Advertisment

Mysore Dasara: ಅಭಿಮನ್ಯು ಕೊಡಗಿನ ಕುವರ.. ಅಂಬಾರಿ ಹೊರವವನ ಸಾಧನೆ ಒಂದೆರಡಲ್ಲ!

author-image
AS Harshith
Updated On
Mysore Dasara: ಅಭಿಮನ್ಯು ಕೊಡಗಿನ ಕುವರ.. ಅಂಬಾರಿ ಹೊರವವನ ಸಾಧನೆ ಒಂದೆರಡಲ್ಲ!
Advertisment
  • ಅರ್ಜುನ ಬಳಿಕ ಅಂಬಾರಿ ಹೊರುವ ಸೌಭಾಗ್ಯ ಅಭಿಮನ್ಯುಗೆ
  • ಅಭಿಮನ್ಯುವಿಗೆ ಈಗ ವಯಸ್ಸೆಷ್ಟು? ಆತನ ಸಾಧನೆಗಳೇನೇನು?
  • ಎಷ್ಟು ವರ್ಷದಿಂದ ದಸರಾದಲ್ಲಿ ಭಾಗವಹಿಸುತ್ತಿದ್ದಾನೆ ಅಭಿಮನ್ಯು

ಅರ್ಜುನನ ಬಳಿಕ ನಾಡದೇವತೆ ತಾಯಿ ಚಾಮುಂಡೇಶ್ವರಿಯನ್ನು ವಿಶ್ವ ದರ್ಶನ ಮಾಡುವ ಸೌಭಾಗ್ಯ ಅಭಿಮನ್ಯುವಿಗೆ ಸಿಕ್ಕಿತು. ಸತತ 11 ವರ್ಷಗಳಿಂದ ಅಂಬಾರಿ ಹೊತ್ತ ಅರ್ಜುನ ತನ್ನ ಹೆಗಲ ಮೇಲಿದ್ದ ಜವಾಬ್ದಾರಿಯನ್ನು 2020ರಲ್ಲಿ ಅಭಿಮನ್ಯುವಿನ ಕೈಗಿಟ್ಟನು. ಅಂದಿನಿಂದ ಅಭಿಮನ್ಯು 4 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತು ದಸರಾ ಮೆರುಗನ್ನು ಹೆಚ್ಚಿಸುತ್ತಾ ಬಂದಿದ್ದಾನೆ. ಇಂದು 5ನೇ ಬಾರಿಗೆ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ. ಈತನ ಗಜ ಗಾಂಭೀರ್ಯ ಕಾಣಲು ವಿಶ್ವವೇ ಕಾದುಕುಳಿತಿದೆ. ಆದರೆ ಅದಕ್ಕೂ ಮುನ್ನ ಅಭಿಮನ್ಯು ಸಿಕ್ಕಿದ್ದೆಲ್ಲಿ? ಆತನ ಸಾಧನೆಗಳೇನೇನು? ತಿಳಿಯೋಣ ಬನ್ನಿ.

Advertisment

ಅಭಿಮನ್ಯುವನ್ನು 1970ರಲ್ಲಿ ಕೊಡಗು ಜಿಲ್ಲೆ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು. ಆ ಬಳಿಕ ಮತ್ತಿಗೋಡು ಶಿಬಿರದಲ್ಲಿ ಅಭಿಮನ್ಯುವನ್ನು ಪಳಗಿಸಲಾಯಿತು. ಸದ್ಯ ಅಭಿಮನ್ಯುವಿಗೆ 58 ವರ್ಷ ವಯಸ್ಸು.

publive-image

ಇದನ್ನೂ ಓದಿ: ಜಂಬೂ ಸವಾರಿಯಲ್ಲಿ ಕಾಡಲಿದೆ ಅರ್ಜುನನ ಅನುಪಸ್ಥಿತಿ; ಅಂಬಾರಿ ಹೊರುವ ಅಭಿಮನ್ಯುಗೆ ಅರ್ಜುನನೇ ಆದರ್ಶವಾಗಿದ್ದ..

ಅರ್ಜುನನಂತೆಯೇ ಅಭಿಮನ್ಯು ಕೂಡ ಪುಂಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಎತ್ತಿದ ಕೈ. ಸುಮಾರು 140 ರಿಂದ 150 ಕಾಡಾನೆಗಳನ್ನು ಸೆರೆ ಹಿಡಿಯಲು ಸಹಾಯ ಮಾಡಿದ್ದಾನೆ. 40 ರಿಂದ 50 ಹುಲಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾನೆ.

Advertisment

ಅಭಿಮನ್ಯು 2012ರಿಂದ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಾ ಬಂದಿದೆ. 2015ರಲ್ಲಿ ಕರ್ನಾಟಕ ವಾದ್ಯಗೋಷ್ಠಿ ತಂಡದ ಗಾಡಿಯನ್ನು ಜಂಬೂಸವಾರಿ ಮೆರವಣಿಗೆಯಲ್ಲಿ ಎಳೆಯಿತು. ಅಲ್ಲಿಂದ ಅಂಬಾರಿ ಹೊರುವ ಎಲ್ಲ ಲಕ್ಷಣವ ಅಭಿಮನ್ಯುವಿನಲ್ಲಿ ಕಾಣಿಸಿತು.

publive-image

ಇದನ್ನೂ ಓದಿ: Mysore Dasara: ಮೈಸೂರು ದಸರಾ ಶುರುವಾಗಿದ್ದು ಹೇಗೆ? ಯಾವಾಗ? ಇಂಟ್ರೆಸ್ಟಿಂಗ್‌ ವಿಷಯಗಳು ಇಲ್ಲಿವೆ

ಅಭಿಮನ್ಯು 2020ರಿಂದ ಚಿನ್ನದ ಅಂಬಾರಿ ಹೊರುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಾ ಬಂದಿದೆ. 2.74 ಮೀಟರ್ ಎತ್ತರ ಇರುವ ಅಭಿಮನ್ಯು ಆನೆ, 4700-5000 ಕೆ.ಜಿ.ಗೂ ಹೆಚ್ಚಿನ ತೂಕವಿದೆ. ನಾಡಿಗೆ ಬಂದಿದ್ದ 30ಕ್ಕೂ ಹೆಚ್ಚು ಹುಲಿಗಳನ್ನು ಹಿಡಿಯುವಲ್ಲಿ ಅಭಿಮನ್ಯು ಯಶಸ್ವಿಯಾಗಿದ್ದಾನೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment