ಮೈಸೂರು ಚಾಮುಂಡಿ ದೇವಿಯ ಸೀರೆಗಳ ಕಳ್ಳತನ ಆರೋಪ; ನಾಡದೇವತೆ ಸನ್ನಿಧಿಯಲ್ಲಿ ಹೊಸ ಸಂಚಲನ

author-image
Veena Gangani
Updated On
ಮೈಸೂರು ಚಾಮುಂಡಿ ದೇವಿಯ ಸೀರೆಗಳ ಕಳ್ಳತನ ಆರೋಪ; ನಾಡದೇವತೆ ಸನ್ನಿಧಿಯಲ್ಲಿ ಹೊಸ ಸಂಚಲನ
Advertisment
  • ನಾಡ ದೇವತೆಯ ಸನ್ನಿಧಿಯಲ್ಲಿ ಅವ್ಯವಹಾರ ಸದ್ದು
  • ನಾಡದೇವಿ ಶ್ರೀ ಚಾಮುಂಡಿ ಸೀರೆಗೆ ಕನ್ನ ಹಾಕಿದ್ದಾರಾ?
  • ಏನೂ‌ ಆಗಿಲ್ಲ ಇದೆಲ್ಲ ಷಡ್ಯಂತ್ರ ಎಂದು ಆರೋಪಕ್ಕೆ ಪ್ರತ್ಯಾರೋಪ

ನಾಡ ಅಧಿದೇವತೆ ಚಾಮುಂಡಿ ತಾಯಿಯ ಸನ್ನಿಧಾನದಲ್ಲಿ ಅವ್ಯವಹಾರ ಸದ್ದು ಮಾಡ್ತಿದೆ. ದೇವರ ಸೀರೆಗೆ ಕನ್ನ ಹಾಕಿದೆ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರರು ದೂರು ಸಲ್ಲಿಸಿದ್ದಾರೆ. ನಾಡಿನ ಅಧಿದೇವತೆ ಎಂದರೆ ಕೇವಲ ರಾಜ್ಯ, ಜಿಲ್ಲೆಯವರಿಗಷ್ಟೇ ಅಲ್ಲದೇ ಹೊರ ರಾಜ್ಯ, ವಿದೇಶಗರಿಗೂ ಭಕ್ತಿ-ಪ್ರೀತಿ. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಕಟ್ಟಿಕೊಳ್ಳೋದು ಸರ್ವೆ-ಸಾಮಾನ್ಯ.

ಇದನ್ನೂ ಓದಿ: ಮೆಹಂದಿ ಮಾಸುವ ಮುನ್ನವೇ ಶೂಟಿಂಗ್​ ಸೆಟ್​ಗೆ ಬಂದ ಚಿನ್ನುಮರಿ ಜಾಹ್ನವಿ; ಫ್ಯಾನ್ಸ್​ ಫುಲ್​ ಖುಷ್

publive-image

ತಮ್ಮ ಕಷ್ಟ ಕಾರ್ಪಣ್ಯ ದೂರವಾದಾಗ ಹರಕೆಗಳನ್ನ ಈಡೇರಿಸುವುದೂ ರೂಢಿ-ಸಂಪ್ರದಾಯ. ಭಕ್ತರು ಸಲ್ಲಿಸಿದ ಹರಕೆ ದೇವರ ಪಾಲಾಗ್ತಿದೆಯೋ.. ಅಥವಾ ಚಾಮುಂಡೇಶ್ವರಿ ಕಾರ್ಯದರ್ಶಿ ಪಾಲಾಗ್ತಿದೆಯೋ ಅನ್ನೋ ಅನುಮಾನ ಈ ವಿಡಿಯೋ ನೋಡಿದ ಭಕ್ತರಿಗೆ ಮೂಡ್ದೆ ಇರಲ್ಲ. ಚಾಮುಂಡೇಶ್ವರಿ ಬೆಟ್ಟದ ಕಾರ್ಯದರ್ಶಿ ರೂಪಾ, ನಾಡ ಅಧಿದೇವತೆಗೆ ಉಡಿಸುವ ಸೀರೆಗಳನ್ನ ಕದ್ದೊಯ್ಯುತ್ತಿದ್ದಾರೆ ಅಂತ ಹೋರಾಟಗಾರ ಸ್ನೇಹಮಯಿ‌ ಕೃಷ್ಣ ಮೈಸೂರಿನ ಕೆ.ಆರ್.ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

publive-image

ಆದರೆ, ಇದೆಲ್ಲಾ ಸುಳ್ಳು.. ಇದು ಪಿತೂರಿ. ಎಲ್ಲಾ ಕಡೆ ಸಿಸಿಟಿವಿ ಇದೆ. ಯಾವುದೇ ಕಳ್ಳತನ ನಡೆದಿಲ್ಲ. ಅದರಲ್ಲಿ ಇದ್ದದ್ದು ಫೈಲ್ಸ್​ಗಳು ಮಾತ್ರ. ಈ ಸಂಬಂಧ ಸಿಬ್ಬಂದಿಯೊಬ್ಬರನ್ನ ಅಮಾನತು ಮಾಡಿ ತನಿಖೆಗೆ ನಾನೇ ಆದೇಶ ಮಾಡಿದ್ದೀನಿ ಅನ್ನೋದು ಕಾರ್ಯದರ್ಶಿ ರೂಪಾ ಹೇಳಿದ್ದಾರೆ. ಅತ್ತ ವಿಡಿಯೋ ಸಮೇತ ಆರೋಪ ಅಂತ ವಾದ ಮಾಡ್ತಿದ್ರೆ, ಇತ್ತ ಅದೆಲ್ಲ ಸುಳ್ಳು ಅಂತಾ ರೂಪಾ ಅವರ ಪ್ರತಿವಾದವಾಗಿದೆ. ಈ ಕುರಿತು ಸೂಕ್ತ ತನಿಖೆ ಅವಶ್ಯಕವಿದ್ದು, ಪ್ರಕರಣದ ಸತ್ಯಾಸತ್ಯತೆ ಹೊರಬಂದು ಭಕ್ತರ ಅನುಮಾನಕ್ಕೆ ಇತಿಶ್ರೀ ಹೇಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment