newsfirstkannada.com

Myopia; ಕೋವಿಡ್ ಲಾಕ್​ ಡೌನ್​ ಬಳಿಕ ಮಕ್ಕಳಲ್ಲಿ ಸೃಷ್ಟಿಯಾಗಿದೆ ಹೊಸ ಸಮಸ್ಯೆ, ಏನದು?

Share :

Published September 26, 2024 at 4:29pm

    ಕೋವಿಡ್ ಲಾಕ್​ಡೌನ್ ಬಳಿಕ ಮಕ್ಕಳಲ್ಲಿ ಹೆಚ್ಚಾಗಿದೆ ದೃಷ್ಟಿದೋಷ

    ಬ್ರಿಟನ್ ನೇತ್ರವಿಜ್ಞಾನ ಸಂಸ್ಥೆಯೊಂದು ನಡೆಸಿದ ಅಧ್ಯಯನದಲ್ಲಿ ಏನಿದೆ?

    ಸಮೀಪದೃಷ್ಟಿ ದೋಷ ಯಾವ ದೇಶದ ಮಕ್ಕಳಲ್ಲಿ ಹೆಚ್ಚು ಕಂಡು ಬಂದಿದೆ?

ಜಾಗತಿಕವಾಗಿ ಮಕ್ಕಳಲ್ಲಿ ಸಮೀಪ ದೃಷ್ಟಿದೋಷವು ವ್ಯಾಪಕವಾಗಿ ಕಂಡುಬರುತ್ತಿದೆ. ಅದು ಯಾವ ಮಟ್ಟಿಗೆ ಅಂದ್ರೆ ಮೂರು ಮಕ್ಕಳಲ್ಲಿ ಒಂದು ಮಗು ಸಮೀಪ ದೃಷ್ಟಿದೋಷದಿಂದ ಒದ್ದಾಡುತ್ತಿದೆ ಎಂದು ಹೊಸ ಅಧ್ಯಯನವೊಂದು ಆತಂಕಕಾರಿ ವಿಷಯವನ್ನು ಹೊರ ಹಾಕಿದೆ. ಕೋವಿಡ್ 19 ಮಹಾಮಾರಿ ಕಾಲದ ಬಳಿಕ ಈ ಒಂದು ಸಮಸ್ಯೆ ಮಕ್ಕಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಬ್ರಿಟಿಷ್ ಜರ್ನಲ್ ಆಫ್ ಆಪ್ತಮಾಲಜಿ ( british journal of Ophthalmology ) ನಡೆಸಿದ ಹೊಸ ಅಧ್ಯಯನದಿಂದ ಈ ಒಂದು ಆತಂಕಕಾರಿ ವಿಷಯ ಬಹಿರಂಗಗೊಂಡಿದೆ.

ಸಮೀಪದೃಷ್ಟಿ ದೋಷ ಒಂದು ಜಾಗತಿಕವಾಗಿ ಕಳವಳ ಸೃಷ್ಟಿಸಿದೆ. ಈ ಸಮಸ್ಯೆಯಿಂದ ಬಳಲುವ ಮಕ್ಕಳ ಸಂಖ್ಯೆ 2050ರ ವೇಳೆಗೆ ಇನ್ನೂ ಮಿತಿ ಮೀರಲಿದೆಎಂದು ಅಂದಾಜಿಸಲಾಗಿದೆ. ಕೋವಿಡ್ ಸಮಯದಲ್ಲಿ ವಿಶ್ವವ್ಯಾಪಿಯಾಗಿ ಅಳವಡಿಕೆಯಾದ ಲಾಕ್​ಡೌನ್​ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ವೇಳೆ ಮಕ್ಕಳು ಡಿಜಿಟಲ್ ಸ್ಕ್ರೀನ್ ಎದುರು ಹೆಚ್ಚು ಹೆಚ್ಚು ಸಮಯ ಕಳೆದಿದ್ದಾರೆ. ಹೊರಗಿನ ಬೆಳಕು ನೋಡಿದ್ದು ಕಡಿಮೆ. ಇದರಿಂದಾಗಿ ಮೂರು ಜನ ಮಕ್ಕಳಲ್ಲಿ ಒಂದು ಮಗುವಿಗೆ ಸಮೀಪದೃಷ್ಟಿ ದೋಷದಂತಹ ಸಮಸ್ಯೆಗಳು ಎದುರಾಗುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Big Billion Days Sale: ಗ್ರಾಹಕರಿಗೆ ಬಂಪರ್ ಆಫರ್‌.. ಹೊಸ ಬೈಕ್, ಫೋನ್‌ಗಳ ಬೆಲೆ ಎಷ್ಟು?

ಈ ಒಂದು ಸಮಸ್ಯೆಯಿಂದ ಅತಿಹೆಚ್ಚು ಬಾಧಿತವಾಗಿದ್ದು ಏಷ್ಯಾ ಖಂಡ.  ಜಪಾನ್​ನಲ್ಲಿಯೇ ಸುಮಾರು 85ರಷ್ಟು ಮಕ್ಕಳು ಸಮೀಪದೃಷ್ಟಿ ದೋಷದಿಂದ ಬಳಲುತ್ತಿದ್ದಾರೆ. ಉತ್ತರ ಕೋರಿಯಾದಲ್ಲಿ ಸುಮಾರು ಶೇಕಡಾ 73 ರಷ್ಟು ಮಕ್ಕಳು ಈ ಸಮೀಪದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ. ಚೀನಾ ಹಾಗೂ ರಷ್ಯಾದಲ್ಲಿಯೂ ಕೂಡ ಶೇಕಡಾ 40 ರಷ್ಟು ಮಕ್ಕಳು ಈ ಸಮಸ್ಯೆಗೆ ಒಳಗಾಗಿರುವ ಬಗ್ಗೆ ಅಧ್ಯಯನದಲ್ಲಿ ಮಾಹಿತಿ ದೊರಕಿದೆ.

ನೇತ್ರವಿಜ್ಞಾನ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಕಾರ ಒಟ್ಟು 50 ದೇಶ ಹಾಗೂ 6 ಖಂಡಗಳಲ್ಲಿ ಒಟ್ಟು 50 ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ಹಾಗೂ ಹದಿಹರೆಯದವರನ್ನು ಅಧ್ಯಯನಕ್ಕೆ ಒಳಪಡಿಸಿ ಈ ಒಂದು ಮಾಹಿತಿನ್ನು ಕಲೆ ಹಾಕಿದೆ. ಉಗಾಂಡ ಹಾಗೂ ಪೆರುಗ್ವೆಯಂತಹ ದೇಶಗಳಲ್ಲಿ ಈ ಸಮಸ್ಯೆ ಅತ್ಯಂತ ಕಡಿಮೆ ಮಟ್ಟದಲ್ಲಿದ್ದು ಕೇವಲ ಶೇಕಡಾ 1ರಷ್ಟು ಇದೆ ಎಂದು ಹೇಳಲಾಗಿದೆ. ಇತ್ತ ಬ್ರಿಟನ್, ಐರ್ಲ್ಯಾಂಡ್ ಹಾಗೂ ಅಮೆರಿಕಾದಂತಹ ದೇಶಗಳಲ್ಲಿ ಈ ಸಮಸ್ಯೆ ಶೇಕಡಾ 15 ರಷ್ಟಿದೆ ಎಂದು ಅಧ್ಯಯನದಲ್ಲಿ ಸ್ಪಷ್ಟನೆ ನೀಡಲಾಗಿದೆ.

ಇದನ್ನೂ ಓದಿ: ಆಭರಣ ಪ್ರಿಯರಿಗೆ ಶಾಕ್​! ಚಿನ್ನದ ಬೆಲೆಯಲ್ಲಿ 0.20ರಷ್ಟು ಏರಿಕೆ

ಈ ಒಂದು ಸಂಸ್ಥೆ ನೀಡಿದ ವರದಿಯಲ್ಲಿ 1992 ರಿಂದ 2023ರ ಒಳಗೆ ಸಮೀಪ ದೃಷ್ಟಿಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಸುಮಾರು ಮೂರು ಪಟ್ಟು ಹೆಚ್ಚಳವಾಗಿದೆ ಎಂದು ಉಲ್ಲೇಖಿಸಲಾಗಿದೆ. ಸದ್ಯ ಇದು ಜಾಗತಿಕವಾಗಿ ಶೇಕಡಾ 36ರಷ್ಟು ಮಕ್ಕಳಲ್ಲಿ ಕಂಡು ಬಂದಿದ್ದು ಹೆಚ್ಚಿನ ಆತಂಕ ಸೃಷ್ಟಿಸಿದೆ. ಇದರಿಂದ ದೂರವಾಗಲು ಮಕ್ಕಳನ್ನು ಹೆಚ್ಚು ಡಿಜಿಟಲ್ ಸ್ಕ್ರೀನ್​ಗಳಿಂದ ದೂರ ಇಡುವಂತೆ ಸೂಚಿಸಲಾಗಿದೆ. ಟಿವಿ, ಮೊಬೈಲ್ ಪರದೆಯಲ್ಲಿ ಹೆಚ್ಚು ಮುಳುಗದಂತೆ ಮಕ್ಕಳನ್ನು ನಾವು ನೋಡಿಕೊಳ್ಳಬೇಕಿದೆ ಎಂದು ಅಧ್ಯಯನದಲ್ಲಿ ಸೂಚಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Myopia; ಕೋವಿಡ್ ಲಾಕ್​ ಡೌನ್​ ಬಳಿಕ ಮಕ್ಕಳಲ್ಲಿ ಸೃಷ್ಟಿಯಾಗಿದೆ ಹೊಸ ಸಮಸ್ಯೆ, ಏನದು?

https://newsfirstlive.com/wp-content/uploads/2024/09/myopia-Problem-1.jpg

Load More