/newsfirstlive-kannada/media/post_attachments/wp-content/uploads/2024/10/Mysore-Yaduveer-Odeyar-Family-3.jpg)
ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮೈಸೂರು ರಾಜಮನೆತನ ಯದುವಂಶಕ್ಕೆ ಶುಭ ಸುದ್ದಿ ಸಿಕ್ಕಿದೆ. ರಾಜವಂಶಸ್ಥ ಯದುವೀರ್, ತ್ರಿಷಿಕಾ ದಂಪತಿ 2ನೇ ಗಂಡು ಮಗುವಿನ ಜನ್ಮ ನೀಡಿದ್ದಾರೆ. ನವರಾತ್ರಿಯ ಸಂದರ್ಭದಲ್ಲಿ ಕೇಳಿ ಬಂದಿರುವ ಈ ಸುದ್ದಿ ರಾಜಮನೆತನಕ್ಕೆ ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ. ಇದರ ಜೊತೆಗೆ ಯದುವಂಶಕ್ಕೆ ಅಂಟಿಕೊಂಡಿರುವ ಅಲಮೇಲಮ್ಮನ ಶಾಪದ ಬಗ್ಗೆ ಚರ್ಚೆಯಾಗುತ್ತಿದೆ.
‘ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ರಾಜರಿಗೆ ಮಕ್ಕಳಾಗದಿರಲಿ’ ಇದು 1612ರಲ್ಲಿ ವಿಜಯನಗರ ಸಾಮ್ರಾಜ್ಯದ ರಾಣಿ ಅಲಮೇಲಮ್ಮ ಮೈಸೂರು ರಾಜರಿಗೆ ಹಾಕಿದ ಶಾಪ. ಈ ಶಾಪದಂತೆ ಮೈಸೂರು ರಾಜಮನೆತನದಲ್ಲಿ ಶ್ರೀಕಂಠದತ್ತ ಒಡೆಯರ್ ಅವರಿಗೆ ಮಕ್ಕಳಾಗಿರಲಿಲ್ಲ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ದತ್ತು ಪಡೆಯಲಾಗಿದೆ.
ದತ್ತು ಪಡೆದಿರುವ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಈಗ 2ನೇ ಗಂಡು ಮಗುವಿಗೆ ತಂದೆಯಾಗಿದ್ದಾರೆ. ಈ ಶುಭ ಸಂದರ್ಭದಲ್ಲಿ ಹಿರಿಯ ವಿದ್ವಾಂಸ, ಇತಿಹಾಸ ತಜ್ಞ ಡಾ. ಶೆಲ್ವಪಿಳೈ ಅಯ್ಯಂಗಾರ್ ಅವರು ನ್ಯೂಸ್ ಫಸ್ಟ್ ಜೊತೆ ಮಾತನಾಡಿದ್ದಾರೆ.
ಇದನ್ನೂ ಓದಿ: ಮೈಸೂರು ರಾಜ ಮನೆತನಕ್ಕೆ ಶುಭ ಸುದ್ದಿ.. 2ನೇ ಮಗುವಿಗೆ ತಂದೆಯಾದ ಯದುವೀರ್ ಕೃಷ್ಣದತ್ತ ಒಡೆಯರ್
ಡಾ. ಶೆಲ್ವಪಿಳೈ ಅಯ್ಯಂಗಾರ್ ಹೇಳಿದ್ದೇನು?
ಅಲಮೇಲಮ್ಮ ಶಾಪ ಕೊಟ್ಟ ಬಳಿಕ 28 ವರ್ಷಗಳಲ್ಲಿ ರಾಜವಂಶದ ಪ್ರಮುಖರೆಲ್ಲರೂ ಮರಣ ಹೊಂದಿದ್ದಾರೆ. ಹೀಗಾಗಿ ಜನ ಮಾತನಾಡುವುದು ಏನಂದ್ರೆ ನೇರವಾಗಿ ದತ್ತು ತೆಗೆದುಕೊಂಡವರಿಗೆ ಮಕ್ಕಳಾಗುತ್ತದೆ. ಆದರೆ ದತ್ತು ತೆಗೆದುಕೊಂಡ ಮಕ್ಕಳು ರಾಜವಂಶಸ್ಥರಾಗಿದ್ದು ಅವರಿಗೆ ಮಕ್ಕಳಾಗಲ್ಲ ಎನ್ನುತ್ತಾರೆ.
ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ಮಕ್ಕಳಾಗಲಿಲ್ಲ. 10ನೇ ಚಾಮರಾಜ ಒಡೆಯರ್ ಅವರಿಗೆ 2 ಮಕ್ಕಳಾಯ್ತು. ಆಮೇಲೆ ನಾಲ್ವಡಿ ಒಡೆಯರ್ ಅವರಿಗೆ ಮಕ್ಕಳಾಗಲಿಲ್ಲ. ನಂತರ ಜಯಚಾಮರಾಜೇಂದ್ರ ಒಡೆಯರ್ ದತ್ತು ತೆಗೆದುಕೊಂಡ ಮೇಲೆ ಮಕ್ಕಳಾಯ್ತು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಮಕ್ಕಳಾಗಲಿಲ್ಲ. ಹೀಗಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮಕ್ಕಳಾಗಿದೆ.
ಈ ಶಾಪದ ಪ್ರಕಾರ ದತ್ತು ತೆಗೆದುಕೊಂಡ ಮಕ್ಕಳಿಗೆ ಮಕ್ಕಳಾಗುತ್ತದೆ. ಮುಂದೆ ಆ ಮಕ್ಕಳಿಗೆ ಮಕ್ಕಳಾಗೋದಿಲ್ಲ ಅನ್ನೋ ಕಥೆ ಇದೆ. ಈಗ ಯದುವೀರ್‌ಗೆ ಮಕ್ಕಳಾಗಿದೆ. ಯದುವೀರ್ ಮಕ್ಕಳಾಗಿ ಮುಂದೆ ಮಕ್ಕಳಾಗುತ್ತಾ ಅನ್ನೋದನ್ನ ಜನ ಪ್ರಶ್ನೆ ಮಾಡುತ್ತಾರೆ.
ಇಬ್ಬರಲ್ಲಿ ಯುವರಾಜನ ಪಟ್ಟ ಯಾರಿಗೆ?
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಇಬ್ಬರು ಮಕ್ಕಳಲ್ಲಿ ಯಾರಿಗೆ ಪಟ್ಟ ಕಟ್ಟಲಾಗುತ್ತೆ ಅನ್ನೋ ಪ್ರಶ್ನೆಗೆ ಇತಿಹಾಸ ತಜ್ಞ ಡಾ. ಶೆಲ್ವಪಿಳೈ ಅಯ್ಯಂಗಾರ್ ಉತ್ತರಿಸಿದ್ದಾರೆ. ಯದುವಂಶದ ಪರಂಪರೆಗಳ ಪ್ರಕಾರ ಮೊದಲನೇ ಮಗನಿಗೆ ಯುವರಾಜನ ಪಟ್ಟ ಕಟ್ಟಲಾಗುತ್ತದೆ. ಹೀಗಾಗಿ ಒಡೆಯರ್ ಅವರ ಹಿರಿಯ ಪುತ್ರ ಆದ್ಯವೀರ್ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೇ ಮುಂದಿನ ಯುವರಾಜ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ