/newsfirstlive-kannada/media/post_attachments/wp-content/uploads/2025/03/MY-Wife-Has-4-Boy-Friend.jpg)
ಮಧ್ಯಪ್ರದೇಶದ ಗ್ವಾಲಿಯರ್​ನ ನಡುರಸ್ತೆಯಲ್ಲಿ ಕುಳಿತ 38 ವರ್ಷದ ವ್ಯಕ್ತಿಯೊಬ್ಬ, ನನಗೆ ನನ್ನ ಪತ್ನಿ ಹಾಗೂ ಆಕೆಯ ಪ್ರೇಮಿಗಳಿಂದ ಜೀವಭಯವಿದೆ ನನಗೆ ರಕ್ಷಣೆ ಬೇಕು ಎಂದು ಪ್ರತಿಭಟನೆ ಕುಳಿತ ವಿಚಿತ್ರ ಘಟನೆ ನಡೆದಿದೆ. ಅತಿ ದುಃಖಿತನಾದ ಆತ ಕೈಗೆ ಸಿಕ್ಕ ಪುಟ್ಟ ಕಾಗದದ ತುಂಡಿನಲ್ಲಿ ನನ್ನ ಪತ್ನಿ ಹಾಗೂ ಆಕೆಯ ಬಾಯ್​ಫ್ರೆಂಡ್​ಗಳು ನನ್ನನ್ನನು ಸಾಯಿಸುತ್ತಾರೆ. ಅದಕ್ಕಾಗಿ ಅವರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಹಿಂದೆ ಗಂಡನನ್ನು ಹತ್ಯೆ ಮಾಡಿ ಡ್ರಮ್​​​ನಲ್ಲಿ ತುಂಬಿಸಿದ ಮೀರತ್​ನಲ್ಲಿ ನಡೆದ ಮಾದರಿಯಲ್ಲಿಯೇ ನನ್ನ ಹತ್ಯೆ ಪ್ಲ್ಯಾನ್ ಮಾಡಿದ್ದಾರೆ, ದಯವಿಟ್ಟು ನನ್ನನ್ನು ಕಾಪಾಡಿ ಎಂದು ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಅವರಿಗೆ ಪತ್ರ ಬರೆದಿದ್ದಾನೆ.
ನನ್ನ ಹೆಂಡತಿಗೆ ಒಬ್ಬನಲ್ಲ, ನಾಲ್ವರು ಬಾಯ್​ಫ್ರೆಂಡ್​​ಗಳು
ಪ್ರತಿಭಟನೆ ಕುಳಿತಿರುವ ವ್ಯಕ್ತಿ ಮಾಡಿರುವ ಇನ್ನೊಂದು ಗಂಭೀರವಾದ ಆರೋಪ ಅಂದ್ರೆ , ನನ್ನ ಹೆಂಡತಿಗೆ ಒಬ್ಬನಲ್ಲ ನಾಲ್ವರ ಪ್ರಿಯಕರರು ಇದ್ದಾರೆ. ಆಕೆ ತನ್ನ ಪ್ರಿಯಕರರೊಂದಿಗೆ ಸೇರಿ ನನ್ನ ಮಗ ಹರ್ಷನನ್ನು ಕೊಲ್ಲಲು ಷಡ್ಯಂತ್ರ ಮಾಡಿದ್ದಳು ಮತ್ತು ಸಣ್ಣ ಮಗನನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾಳೆ. ಈಗ ನನ್ನನ್ನು ಕೊಲ್ಲಲು ಕೂಡ ಪ್ಲ್ಯಾನ್ ಮಾಡಿಕೊಂಡಿದ್ದಾಳೆ. ಅವಳಗೆ ನಾಲ್ವರು ಪ್ರೇಮಿಗಳು ಇದ್ದಾರೆ. ಅದರಲ್ಲಿ ಒಬ್ಬನೊಂದಿಗೆ ಲೀವ್ ಇನ್ ರಿಲೇಷನ್​​ಶೀಪ್​ನಲ್ಲಿ ಇದ್ದಾಳೆ ಎಂದು ವ್ಯಕ್ತಿ ಆರೋಪಿಸಿದ್ದಾನೆ.
ಇದನ್ನೂ ಓದಿ:ವಿದೇಶಿ ಬಂಡವಾಳ, ಯುವತಿಯರಿಗೆ ಲಕ್ಷಾಂತರ ರೂಪಾಯಿ ಸ್ಯಾಲರಿ. ಅಶ್ಲೀಲ ಚಿತ್ರ ತಯಾರಿಸುತ್ತಿದ್ದ ಜೋಡಿಗೆ ಬೇಡಿ!
ಸಂತ್ರಸ್ತ ಹೇಳುವ ಪ್ರಕಾರ ಈಗಾಗಲೇ ಆತ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನಂತೆ. ಆದರೆ ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ನಾನೀಗ ನಿಸ್ಸಾಹಯಕನಾಗಿದ್ದೇನೆ ಎಂದು ಗ್ವಾಲಿಯರ್​​ನ ಪುಲ್​ಭಾಗ್​ ರಸ್ತೆಯ ನಡುವೆ ಕುಳಿತು ಪ್ರತಿಭಟನೆ ಮಾಡಿದ್ದಾನೆ. ಅಲ್ಲದೇ ಸಿಎಂಗೆ ಪತ್ರ ಬರೆದು ನನ್ನ ನೋವನ್ನು ಮುಖ್ಯಮಂತ್ರಿಗಳು ಅರ್ಥಮಾಡಿಕೊಂಡು ನನಗೆ ನ್ಯಾಯ ಒದಗಿಸುತ್ತಾರೆ ಎಂದು ಭರವಸೆಯಿಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us