Advertisment

WATCH: ಧರ್ಮಸ್ಥಳಕ್ಕೆ ಹೋದ ನನ್ನ ಹೆಂಡ್ತಿ ಇನ್ನೂ ಬಂದಿಲ್ಲ.. ಫ್ರೀ ಬಸ್​ ಬಿಟ್ಟಾಗಿಂದ ಮನೆಯಲ್ಲಿ ಅಡುಗೆ ಮಾಡ್ತಿಲ್ಲ ಎಂದ ಪತಿರಾಯ

author-image
admin
Updated On
WATCH: ಧರ್ಮಸ್ಥಳಕ್ಕೆ ಹೋದ ನನ್ನ ಹೆಂಡ್ತಿ ಇನ್ನೂ ಬಂದಿಲ್ಲ.. ಫ್ರೀ ಬಸ್​ ಬಿಟ್ಟಾಗಿಂದ ಮನೆಯಲ್ಲಿ ಅಡುಗೆ ಮಾಡ್ತಿಲ್ಲ ಎಂದ ಪತಿರಾಯ
Advertisment
  • ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌ಗೆ ಗಂಡಸ್ರು ವೋಟ್ ಹಾಕಿಲ್ವಾ?
  • ಬಸ್ ಹತ್ತೋಕೆ ಆಗ್ತಿಲ್ಲ, ಗಂಡಸರು ಏನ್ ಅನ್ಯಾಯ ಮಾಡಿದ್ದಾರೆ ಹೇಳಿ
  • ಭಾನುವಾರ ಬಂದ್ರೆ ಬಸ್ ಹತ್ತಿ ಹೋಗ್ತೀನಿ ಅಂತಾರೆ ಮಹಿಳೆಯರು

ಬೆಂಗಳೂರು: ಮಹಿಳೆಯರಿಗೆ ಫ್ರೀ ಬಸ್ ಸಂಚಾರದ ಶಕ್ತಿ ಯೋಜನೆಗೆ ಚಾಲನೆ ಕೊಟ್ಟ ಮೇಲೆ ಫಸ್ಟ್ ವೀಕೆಂಡ್ ಬಂದಿದೆ. ಭಾನುವಾರವಾದ ಇವತ್ತು ನಾರಿಯರು KSRTC ಬಸ್ ಹತ್ತಿ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಮಂಗಳೂರು, ಶೃಂಗೇರಿ, ಹೊರನಾಡು, ಮಂಗಳೂರು, ಮಲೆ ಮಹದೇಶ್ವರ ಬೆಟ್ಟಕ್ಕೆ ಹೊರಟಿದ್ದಾರೆ. ಮಹಿಳಾಮಣಿಗಳ ಈ ಸಂಚಾರದಿಂದ ಸಾರಿಗೆ ಬಸ್‌ಗಳು ತುಂಬಿ ತುಳುಕುತ್ತಿವೆ. ಈ ಮಧ್ಯೆ ಮೆಜೆಸ್ಟಿಕ್ ಬಸ್‌ ನಿಲ್ದಾಣದಲ್ಲಿ ಪುರುಷ ಪ್ರಯಾಣಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisment

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಗಂಡಸ್ರು ಯಾರು ವೋಟ್ ಹಾಕಿಲ್ವಾ. ಮಹಿಳೆಯರೇ ವೋಟ್ ಹಾಕಿದ್ದಾರೆ ಅಂತಾ ಫ್ರೀ ಬಸ್ ಕೊಟ್ಟಿದ್ದೀರಾ. ಗಂಡಸರು ಬಸ್ ಹತ್ತೋಕೆ ಆಗ್ತಿಲ್ಲ. ಗಂಡಸರು ಏನ್ ಅನ್ಯಾಯ ಮಾಡಿದ್ದಾರೆ. ಏನ್ ಫ್ರೀ ಕೊಟ್ಟಿದ್ದೀರಾ ನೀವು. ಇಷ್ಟೇ ಅಲ್ಲಾ.. ಮುಂದಿನ ಚುನಾವಣೆ ಬರುತ್ತೆ ಆಗ ಬನ್ನಿ. ಈಗ ಏನೋ ಆಗಿ ಹೋಯ್ತು. ಮುಂದೆ ಎಲೆಕ್ಷನ್ ಬಂದೇ ಬರುತ್ತೆ ಬಿನ್ನಿ ಅವಾಗ ನೋಡಿಕೊಳ್ತೀವಿ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ಇನ್ನು, ಫ್ರೀ ಬಸ್​ ಬಿಟ್ಟಾಗಿಂದ ಮನೆಯಲ್ಲಿ ಹೆಂಗಸರು ಅಡುಗೆ ಮಾಡ್ತಿಲ್ಲ. ಧರ್ಮಸ್ಥಳಕ್ಕೆ ಹೋದ ನನ್ನ ಹೆಂಡ್ತಿ ಇನ್ನೂ ಬಂದೇ ಇಲ್ಲ. ಎರಡು ಸೀರೆ ತೆಗೆದುಕೊಂಡು ರಾತ್ರಿ ಹೋಗಿ ಬೆಳಗ್ಗೆ ಬರ್ತೀನಿ ಅಂತಾ ಹೇಳಿದ್ಲು. ಈಗ ಗಂಡಸರು ಎಲ್ಲಿ ಹೋಗಿ ಹುಡುಕಿಕೊಂಡು ಹೋಗೋದು. ಭಾನುವಾರ ಬಂದ್ರೆ ಬಸ್ ಹತ್ತಿ ಹೋಗ್ತೀನಿ ಅಂತಾ ಮಹಿಳೆಯರು ಹೇಳ್ತಿದ್ದಾರೆ. ನಾವು ಅವರ ಮುಖ, ಮುಖ ನೋಡಿಕೊಂಡು ಇರ್ಬೇಕಾ. ಗಂಡಸರು ಏನ್ ಅನ್ಯಾಯ ಮಾಡಿದ್ರು ಅಂತಾ ಸರ್ಕಾರವನ್ನು ತರಾಟೆ ತೆಗೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment

Advertisment
Advertisment
Advertisment