newsfirstkannada.com

ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಸ್ವಾಮೀಜಿಯ ಬರ್ಬರ ಕೊಲೆ? ಆತ್ಮಹತ್ಯೆಗೆ ಯತ್ನಿಸಿದ ಆರೋಪಿ

Share :

Published June 11, 2024 at 9:25am

  ಅನ್ನದಾನೇಶ್ವರ ಸ್ವಾಮೀಜಿ ಬರ್ಬರ ಹತ್ಯೆ

  ಆಪ್ತ ಸಹಾಯಕನಿಂದಲೇ ಸ್ವಾಮೀಜಿಯ ಕೊಲೆ

  ಕುಡಿತದ ಚಟಕ್ಕೆ ಒಳಗಾಗಿದ್ದ ಆರೋಪಿ ಆತ್ಮಹತ್ಯೆಗೆ ಯತ್ನ

ಮೈಸೂರು: ಕೆಳ ದಿನಗಳ ಹಿಂದೆ ಅನ್ನದಾನೇಶ್ವರ ಸ್ವಾಮೀಜಿ ಬರ್ಬರ ಹತ್ಯೆ ನಡೆದಿತ್ತು. ಸ್ವಾಮೀಜಿ ಆಪ್ತ ಸಹಾಯಕನಾಗಿದ್ದ ರವಿ ಎಂಬಾತನೇ ಸ್ವಾಮೀಜಿಯನ್ನು ಕೊಲೆ ಮಾಡಿದ್ದನು. ಆದರೆ ಕೊಲೆಗೈದ ಆರೋಪಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಆರೋಪಿ ರವಿ ವಿಷಸೇವನೆ ಮಾಡಿದ್ದು, ಆತನನ್ನು ಪೊಲೀಸರು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ತೀವ್ರನಿಗಾ ಘಟಕದಲ್ಲಿ ಕೊಲೆ ಆರೋಪಿ ರವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:ಬತ್ತಿ ಹೋಗಿದ್ದ ಕೃಷ್ಣಾ ನದಿಗೆ ಬಂತು ಜೀವ ಕಳೆ.. ಇಂದು ಆಲಮಟ್ಟಿ ಜಲಾಶಯದ ಒಳಹರಿವು, ನೀರಿನ ಮಟ್ಟ ಎಷ್ಟಿದೆ?

ಸ್ವಾಮೀಜಿಯ ಬರ್ಬರ ಕೊಲೆ

90 ವರ್ಷ ವಯಸ್ಸಿನ ಸಿ.ಶಿವಾನಂದ ಸ್ವಾಮೀಜಿಯನ್ನು  ಬರ್ಬರವಾಗಿ ಹತ್ಯೆಗೈಯ್ಯಲಾಗಿತ್ತು. ಮೈಸೂರಿನ ಸಿದ್ದಾರ್ಥನಗರದಲ್ಲಿ ಕೊಲೆ ಮಾಡಲಾಗಿತ್ತು. ಸ್ವಾಮೀಜಿಯ
ಆಪ್ತ ಸಹಾಯಕನಾಗಿದ್ದ ರವಿ ಎಂಬಾತ ಕೊಲೆ ಮಾಡಿದ್ದನು.

ಇದನ್ನೂ ಓದಿ: ವಿಧಾನ ಸೌಧದ ಮುಂದೆ ತಮಾಷೆ ಮಾಡಲು ಹೋದ ನಿಯೋಲ್​ ರಾಬಿನ್​ಸನ್.. ಬೆಚ್ಚಿಬಿದ್ದ ಆಟೋ ಚಾಲಕ

ಕುಡಿತದ ಚಟಕ್ಕೆ ಒಳಗಾಗಿದ್ದ ರವಿಗೆ ಸ್ವಾಮೀಜಿ ಬುದ್ಧಿವಾದ ಹೇಳಿದ್ದರು. ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಜರ್ಬದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ತನಿಖೆ ಆರಂಭಗೊಂಡಿದೆ. ಆರೋಪಿ‌ ರವಿ ಗುಣಮುಖನಾದ ಬಳಿಕ ವಿಚಾರಣೆಗೆ ತೀರ್ಮಾನಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಸ್ವಾಮೀಜಿಯ ಬರ್ಬರ ಕೊಲೆ? ಆತ್ಮಹತ್ಯೆಗೆ ಯತ್ನಿಸಿದ ಆರೋಪಿ

https://newsfirstlive.com/wp-content/uploads/2024/06/Ravi.jpg

Load More