newsfirstkannada.com

‘ಸಿದ್ದರಾಮಯ್ಯ ಮಗನ ಹೆಗಲ ಮೇಲೆ ಬಂದೂಕಿಟ್ಟು ಡಿಕೆ ಎದೆಗೆ ಹೊಡೆಯುತ್ತಿದ್ದಾರೆ’- ಪ್ರತಾಪ್ ಸಿಂಹ

Share :

Published January 17, 2024 at 12:04pm

    ‘ಡಿಕೆಶಿಗೆ ಎರಡೂವರೆ ವರ್ಷದ ಬಳಿಕ ಸಿಎಂ ಆಗುವ ಭರವಸೆ ಸಿಕ್ಕಿತ್ತು’

    ಸಿದ್ದರಾಮಯ್ಯ ಸಿಎಂ ಚೇರ್‌ಗೆ ಬಂದು ಕುಳಿತ ಮೇಲೆ ವರಸೆ ಬದಲಾಗಿದೆ

    ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಾಪ್ ಸಿಂಹ ಪ್ರತಿಕ್ರಿಯೆ

ಮೈಸೂರು: ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ತಮ್ಮ ಮಗನ ಹೆಗಲ ಮೇಲೆ ಬಂದೂಕು ಇಟ್ಟು ಡಿ.ಕೆ ಶಿವಕುಮಾರ್ ಎದೆಗೆ ಗುಂಡು ಹೊಡೆಯುತ್ತಿದ್ದಾರೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಸಂಸದ ಪ್ರತಾಪ ಸಿಂಹ, ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತೆ ಎಂದಿದ್ದಾರೆ. ಎಸ್.ಎಂ. ಕೃಷ್ಣ ಬಳಿಕ ಮತ್ತೊಮ್ಮೆ ಸಿಎಂ ಆಗುವ ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದೆ ಅಂತ ಹಳೇ ಮೈಸೂರು ಭಾಗದಲ್ಲಿ ಡಿಕೆ ಶಿವಕುಮಾರ್ ಪ್ರಚಾರ ಮಾಡಿದ್ದರು. ಒಕ್ಕಲಿಗರ ಮನೆ ಮನೆಗೆ ಹೋಗಿ ವೋಟ್‌ ಕೇಳಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿ ಚುನಾವಣೆ ನಾಯಕತ್ವ ವಹಿಸಿ ಚುನಾವಣೆಗೆ ಬಂಡವಾಳವನ್ನೂ ಹಾಕಿದ್ದರು. ಈ ಕಾರಣಕ್ಕಾಗಿಯೇ ಎರಡೂವರೆ ವರ್ಷದ ಬಳಿಕ ಸಿಎಂ ಆಗುವ ಭರವಸೆ ಸಿಕ್ಕಿತ್ತು. ಆದರೆ ಸಿದ್ದರಾಮಯ್ಯ ಸಿಎಂ ಚೇರ್‌ಗೆ ಬಂದು ಕುಳಿತ ಮೇಲೆ ವರಸೆ ಬದಲಾಗಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಇದನ್ನೂ ಓದಿ: Breaking News: ಲೋಕಸಭೆ ಚುನಾವಣೆ ಗೆದ್ದರೆ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ -ಡಾ.ಯತೀಂದ್ರ

ಸಿದ್ದರಾಮಯ್ಯ ಮೊದಲು ಎಂ.ಬಿ‌ ಪಾಟೀಲ್ ಬಾಯಿಂದ ಐದು ವರ್ಷ ನಾನೇ ಸಿಎಂ ಅಂತ ಹೇಳಿಸಿದ್ದರು. ನಂತರ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ಕೆ‌.ಎನ್ ರಾಜಣ್ಣ ಅವರಿಂದ ಹೇಳಿಕೆ ಕೊಡಿಸಿದ್ದಾರೆ. ಸ್ವತಃ ಸಿದ್ದರಾಮಯ್ಯ ಅವರೇ ನಾನೇ ಐದು ವರ್ಷ ಸಿಎಂ ಅಂತಾನೂ ಹೇಳಿದ್ದರು. ಈಗ ಮಗನ ಮೂಲಕ ಹೇಳಿಸುತ್ತಿದ್ದಾರೆ. ಇವತ್ತು ಸಿಎಂ ಪುತ್ರ ಡಾ.ಯತೀಂದ್ರ ಹಾಸನದಲ್ಲಿ ನೀಡಿದ ಹೇಳಿಕೆಯನ್ನು ಗಮನಿಸಿದ್ದೇನೆ. ನಮ್ಮ ಸಮುದಾಯದವರು, ಮುಸಲ್ಮಾನರು ಸಹಕಾರ ನೀಡಿದ್ದರಿಂದ ಸರ್ಕಾರ ಬಂತು ಅಂತ ಹೇಳಿದ್ದಾರೆ. ನಮಗೆ ಸ್ವಜಾತಿಯವರು, ಮುಸಲ್ಮಾನರು ಮಾತ್ರ ಮುಖ್ಯ ಅನ್ನುವ ಸಂದೇಶ ರವಾನಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇನ್ನು, ಚಾಮುಂಡೇಶ್ವರಿಯಲ್ಲಿ ಒಕ್ಕಲಿಗರು, ವರುಣದಲ್ಲಿ ಲಿಂಗಾಯತರು ಕಾಂಗ್ರೆಸ್ ಪಕ್ಷಕ್ಕೆ ಮತ ‌ನೀಡದೆ ಕಾಂಗ್ರೆಸ್ ಸರ್ಕಾರ ಬಂತಾ? 39 ಲಿಂಗಾಯತರು, ಹತ್ತಾರು ಒಕ್ಕಲಿಗರು ಶಾಸಕರಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಕಾರಣಕ್ಕೆ ದಲಿತರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು. ರಾಜ್ಯದ ಎಲ್ಲ ಜಾತಿ, ಜನಾಂಗದವರಿಗೆ ದೋಖಾ ಆಗಿದೆ ಅಂತ ಅರ್ಥ ಮಾಡಿಕೊಳ್ಳಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಸಿದ್ದರಾಮಯ್ಯ ಮಗನ ಹೆಗಲ ಮೇಲೆ ಬಂದೂಕಿಟ್ಟು ಡಿಕೆ ಎದೆಗೆ ಹೊಡೆಯುತ್ತಿದ್ದಾರೆ’- ಪ್ರತಾಪ್ ಸಿಂಹ

https://newsfirstlive.com/wp-content/uploads/2023/09/PRATAP_SIMHA.jpg

Load More