/newsfirstlive-kannada/media/post_attachments/wp-content/uploads/2024/11/Myopia-2.jpg)
ಫೋನೂ.. ಫೋನೂ.. ಫೋನೂ.. ಮೂರೊತ್ತು ಫೋನೂ. ಊಟ ಮಾಡ್ಬೇಕಾದ್ರು ಫೋನೂ.. ಫೋನಲ್ಲೇ ಆಟ.. ಫೋನ್ ಜೊತೆಯಲ್ಲೇ ನಿದ್ದೆ.. ಹಿಂಗಾಂದ್ರೆ ಮಕ್ಕಳ ಬಾಲ್ಯದ ಕಥೆ ಏನು ಅಂತಾ ಯಾವತ್ತಾದ್ರು ಯೋಚಿಸಿದ್ದೀರಾ? ನಿಮ್ಮ ಮಕ್ಕಳು ವರ್ಚುವಲ್ ಜಗತ್ತಲ್ಲೇ ಬದುಕ್ತಿದ್ರೆ.. ನೀವು ಅಲರ್ಟ್ ಆಗೋ ಸಮಯ ಬಂದಿದೆ ಅಂತಾ ಅರ್ಥ.
ಹೌದು.. ನಿಮ್ಮ ಮಕ್ಕಳು ಜಾಸ್ತಿ ಮೊಬೈಲ್ ಯೂಸ್ ಮಾಡ್ತಾರಾ? ಔಟ್ ಡೋರ್ ಗೇಮ್ ಆಡದೇ ಆನ್ಲೈನ್ ಗೇಮ್ನಲ್ಲೇ ಬ್ಯೂಸಿಯಾಗಿರ್ತಾರಾ? ಹಾಗಾದ್ರೆ ಅಂತಹ ಮಕ್ಕಳ ಪೋಷಕರೇ ಇವತ್ತೇ ಎಚ್ಚೆತ್ತುಕೊಳ್ಳಿ!
ದೂರದ ಅಕ್ಷರಗಳು ಕಾಣಿಸಲ್ಲ.. ಪೋಷಕರೇ ಅಲರ್ಟ್!
ದೂರದಲ್ಲಿ ಬರೆದಿರೋದು ಕಾಣಿಸಲ್ಲ. ಮಂಜು ಮಂಜಾಗಿ ಕಾಣಿಸೋದು. ಈ ತರಹ ಲಕ್ಷಣ ನಿಮ್ಮ ಮಕ್ಕಳಿಗಿದ್ಯಾ ಒಮ್ಮೆ ಚೆಕ್ ಮಾಡಿ.. ಆ ರೀತಿ ಲಕ್ಷಣಗಳಿದ್ರೆ, ನಿಮ್ಮ ಮಕ್ಕಳನ್ನ ಭಾದಿಸ್ತಿದೆ ಮಯೋಫಿಯಾ (Myopia) ಸಮಸ್ಯೆ.. ಒಂದಲ್ಲ.. ಎರಡಲ್ಲ.. ಬರೋಬ್ಬರಿ 25 ಪರ್ಸೆಂಟ್ ಮಕ್ಕಳಲ್ಲಿ ಮಯೋಫಿಯಾ ಸಮಸ್ಯೆ ಹೆಚ್ಚಾಗಿದೆ.
ಇದನ್ನೂ ಓದಿ:ವಾರದಲ್ಲಿ ಎಷ್ಟು ಬಾರಿ ಬಿಯರ್ ಕುಡಿದ್ರೆ ಸೇಫ್? ಇದರಿಂದ ಏನೆಲ್ಲಾ ಪ್ರಯೋಜನೆಗಳು ಇವೆ?
ಕಳೆದ 3-4 ವರ್ಷಗಳಿಂದ ಈ ಮಯೋಫಿಯಾ ಸಮಸ್ಯೆ ಡಬಲ್ ಆಗಿದೆ. ಪ್ರಪಂಚದಲ್ಲಿ 100 ಜನರಲ್ಲಿ 28 ಪರ್ಸೆಂಟ್ ಜನ್ರಿಗೆ ಈ ಸಮಸ್ಯೆ ಇದ್ಯಂತೆ. 2050ರ ಹೊತ್ತಿಗೆ ಅರ್ಧದಷ್ಟು ಜನರಿಗೆ ಕಣ್ಣಿಗೆ ಸಮಸ್ಯೆ ಆಗುತ್ತೆ ಅನ್ನೋ ಆತಂಕ ನೇತ್ರ ತಜ್ಞರದ್ದಾಗಿದೆ.
ದೂರದೃಷ್ಟಿ ದೋಷ. ಹತ್ತಿರ ಇರೋದನ್ನು ತುಂಬಾ ಚೆನ್ನಾಗಿ ಗ್ರಹಿಸುತ್ತಾರೆ. ದೂರದಲ್ಲಿ ಇರೋದು ಅವರಿಗೆ ಕಾಣಿಸುವುದಿಲ್ಲ. ಮೊಬೈಲ್ ನೋಡೋದು, ಟಿವಿ ಮುಂದೆ ಕೂರೋದು ಇದೆಲ್ಲ ಹೆಚ್ಚಾಗುತ್ತಿದೆ. ಇದರಿಂದ ನಮ್ಮ ಐಬಾಲ್ಗೆ ಸಮಸ್ಯೆ ಆಗುತ್ತ ಹೋಗುತ್ತದೆ. ಇದರಿಂದ ಕಣ್ಣುಗಳು ದೃಷ್ಟಿಯನ್ನು ಕಳೆದುಕೊಳ್ಳುತ್ತವೆ. ಅಂದರೆ ಹತ್ತಿರದಿಂದ ಮೊಬೈಲ್, ಟಿವಿ, ಕಂಪ್ಯೂಟರ್ ನೋಡೋದ್ರಿಂದ ಮೈನಸ್ ಪವರ್ ಜಾಸ್ತಿಯಾಗುತ್ತ ಹೋಗುತ್ತದೆ -ರೋಹಿತ್ ಶೆಟ್ಟಿ, ನಾರಾಯಣ ನೇತ್ರಾಲಯ ಚೇರ್ಮನ್
ಇವುಗಳನ್ನ ಮಾಡಬೇಡಿ!
- ಡಿಮ್ ಲೈಟ್ನಲ್ಲಿ ಓದುವುದು
- ಹೆಚ್ಚು ಮೊಬೈಲ್ ನೋಡುವುದು
- ಡಿಜಿಟಲ್ ಡಿವೈಸ್ ಹೆಚ್ಚಿನ ಬಳಕೆ
- ವಿಟಮಿನ್ ಡಿ ಕಡಿಮೆ ಇದ್ರು ಸಮಸ್ಯೆ
- ಗ್ಯಾಪ್ ಕೊಡದೇ ಪುಸ್ತಕ ಓದುವುದು
16 ವರ್ಷದ ಕೆಳಗಿನ ಮಕ್ಕಳು 2 ಗಂಟೆ ಆದ್ರೂ ಪ್ರತಿದಿನ ಹೊರಗೆ ಆಟ ಆಡ್ಬೇಕು ಅಂತಾ ನಾರಾಯಣ ನೇತ್ರಾಲಯ ನೇತ್ರ ತಜ್ಞರು ಮಾಹಿತಿ ನೀಡಿದ್ದಾರೆ. ಪೋಷಕರಲ್ಲಿ ಜಾಗೃತಿ ಬರಲು ನಾರಾಯಣ ನೇತ್ರಾಲಯ ಮಯಾಫಿಯಾ ವೀಕ್ ಸೇರಿದಂತೆ ವಿವಿಧ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿ ಕೊಂಡಿದೆ. ಈ ಮೂಲಕವಾದ್ರೂ ಮಯೋಫಿಯ ಸಮಸ್ಯೆಗೆ ಬ್ರೇಕ್ ಬೀಳುವಂತಾಗಲಿ. ಹೀಗಾಗಿ, ಪೋಷಕರೇ ಬಿ ಅಲರ್ಟ್.
ಇದನ್ನೂ ಓದಿ:ನಿರೀಕ್ಷೆಗೂ ಮೀರಿದ ಆರೋಗ್ಯ ಲಾಭ! ಚಳಿಗಾಲದಲ್ಲಿ ನಿತ್ಯ ಕ್ಯಾರೆಟ್ ಜ್ಯೂಸ್ ತಪ್ಪಿಸಬೇಡಿ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್