ಎದೆ ಝಲ್ಲೆನ್ನಿಸೋ ದೃಶ್ಯಗಳು.. ಮಯನ್ಮಾರ್‌ನಲ್ಲಿ ಪದೇ ಪದೇ ಭೂಕಂಪಕ್ಕೆ ಕಾರಣ ಏನು? VIDEO ಇಲ್ಲಿದೆ!

author-image
admin
Updated On
ಎದೆ ಝಲ್ಲೆನ್ನಿಸೋ ದೃಶ್ಯಗಳು.. ಮಯನ್ಮಾರ್‌ನಲ್ಲಿ ಪದೇ ಪದೇ ಭೂಕಂಪಕ್ಕೆ ಕಾರಣ ಏನು? VIDEO ಇಲ್ಲಿದೆ!
Advertisment
  • ಭೂಕಂಪದಿಂದ 1002 ಮಂದಿ ಸಾವು 2,376 ಮಂದಿಗೆ ಗಾಯ
  • ಮಯನ್ಮಾರ್‌ನ ಮಾಂಡಲೇ ಈ ಭೂಕಂಪದ ಕೇಂದ್ರ ಬಿಂದು
  • ಮಯನ್ಮಾರ್‌ನಲ್ಲಿ ಆಗ್ಗಾಗ್ಗೆ ಭೂಕಂಪ ಸಂಭವಿಸಲು ಏನು ಕಾರಣ?

ಮಾರ್ಚ್ 28ರಂದು ನಡುಗಿದ ಭೂಮಿ.. ಮಯನ್ಮಾರ್‌, ಥೈಲ್ಯಾಂಡ್‌ನಲ್ಲಿ ಸಾವಿರಾರು ಜನರನ್ನು ಶಾಶ್ವತವಾಗಿ ಮಲಗುವಂತೆ ಮಾಡಿದೆ. ಮಯನ್ಮಾರ್‌ನ ಮಾಂಡಲೇ ಈ ಭೂಕಂಪದ ಕೇಂದ್ರ ಬಿಂದು ಆಗಿತ್ತು.
ಮಯನ್ಮಾರ್ ಭೂಕಂಪದಿಂದ ಇದುವರೆಗೂ 1002 ಮಂದಿ ಸಾವನ್ನಪ್ಪಿದ್ದು, ಇನ್ನೂ 2,376 ಮಂದಿ ಗಾಯಾಳುಗಳಾಗಿದ್ದಾರೆ ಎಂದು ಅಧಿಕೃತವಾಗಿ ಹೇಳಲಾಗಿದೆ.


">March 29, 2025

ಮಯನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದ ವೇಳೆ ಸ್ಥಳೀಯರು ಮನೆಯಿಂದ ಹೊರಗೆ ಓಡಿ ಬಂದಿದ್ದು, ಅನೇಕ ಭಯಾನಕ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ನೋಡೋದಕ್ಕೆ ಒಂದೊಂದು ದೃಶ್ಯವೂ ಎದೆ ಝಲ್ಲೆನ್ನಿಸುವಂತಿದೆ. ಥೈಲ್ಯಾಂಡ್‌ನ ಗಗನಚುಂಬಿ ಕಟ್ಟಡದ ಮೇಲಿದ್ದ ಸ್ವಿಮ್ಮಿಂಗ್‌ ಪೂಲ್‌ ನೀರು ಕೆಳಗೆ ಬಿದ್ದಿದೆ. ಈ ವೇಳೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಸುಂದರಿ ಜೊತೆ ಮಲಗಿದ್ದ ವ್ಯಕ್ತಿಯೊಬ್ಬ ಜೀವ ಉಳಿಸಿಕೊಳ್ಳಲು ಓಡಿ ಹೋಗಿದ್ದಾನೆ.


">March 29, 2025

ಅಮೆರಿಕಾದ ಕೆಲ ಏಜೆನ್ಸಿಗಳು ಮಯನ್ಮಾರ್‌, ಥೈಲ್ಯಾಂಡ್‌ನಲ್ಲಿ ಅತಿದೊಡ್ಡ ಅನಾಹುತ ಸಂಭವಿಸಿದ್ದು ಭೂಕಂಪಕ್ಕೆ ಸಾವನ್ನಪ್ಪಿದವರ ಸಂಖ್ಯೆ 1000 ಅಲ್ಲ 10 ಸಾವಿರಕ್ಕೆ ತಲುಪಬಹುದು ಅನ್ನೋ ಲೆಕ್ಕಾಚಾರ ಹಾಕಿದ್ದಾರೆ.


">March 29, 2025

ಮಯನ್ಮಾರ್‌ನಲ್ಲೇ ಭೂಕಂಪ ಯಾಕೆ?
ಮಯನ್ಮಾರ್ ಸದಾ ಭೂಕಂಪ ಎದುರಿಸುವ ದೇಶ. ಭೂಕಂಪದ ಅಪಾಯಕಾರಿ ದೇಶಗಳ ಭೂಪಟದಲ್ಲಿ ಮಯನ್ಮಾರ್ ದೇಶ ಡೇಂಜರ್ ಝೋನ್‌ನಲ್ಲಿದೆ. ಮಯನ್ಮಾರ್‌ನಲ್ಲಿ ಆಗ್ಗಾಗ್ಗೆ ಭೂಕಂಪ ಸಂಭವಿಸಲು ಏನು ಕಾರಣ ಅನ್ನೋ ಮಾಹಿತಿ ರೋಚಕವಾಗಿದೆ.

publive-image

ಮಯನ್ಮಾರ್‌ನಲ್ಲಿ ಸಗೈಂಗ್ ಫಾಲ್ಟ್ ಎಂಬ ಭೂರೇಖೆ ಹಾದು ಹೋಗಿದೆ. ಸಗೈಂಗ್ ಫಾಲ್ಟ್ ಭೂ ರೇಖೆ ಹಾದು ಹೋಗಿರುವುದರಿಂದಲೇ ಇಲ್ಲಿ ಭೂಕಂಪನದ ಅಪಾಯ ಹೆಚ್ಚು. ಸಗೈಂಗ್ ಫಾಲ್ಟ್ ಎಂಬುದು ಭೂಮಿಯಲ್ಲಿನ ಪ್ರಮುಖ ದೋಷ. ಈ ಡೇಂಜರ್ ಸಗೈಂಗ್ ಫಾಲ್ಟ್ ರೇಖೆಯು ಮಧ್ಯೆ ಮಯನ್ಮಾರ್‌ನಿಂದ ಉತ್ತರ ಮಯನ್ಮಾರ್‌ವರೆಗೂ ವ್ಯಾಪಿಸಿದೆ.

ಇದನ್ನೂ ಓದಿ: ಜಗತ್ತಿನ ಭಯಾನಕ 10 ಭೂಕಂಪಗಳು ಯಾವುವು ಗೊತ್ತಾ? ಬಲಿಯಾದವರ ಸಂಖ್ಯೆ ಸಾವಿರ ಅಲ್ಲ ಲಕ್ಷ, ಲಕ್ಷಗಳು! 

ಭೂಕಂಪಕ್ಕೆ ಕಾರಣ ಏನು?
ಭೂಮಿಯೊಳಗೆ ಇಂಡಿಯನ್-ಯೂರೋಷಿಯನ್ ಶಿಲಾ ಪದರಗಳ ಘರ್ಷಣೆಯಿಂದ ಈ ರೀತಿಯ ಭೂಕಂಪ ಸಂಭವಿಸುತ್ತೆ. ಭೂ ಪದರಗಳ ಚಲನೆಯಿಂದ ಕೆಲವೊಮ್ಮೆ ಭೂಮಿಯೊಳಗಡೆ ಒತ್ತಡ ಉಂಟಾಗಿ ಭೂಕಂಪವಾಗುತ್ತೆ. ಭೂ ಪದರಗಳ ನಡುವಿನ ಘರ್ಷಣೆ, ಚಲನೆಯಿಂದ ಭೂಕಂಪವಾಗುತ್ತೆ. ಟೆಕ್ಟಾನಿಕ್ ಪದರಗಳ ನಡುವಿನ ಘರ್ಷಣೆಯಿಂದ ಕೂಡ ಭೂಕಂಪವಾಗುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment