newsfirstkannada.com

ಟೇಕ್​​ ಓವರ್​ ಮಾಡಲು ಹೋಗಿ ಬಸ್​ಗೆ ಗುದ್ದಿದ ಇನೋವಾ; ಭೀಕರ ಕಾರು ಅಪಘಾತಕ್ಕೆ ಇದೇ ಕಾರಣ!

Share :

29-05-2023

    ಭೀಕರ ಕಾರು ಅಪಘಾತಕ್ಕೆ ಇದೇ ಕಾರಣ!

    ಓವರ್​ ಟೇಕ್ ಮಾಡಲು ಹೋಗಿ ಬಸ್​ಗೆ ಗುದ್ದಿದ ಇನೋವಾ

    ಸ್ಥಳದಲ್ಲೇ 10 ಮಂದಿ ದಾರುಣ ಸಾವು

ಮೈಸೂರು: ಕೊಳ್ಳೇಗಾಲದ ಕುರುಬೂರು ಗ್ರಾಮದ ಬಳಿ ಖಾಸಗಿ ಬಸ್​​ ಮತ್ತು ಕಾರ್​​ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ 10 ಮಂದಿ ದಾರುಣವಾಗಿ ಉಸಿರು ಚೆಲ್ಲಿದ್ದಾರೆ. ಮೃತ 10 ಮಂದಿ ಕೂಡ ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಮೂಲದವರು. ಸುಜಾತ, ಸಂದೀಪ್, ಮಂಜುನಾಥ್, ಪೂರ್ಣಿಮಾ, ಗಾಯತ್ರಿ, ಆದಿತ್ಯಾ, ಬಸವ, ಕೊಟ್ರೇಶ್ (45), ಪವನ್ (10), ಕಾರ್ತಿಕ್ (08) ಮೃತ ದುರ್ದೈವಿಗಳು. ಮೂರು ದಿನ ಹಿಂದೆ ಬಳ್ಳಾರಿಯಿಂದ 11 ಮಂದಿ ಪ್ರವಾಸಕ್ಕೆಂದು ಬಂದಿದ್ದರು. ಇವತ್ತು ಮೈಸೂರಿನಿಂದ ಇನ್ನೋವಾ ಕಾರಿನಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಹೊರಟಿದ್ದರು. ಆದರೆ ದೇವರ ದರ್ಶನ ಪಡೆಯಬೇಕಿದ್ದರು. ಮಾರ್ಗ ಮಧ್ಯದಲ್ಲೇ ದೇವರ ಪಾದ ಸೇರಿದ್ದಾರೆ.

ರಸ್ತೆಯ ತಿರುವಿನಲ್ಲಿ ಕಾರು ಚಾಲಕನ ನಿರ್ಲಕ್ಷ್ಯ

ಇನ್ನು, ಬಸ್​​ನಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಭೀಕರ ಅಪಘಾತದ ದೃಶ್ಯಗಳು ಸೆರೆಯಾಗಿದೆ. ರಸ್ತೆಯ ತಿರುವಿನಲ್ಲಿ ಖಾಸಗಿ ಬಸ್​ ಎದುರಿಗೇ ಇನ್ನೋವಾ ಕಾರು ವೇಗವಾಗಿ ಬಂದಿದೆ. ಬಸ್​ ಚಾಲಕ ಕೂಡ, ಬಲಕ್ಕೆ ತೆಗೆದುಕೊಳ್ಳಲು ನೋಡಿದ್ದಾನೆ. ಆದ್ರೆ ಅಷ್ಟರಲ್ಲಾಗಲೇ ಅತಿ ವೇಗದಲ್ಲಿದ್ದ ಎರಡೂ ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯ ರಭಸಕ್ಕೆ ಖಾಸಗಿ ಬಸ್​ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಇನ್ನೋವಾ ಕಾರು ಗುರುತೇ ಸಿಗದಷ್ಟು ನಜ್ಜುಗುಜ್ಜಾಗಿದೆ. ಇನ್ನು ಡಿಕ್ಕಿಯ ರಭಸಕ್ಕೆ ಮೃತದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿ ಆಗಿವೆ. ಕೂಡಲೇ ಅಲ್ಲೇ ಇದ್ದ ಸ್ಥಳೀಯರು ಕೂಡಲೇ ಆಂಬುಲೆನ್ಸ್​ಗೆ ಹಾಗೂ ಪೊಲೀಸ್​​ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.

ಭೀಕರ ಅಪಘಾತದಲ್ಲಿ ಬದುಕಿಳಿದ ಪುಟ್ಟ ಬಾಲಕ

ಇನ್ನು, ಈ ಭೀಕರ ಅಪಘಾತದಲ್ಲಿ ಪುಟ್ಟ ಬಾಲಕ ಪವಾಡ ಸದೃಶ್ಯ ರೀತಿ ಬದುಕುಳಿದಿದ್ದಾನೆ. ಆದರೆ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆತನ ಪರಿಸ್ಥಿತಿ ಚಿಂತಾಜನಕವಾಗಿದೆ. ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಆಸ್ಪತ್ರೆ ಬಳಿ ಆಕ್ರಂದನ ಮುಗಿಲುಮುಟ್ಟಿತ್ತು.

ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಣೆ

ಇನ್ನು ಭೀಕರ ಅಪಘಾತದ ಬಗ್ಗೆ ಟ್ವೀಟ್​ ಮಾಡಿರುವ ಸಿಎಂ ಸಿದ್ದರಾಮಯ್ಯ, ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಹಾಗೂ ಮೃತರ ಕುಟುಂಬಕ್ಕೆ ತಲಾ 2ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಅದೇನೆ ಇರಲಿ ದೂರದ ಬಳ್ಳಾರಿಯಿಂದ ದೇವರ ದರ್ಶನಕ್ಕೆ ಬಂದವರು, ಭೀಕರ ಅಪಘಾತಕ್ಕೆ ಬಲಿಯಾಗಿದ್ದು, ನಿಜಕ್ಕೂ ದುರಂತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೇಕ್​​ ಓವರ್​ ಮಾಡಲು ಹೋಗಿ ಬಸ್​ಗೆ ಗುದ್ದಿದ ಇನೋವಾ; ಭೀಕರ ಕಾರು ಅಪಘಾತಕ್ಕೆ ಇದೇ ಕಾರಣ!

https://newsfirstlive.com/wp-content/uploads/2023/05/accident-24.jpg

Load More