newsfirstkannada.com

ಡ್ರೆಸ್ಸಿಂಗ್​ ರೂಮ್​ನ ಕರಾಳ ಸತ್ಯ ಬಿಚ್ಚಿಟ್ಟ ಆರ್​.ಅಶ್ವಿನ್​.. ಮ್ಯಾನೇಜ್​ಮೆಂಟ್​ ವಿರುದ್ಧ ಸ್ಪಿನ್ನರ್​ ಕಿಡಿ

Share :

Published June 17, 2023 at 11:06am

    ಟೀಮ್​ ಇಂಡಿಯಾ ಪರ ನಡೆದಿದ್ದು ಆರ್​. ಅಶ್ವಿನ್​​ದ್ದೇ ದರ್ಬಾರ್​​..!

    ಮ್ಯಾನೇಜ್​ಮೆಂಟ್​ ವಿರುದ್ಧ ಬೇಸರ ಹೊರಹಾಕಿದ ಕೇರಂ ಸ್ಪಿನ್ನರ್​​.!

    ಫೈನಲ್​ನಲ್ಲಿ ಆಡಿಸುವುದಿಲ್ಲವೆಂದು ಅಶ್ವಿನ್​ಗೆ ಮೊದಲೇ ಗೊತ್ತಿತ್ತಾ..?

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಸೋಲಿನ ಆಘಾತವೇ ಇನ್ನೂ ಅಭಿಮಾನಿಗಳ ವಲಯದಲ್ಲಿ ಮಾಸಿಲ್ಲ. ಅದಾಗಲೇ ಅನುಭವಿ ಆಟಗಾರ ಅಶ್ವಿನ್​ ಮತ್ತೊಂದು ಶಾಕ್​ ಕೊಟ್ಟಿದ್ದಾರೆ. ಇಷ್ಟು ಮೌನವಾಗಿದ್ದ ಅಶ್ವಿನ್​ ತುಟಿ ಬಿಚ್ಚಿದ್ದು ಮ್ಯಾನೇಜ್​ಮೆಂಟ್​ ವಿರುದ್ಧ ಕಿಡಿ ಕಾರಿದ್ದಾರೆ. ಇಷ್ಟೇ ಅಲ್ಲ, ಡ್ರೆಸ್ಸಿಂಗ್​ ರೂಮ್​ನ ಕರಾಳ ಸತ್ಯ ಬಯಲು ಮಾಡಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಈಗ ಮುಗಿದ ಅಧ್ಯಾಯ. ಟೀಮ್​ ಇಂಡಿಯಾ ಸೋತಿದ್ದು ಆಯಿತು. ಆಸ್ಟ್ರೇಲಿಯಾ ಚಾಂಪಿಯನ್​ ಆಗಿದ್ದು ಆಯಿತು. ಆದ್ರೆ, ಇದ್ರ ಬಗೆಗಿನ ಚರ್ಚೆ ಮಾತ್ರ ನಿಂತಿಲ್ಲ. ಫೈನಲ್​ ಪಂದ್ಯದಿಂದ ಅಶ್ವಿನ್​ಗೆ ಕೊಕ್​ ಕೊಟ್ಟಿದ್ದು ಯಾಕೆ ಎಂಬ ಪ್ರಶ್ನೆಗೆ ಇನ್ನೂ ಉತ್ತರವೇ ಸಿಕ್ಕಿಲ್ಲ. ದಿಗ್ಗಜ ಮಾಜಿ ಕ್ರಿಕೆಟರ್​ಗಳೇ ಮೇಲಿಂದ ಮೇಲೆ ಪ್ರಶ್ನೆ ಮಾಡ್ತಿದ್ರೂ ಟೀಮ್​ ಮ್ಯಾನೇಜ್​ಮೆಂಟ್​ ಮಾತ್ರ ತುಟಿ ಬಿಚ್ಚುತ್ತಿಲ್ಲ.

ಮ್ಯಾನೇಜ್​ಮೆಂಟ್​ ವಿರುದ್ಧ ಸಿಡಿದೆದ್ದ ಅಶ್ವಿನ್​.!

ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಸೋತ ಬೆನ್ನಲ್ಲೇ ತವರಿಗೆ ಬಂದಿಳಿದಿರೋ ಅಶ್ವಿನ್​, ಸದ್ಯ TNPL​ನಲ್ಲಿ ಬ್ಯುಸಿಯಾಗಿದ್ದಾರೆ. ಹಾಗಿದ್ರೂ, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯವನ್ನಾಡದ ಬೇಸರ ಕಿಂಚಿತ್ತೂ ಕಡಿಮೆಯಾಗಿಲ್ಲ. ಮಹತ್ವದ ಪಂದ್ಯದಲ್ಲಿ ಬೆಂಚ್​ ಕಾದಿದ್ದು, ಅಶ್ವಿನ್​ ಮನದಲ್ಲಿ ಆಕ್ರೋಷದ ಜ್ವಾಲೆಯಾಗಿ ಹೊತ್ತಿ ಉರಿಯುತ್ತಿದೆ. ಹೀಗಾಗಿಯೇ ಟೀಮ್​ ಮ್ಯಾನೇಜ್​ಮೆಂಟ್​ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.

‘ಫೈನಲ್​ ತಲುಪುವಲ್ಲಿ ನನ್ನ ಪಾತ್ರವೂ ಮಹತ್ವದ್ದು’

‘ಪೈನಲ್​ನಲ್ಲಿ ನಾನು ಆಡಲೇಬೇಕು ಎಂದುಕೊಂಡಿದ್ದೆ. ಯಾಕಂದ್ರೆ, ಟೀಮ್​ ಇಂಡಿಯಾ ಫೈನಲ್​ ತಲುಪುವಲ್ಲಿ ನಾನು ಮಹತ್ವದ ಪಾತ್ರ ನಿರ್ವಹಿಸಿದ್ದೆ. ಕಳೆದ ಬಾರಿ ಫೈನಲ್​ ಪಂದ್ಯದಲ್ಲಿ ನಾನು ಆಡಿದಾಗ 4 ವಿಕೆಟ್​ ತೆಗೆದುಕೊಂಡು ಅದ್ಭುತವಾಗಿ ಬೌಲಿಂಗ್​ ಮಾಡಿದ್ದೆ. 2018-19ರ ನಂತರದಲ್ಲಿ ನಾನು ವಿದೇಶದಲ್ಲಿ ಉತ್ತಮವಾಗಿ ಬೌಲಿಂಗ್​ ಮಾಡಿದ್ದೇನೆ. ಪಂದ್ಯಗಳನ್ನೂ ಗೆಲ್ಲಿಸಿದ್ದೇನೆ.’

ಅಶ್ವಿನ್​, ಟೀಮ್​ ಇಂಡಿಯಾ ಸ್ಪಿನ್ನರ್​​

ವಿಶ್ವದ ನಂಬರ್​ 1 ಬೌಲರ್​, ನಂ.2 ಆಲ್​​ರೌಂಡರ್​.!

2021 ರಿಂದ 2023ರವರೆಗಿನ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಸೈಕಲ್​ನಲ್ಲಿ ಅಶ್ವಿನ್​ ಟೀಮ್​ ಇಂಡಿಯಾದ ಮೋಸ್ಟ್​ ಸಕ್ಸಸ್​ಫುಲ್​ ಪ್ಲೇಯರ್​. ಬೌಲಿಂಗ್​ ವಿಭಾಗದಲ್ಲಿ ಅಶ್ವಿನ್​ನ ಮೀರಿಸಿದವರೇ ಇಲ್ಲ. ಆಡಿದ 13 ಪಂದ್ಯಗಳಲ್ಲೇ 61 ವಿಕೆಟ್​ ಕಬಳಿಸಿದ ಸಾಧನೆ ಕೇರಂ ಸ್ಪಿನ್ನರ್​ದ್ದು. ಇದಲ್ಲದೇ ವಿಶ್ವದ ನಂಬರ್​ 1 ಬೌಲರ್, ನಂಬರ್​​.2 ಆಲ್​​ರೌಂಡರ್​ ಎಂಬ​ ಪಟ್ಟವನ್ನೂ ಕಬ್ಜ ಮಾಡಿದ್ದಾರೆ. ಇಷ್ಟೆಲ್ಲ ಸಾಧನೆ ಬೆನ್ನಿಗಿದ್ರೂ, ಫೈನಲ್​ನಲ್ಲಿ ಆಡೋ ಭಾಗ್ಯ ಮಾತ್ರ ಅಶ್ವಿನ್​ಗೆ ಸಿಗಲಿಲ್ಲ.

ವಿದೇಶದಲ್ಲಿ ಅಶ್ವಿನ್​ ಮ್ಯಾಚ್​ ವಿನ್ನಿಂಗ್​ ಪ್ರದರ್ಶನ.!

ಅಶ್ವಿನ್​ ಸ್ಪಿನ್​ ವಿದೇಶದಲ್ಲಿ ಅದ್ರಲ್ಲೂ ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ವರ್ಕೌಟ್​ ಆಗಲ್ಲ ಅನ್ನೋ ಮಾತಿದೆ. ಆ ಮಾತು ಸುಳ್ಳು. ನಿಮಗೆ 2021ರ ಟೀಮ್​ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ ನೆನಪಿರಬಹುದು. ಅಂದು ಸ್ಟಾರ್​​ಗಳ ಅಲಭ್ಯತೆಯಲ್ಲಿ ಟೀಮ್​ ಇಂಡಿಯಾ ಇತಿಹಾಸ ನಿರ್ಮಿಸಿತ್ತು. ಇದ್ರಲ್ಲಿ ಅಶ್ವಿನ್​ ಪಾಲೂ ಇತ್ತು. ಅಂದು ಆಡಿದ 3 ಪಂದ್ಯದಲ್ಲೇ 12 ವಿಕೆಟ್​ ಕಬಳಿಸಿದ್ದ ಕೇರಂ ಸ್ಪಿನ್ನರ್​, ಕೆಚ್ಚೆದೆಯ ಬ್ಯಾಟಿಂಗ್​ ನಡೆಸಿ ಸಿಡ್ನಿ ಟೆಸ್ಟ್​ ಡ್ರಾ ಸಾಧಿಸುವಲ್ಲಿ ನೆರವಾಗಿದ್ರು. ಈ ಇನ್ನಿಂಗ್ಸ್​ ನೋಡಿದ ಮೇಲೂ ಅಶ್ವಿನ್​ರನ್ನ ಮ್ಯಾಚ್​ ವಿನ್ನರ್​ ಅನ್ನದೆ ಇರೋಕಾಗುತ್ತಾ..?

ವಿದೇಶದಲ್ಲಿ ಅಶ್ವಿನ್​ ಪ್ರದರ್ಶನ

ವಿದೇಶದಲ್ಲಿ ಈವರೆಗೆ 65 ಪಂದ್ಯಗಳನ್ನ ಆಡಿರೋ ಅಶ್ವಿನ್​, 1,451 ಓವರ್​ ಬೌಲಿಂಗ್​ ಮಾಡಿದ್ದಾರೆ. 133 ವಿಕೆಟ್​ಗಳನ್ನ ಕಬಳಿಸಿರೋ ಅಶ್ವಿನ್​, 2.93ರ ಎಕಾನಮಿ ಹೊಂದಿದ್ದಾರೆ.

ಡ್ರೆಸ್ಸಿಂಗ್​ರೂಮ್​ನಲ್ಲಿ ಸ್ವಾರ್ಥದ್ದೇ ಆಟ.?

ಟೀಮ್​ ಇಂಡಿಯಾದಲ್ಲಿ ವೈಯಕ್ತಿಕ ಬೆಳವಣಿಗೆಗಿಂತ ತಂಡ ಗೆಲ್ಲೋದು ತುಂಬಾ ಮುಖ್ಯ. ಡ್ರೆಸ್ಸಿಂಗ್​ ರೂಮ್​ನಲ್ಲಿ ಒಗ್ಗಟ್ಟೇ ಮಂತ್ರವಾಗಬೇಕು. ಆದ್ರೆ, ಟೀಮ್​ ಇಂಡಿಯಾದಲ್ಲಿ ಇದು ಆಗ್ತಿಲ್ಲ. ತಂಡದಲ್ಲಿ ಬಣಗಳಿವೆ ಅನ್ನೋದು ಗುಟ್ಟಾಗಿ ಏನು ಉಳಿದಿಲ್ಲ. ಆ ಬಣ ರಾಜಕೀಯ ಎಷ್ಟರ ಮಟ್ಟಿಗೆ ಬೆಳೆದಿದೆ ಅಂದ್ರೆ, ತಂಡದಲ್ಲಿ ಆಟಗಾರರ ನಡುವೆ ರೇಸ್​ ಎರ್ಪಟ್ಟಿದೆ. ಸ್ವತಃ ಅಶ್ವಿನ್​ ಹೇಳಿರೋ ವಿಚಾರ ಇದು.

‘ಒಬ್ಬರಿಗಿಂತಲೂ ಒಬ್ಬರು ಮುಂದೆ’

ಒಂದು ಕಾಲದಲ್ಲಿ ಕ್ರಿಕೆಟ್​ ಆಡಿದಾಗ ಎಲ್ಲರೂ ಗೆಳೆಯರಾಗಿದ್ರು. ಆದ್ರೆ, ಈಗ ಎಲ್ಲರೂ ಸಹೋದ್ಯೋಗಿಗಳು. ಇದೇ ದೊಡ್ಡ ವ್ಯತ್ಯಾಸ. ಯಾಕಂದ್ರೆ ಜನರು ಒಬ್ಬರಿಗಿಂತ ಒಬ್ಬರು ಮುಂದಿರಲು ಬಯಸುತ್ತಾರೆ. ನೀನು ಹೇಗಿದ್ದಿಯಾ ಎಂದು ಕೇಳಲು ಯಾರಿಗೂ ಸಮಯವಿಲ್ಲ. ಸತ್ಯ ಏನಂದ್ರೆ, ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದರಿಂದ ನನ್ನ ಆಟ ಉತ್ತಮವಾಗುತ್ತೆ ಅನ್ನೋದನ್ನ ನಾನು ನಂಬುತ್ತೇನೆ. ಆದ್ರೆ, ಇದು ಎಷ್ಟು ಆಗಬೇಕೋ ಅಷ್ಟು ಆಗ್ತಿಲ್ಲ.

ಅಶ್ವಿನ್​, ಟೀಮ್​ ಇಂಡಿಯಾ ಸ್ಪಿನ್ನರ್​​

ಮುಂದಿನ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ವರೆಗೆ 36ರ ವಯಸ್ಸಿನ ಅಶ್ವಿನ್​ ಕ್ರಿಕೆಟ್​ ಆಡೋದು ಅನುಮಾನವಾಗಿದೆ. ಅದ್ರೆ, ಈಗಲೂ ಅಶ್ವಿನ್​ ಬೆಸ್ಟ್​ ರಿಪ್ಲೇಸ್​ಮೆಂಟ್​ ಯಾರಪ್ಪಾ ಅನ್ನೋ ಪ್ರಶ್ನೆ ಎದುರಾದ್ರೆ, ಯಾರ ಬಳಿ ಉತ್ತರವಿಲ್ಲ. ಕೇರಂ ಸ್ಪಿನ್ನರ್​ ಎಂತಾ ಚಾಂಪಿಯನ್​​ ಅನ್ನೋದಕ್ಕೆ ಇದಕ್ಕಿಂತ ಬೆಸ್ಟ್​ ಎಕ್ಸಾಂಪಲ್​ ಬೇಕಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಡ್ರೆಸ್ಸಿಂಗ್​ ರೂಮ್​ನ ಕರಾಳ ಸತ್ಯ ಬಿಚ್ಚಿಟ್ಟ ಆರ್​.ಅಶ್ವಿನ್​.. ಮ್ಯಾನೇಜ್​ಮೆಂಟ್​ ವಿರುದ್ಧ ಸ್ಪಿನ್ನರ್​ ಕಿಡಿ

https://newsfirstlive.com/wp-content/uploads/2023/06/R_ASHWIN_JADEJA.jpg

Load More