/newsfirstlive-kannada/media/post_attachments/wp-content/uploads/2025/03/Earthquake-mayanmer-Kannadiagas.jpg)
ಮಯನ್ಮಾರ್ ಹಾಗೂ ಥೈಲ್ಯಾಂಡ್ ಪ್ರಬಲ ಭೂಕಂಪಕ್ಕೆ ತತ್ತರಿಸಿ ಹೋಗಿವೆ. ಈ ಎರಡು ದೇಶಗಳ ಮಧ್ಯೆ 735 ಮೈಲಿಯಷ್ಟು ಅಂತರವಿದೆ. ಈ ದೇಶದಲ್ಲಿ ಈಗ ಗಂಟೆಗಳು ಉರುಳಿದಂತೆ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಅವಶೇಷಗಳಡಿ ಸಿಲುಕಿದ್ದ ಅನೇಕರು ಪ್ರಾಣ ಬಿಟ್ಟಿದ್ದು, ಸದ್ಯದ ಮಾಹಿತಿ ಪ್ರಕಾರ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 1,000ಕ್ಕೂ ಹೆಚ್ಚಾಗಿದೆ.
ಮಯನ್ಮಾರ್‌ಗಿಂತಲೂ ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಭೂಕಂಪಕ್ಕೆ ಅಧಿಕ ಅನಾಹುತ ನಡೆದಿದೆ. ಇಲ್ಲಿ ಅವಶೇಷಗಳಡಿ ಸಿಲುಕಿದ್ದವರ ಶವಗಳು ಸಿಕ್ಕಿದ್ದರಿಂದ ಸಾವು- ನೋವಿನ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಗಾಯಾಳುಗಳಿಗೆ ರಕ್ತದಾನ ಮಾಡುವಂತೆ ಸೇನೆ ಮನವಿ ಮಾಡಿಕೊಂಡಿದೆ. ಬದುಕುಳಿದವರ ಚಿಕಿತ್ಸೆಗೆ ಭಾರತ 15 ಟನ್ ರಕ್ಷಣಾ ಸಾಮಗ್ರಿಯನ್ನು ಈಗಾಗಲೇ ಕಳುಹಿಸಿದೆ.
ಕನ್ನಡಿಗರು ಸೇಫ್!
ಪ್ರಬಲ ಭೂಕಂಪದ ಮಧ್ಯೆ ಬ್ಯಾಂಕಾಂಕ್‌ಗೆ ತೆರಳಿದ್ದ ಕನ್ನಡಿಗರು ಸುರಕ್ಷಿತರಾಗಿದ್ದಾರೆ ಎನ್ನಲಾಗಿದೆ. ಎಂಎಲ್‌ಸಿ ಮರಿತಿಬ್ಬೆಗೌಡ ಮಗಳು, ಅಳಿಯ ಮತ್ತು ಮೊಮ್ಮಗ ಕಳೆದ ಮೂರು ದಿನಗಳ ಹಿಂದೆ ಪ್ರವಾಸಕ್ಕೆಂದು ಬ್ಯಾಂಕಾಂಕ್‌ಗೆ ಈ ಕುಟುಂಬ ತೆರಳಿತ್ತು. ಇವರು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಆಗಿದ್ದಾರೆ.
ಇದನ್ನೂ ಓದಿ: ಥೈಲ್ಯಾಂಡ್ ಮತ್ತು ಮಯನ್ಮಾರ್ನಲ್ಲಿ ಭೀಕರ ಭೂಕಂಪ.. ಸಾವಿನ ಸಂಖ್ಯೆ 700ಕ್ಕೆ ಏರಿಕೆ!
ಮಯನ್ಮಾರ್, ಥೈಲ್ಯಾಂಡ್ ಭೂಕಂಪದ ಬಗ್ಗೆ ಬೆಂಗಳೂರಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಹೇಳಿಕೆ ನೀಡಿದ್ದಾರೆ. ಕೆಲವು ಕನ್ನಡಿಗರು ಸೇಫ್ ಆಗಿದ್ದಾರೆ ಎನ್ನುವ ಮಾಹಿತಿ ರಾಜ್ಯ ಸರ್ಕಾರಕ್ಕಿದೆ. ಯಾರಿಗೂ ತೊಂದರೆ ಆಗಿರುವ ಮಾಹಿತಿ ಬಂದಿಲ್ಲ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ