ್ರತಿದಿನ 20 ಲಕ್ಷ ಲೀಟರ್ ನೀರು ಬೇಕಾಗುತ್ತದೆ. ಅಷ್ಟು ನೀರು ಪೂರೈಕೆ ಮಾಡಲು ಆಗದ ಕಾರಣ ಮುತ್ತಯ್ಯ ಮುರಳಿಧರನ್ ಅವರು ಇಲ್ಲಿ ಕೈಗಾರಿಕೆ ತೆರೆಯುವುದನ್ನು ಬಿಟ್ಟು ಬೇರೆ ಕಡೆ ಹೋಗಿದ್ದಾರೆ ಎಂಬ ಊಹಾಪೋಹ ಎದ್ದಿದ್ದವು. ಇಲ್ಲಿ ನೀರಿಗೆ ಯಾವುದೇ ಕೊರತೆ ಇಲ್ಲ. ಮುರಳಿಧರನ್ ಅವರು ಮೈಸೂರು ಹಾಗೂ ಧಾರವಾಡದಲ್ಲಿ ಕೈಗಾರಿಕೆ ತೆರೆಯಲು ಉದ್ದೇಶಿಸಿದ್ದಾರೆ. ಅವರು ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅವರು ಧಾರವಾಡದಲ್ಲಿ ಕೈಗಾರಿಕೆ ತೆರೆಯಲು ಉತ್ಸುಕರಾಗಿದ್ದಾರೆ ಎನ್ನುವ ಮಾತನ್ನು ಕೆಐಎಡಿಬಿ ಅಧಿಕಾರಿ ಹೇಳುತ್ತಾರೆ.
ಇದನ್ನೂ ಓದಿ: ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಮಿಸ್ಟರಿ ಗರ್ಲ್.. ಯಾರು ಈ ಹುಡುಗಿ..?
ಈಗಾಗಲೇ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ 39 ಎಕರೆ ಜಾಗವನ್ನು ಮುರುಳಿಧರನ್ ಅವರನ್ನು ನೋಡಿಕೊಂಡು ಹೋಗಿದ್ದಾರೆ. 700 ಕೋಟಿ ವೆಚ್ಚದಲ್ಲಿ ಅವರು ಕೈಗಾರಿಕೆ ತೆರೆಯಲೂ ಉದ್ದೇಶಿಸಿದ್ದಾರೆ. ಈಗಾಗಲೇ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರನ್ನೂ ಮುರಳಿಧರನ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅವರ ಕೈಗಾರಿಕೆ ಧಾರವಾಡಕ್ಕೆ ಬರೋದು ಪಕ್ಕಾ ಎಂದೇ ಹೇಳಲಾಗುತ್ತಿದ್ದು, ಆ ಮೂಲಕ ಈ ಭಾಗದಲ್ಲಿ ಮತ್ತಷ್ಟು ಉದ್ಯೋಗ ಸೃಷ್ಟಿಯಾಗಲಿದೆ. ಈ ಕಂಪನಿಗೆ ನೀರಿನ್ನ ಮೊದಲ ಆದ್ಯತೆ ಮೇಲೆ ಕೊಡುವ ಮಾತನ್ನು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
ಒಟ್ಟಾರೆ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರುಳಿಧರನ್ ಆರಂಭಿಸಲು ಉದ್ದೇಶಿಸಿರುವ ಈ ಕಂಪನಿಗೆ ನೀರಿನ ಕೊರತೆಯಾಗುವುದಿಲ್ಲ ಎಂದು ಅಧಿಕಾರಿಗಳೇ ಹೇಳಿದ್ದು, ಮುರಳಿಧರನ್ ಅವರ ಕೈಗಾರಿಕೆಗೆ ಸ್ಥಾಪನೆಗೆ ಅದ್ಯಾವಾಗ ಮುಹೂರ್ತ ಕೂಡಿ ಬರಲಿದೆಯೋ ನೋಡಬೇಕಿದೆ.
ಇದನ್ನೂ ಓದಿ: ಕೊಹ್ಲಿ, ರೋಹಿತ್ ನಂತರ.. ಟೀಂ ಇಂಡಿಯಾಗೆ ಸಿಕ್ತು ಮತ್ತೊಂದು ಜೋಡೆತ್ತು
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ