/newsfirstlive-kannada/media/post_attachments/wp-content/uploads/2025/02/MYS-CHAMUNDI-HILL-1.jpg)
ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕಿಡಿಗೇಡಿಗಳ ಕೃತ್ಯದಿಂದ ಬೆಂಕಿ ಹೊತ್ತಿ ಉರಿಯುತ್ತಿದ್ದು, ಅಗ್ನಿಯ ಕೆನ್ನಾಲಿಗೆಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಮಾಡಲಾಗುತ್ತಿದೆ.
ಬೆಂಕಿ ಕೆನ್ನಾಲಿಗೆಗೆ ಗಿಡ-ಮರಗಳು ಸುಟ್ಟು ಕರಕಲಾಗಿವೆ. ಬೆಟ್ಟದ ಸುತ್ತ ನೂರಾರು ಎಕರೆಗೆ ಬೆಂಕಿಯ ಕೆನ್ನಾಲಿಗೆ ಆವರಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಮಾಡ್ತಿದೆ. ಆದರೆ ಬೆಂಕಿ ತಹಬದಿಗೆ ಸಿಗುತ್ತಿಲ್ಲ. ಒಟ್ಟು ಮೂರು ಅಗ್ನಿಶಾಮಕ ವಾಹನ ದೌಡಾಯಿಸಿವೆ.
ಹೇಗಿದೆ ಕಾರ್ಯಾಚರಣೆ..?
ಬೆಂಕಿ ಕಾಣಿಸಿಕೊಳ್ತಿದ್ದಂತೆ ಅಲ್ಲಿದ್ದ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲೇ ಅಗ್ನಿಶಾಮ ಸಿಬ್ಬಂದಿಗೆ ಮಾಹಿತಿ ಹೋಗಿದ್ದು, ಅವರೂ ಕೂಡ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಯತ್ನಿಸ್ತಿದ್ದಾರೆ. ಆದರೆ ಬೆಂಕಿಯ ಕೆನ್ನಾಲಿಗೆ ದೊಡ್ಡಾಗಿ ಹರಡಿದೆ. ಬೆಂಕಿ ನಂದಿಸಲು ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಕೆಲ ಪ್ರವಾಸಿಗರು ಸಹಾಯ ಮಾಡ್ತಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾ ಕ್ಯಾಂಪ್ ಸೇರಿದ ಸೀಕ್ರೆಟ್ ವೆಪನ್.. ಪಾಕ್ ವಿರುದ್ಧ ಧಮಾಕಾ ಪಕ್ಕಾ..!
ಹೇಗಿದೆ ತೀವ್ರತೆ..?
ಬೆಂಕಿಯ ತೀವ್ರತೆ ಹೆಚ್ಚಾಗುತ್ತಲೇ ಇದೆ. ನೂರಾರು ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ಆವರಿಸಿಕೊಂಡಿದೆ. ಮೊದಲು ರಸ್ತೆ ಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆ ನಂತರ ಬೆಂಕಿಯ ಕಿಡಿಯಿಂದಾಗಿ ರಸ್ತೆಯ ಎರಡೂ ಬದಿಗೂ ಹೊತ್ತಿಕೊಂಡಿದೆ. ಇದೀಗ ನಿಯಂತ್ರಣ ಸಿಗದ ಪ್ರಮಾಣದಲ್ಲಿ ಇಡೀ ಅರಣ್ಯದ ತುಂಬಾ ಬೆಂಕಿ ಆವರಿಸಿದೆ. ಅದನ್ನು ನಂದಿಸೋದು ದೊಡ್ಡ ಸವಾಲ್ ಆಗಿದೆ. ಇನ್ನು ಅರಣ್ಯದಲ್ಲಿರುವ ಅನೇಕ ಪ್ರಾಣಿ, ಪಕ್ಷಿಗಳು, ಸರಸೃಪಗಳು ಪ್ರಾಣ ಸಂಕಟಕ್ಕೆ ಸಿಲುಕಿವೆ.
ಮುಂಜಾಗೃತ ಕ್ರಮ ಹೇಗಿದೆ..?
ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ, ಚಾಮುಂಡಿ ಬೆಟ್ಟಕ್ಕೆ ಬರೋರಿಗೆ ಎಚ್ಚರಿಕೆ ನೀಡಲಾಗಿದೆ. ಇಂದು ಶುಕ್ರವಾರ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಬೆಟ್ಟದತ್ತ ಆಗಮಿಸುತ್ತಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನೀಡುವ ಎರಡೂ ರಾಜಮಾರ್ಗವಾದ ಉತ್ತನಹಳ್ಳಿ ರಸ್ತೆ ಬಂದ್ ಮಾಡಲಾಗಿದೆ. ಬೆಂಕಿ ನಿಯಂತ್ರಣಕ್ಕೆ ಬಂದ ನಂತರ ಪರಿಸ್ಥಿತಿ ಸಹಜಸ್ಥಿತಿಗೆ ಮರಳಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ