/newsfirstlive-kannada/media/post_attachments/wp-content/uploads/2024/10/Mysore-dasara-3.jpg)
ಮೈಸೂರು ದಸರಾ. ಅದು ಎಷ್ಟೊಂದು ಸುಂದರ. ಕಳೆದ ಕೆಲ ವರ್ಷಗಳಿಂದ ಬೇರೆ ಬೇರೆ ಕಾರಣಕ್ಕೆ ಸಂಭ್ರಮ ಕುಂದಿತ್ತು. ಆದ್ರೆ, ಈ ಬಾರಿ ಸಮೃದ್ಧ ಮಳೆ, ರಾಜ್ಯ ಸುಭಿಕ್ಷವಾಗಿರುವ ಹೊತ್ತಲ್ಲಿ ದಸರಾ ಸಂಭ್ರಮ ದುಪ್ಪಟ್ಟಾಗಿದೆ. ಈ ಬಾರಿ ಅದ್ಧೂರಿ ದಸರಾ ಆಚರಣೆಯ ಅಂತಿಮ ಘಟ್ಟಕ್ಕೆ ತಲುಪಿದ್ದು, ಅರಮನೆಯಲ್ಲಿ ವಿಶೇಷ ಪೂಜೆಗಳು ನಡೆಯಲಿವೆ.
ಇದು ಕರ್ನಾಟಕದ ಉತ್ಸವ. ಕರುನಾಡಿನ ಮಣ್ಣಿನ ಸಂಭ್ರಮ. ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಸ್ವರ್ಗವೇ ಧರೆಗಿಳಿದಂತೆ ಭಾಸವಾಗ್ತಿದೆ. ವಿದ್ಯುತ್​ ದೀಪಗಳಿಂದ ಅಲಂಕೃತಗೊಂಡ ಮೈಸೂರು, ಎತ್ತ ನೋಡಿದ್ರು ಸ್ವರ್ಗಾನುಭವ ನೀಡ್ತಿದೆ. ಇತ್ತ, ಅರಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ವೇದ-ಮಂತ್ರ ಘೋಷಗಳು ಕೇಳ್ತಿವೆ.
/newsfirstlive-kannada/media/post_attachments/wp-content/uploads/2024/10/Mysore-dasara.jpg)
ಕೊನೆ ಘಟ್ಟ ತಲುಪಿದ ವಿಜಯದಶಮಿ ಸಂಭ್ರಮ, ಸಡಗರ!
ಮೈಸೂರಿನಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ವಿಜಯದಶಮಿ ನಿಮಿತ್ತ ಅರಮನೆಯಲ್ಲಿ ವಿಶೇಷ ಪೂಜೆಗಳಿಗೆ ಸಿದ್ಧತೆ ಶುರುವಾಗಿದೆ. ಹಾಗಾದರೆ, ಅರಮನೆಯಲ್ಲಿ ವಿಜಯದಶಮಿಯ ಪೂಜಾ ವಿಧಾನಗಳು ಹೇಗೆಲ್ಲಾ ಇರಲಿದೆ ಅನ್ನೋದನ್ನ ನೋಡೋದಾದ್ರೆ,
ಮೈಸೂರು ದಸರಾ ವೈಭವ
ಚಾಮುಂಡಿ ಬೆಟ್ಟದಿಂದ ಉತ್ಸವ ಮೂರ್ತಿ ಬೆಳಿಗ್ಗೆ 8 ಗಂಟೆಗೆ ಹೊರಬಂದು ಮೆರವಣಿಗೆ ಮೂಲಕ ಸಾಗಲಿದೆ. ಬೆಳಗ್ಗೆ 9.45ಕ್ಕೆ ಪೂಜಾ ವಿಧಾನಗಳು ಆರಂಭ ಆಗಲಿವೆ. 10:15ಕ್ಕೆ ಅರಮನೆಯಲ್ಲಿ ಉತ್ತರ ಪೂಜೆ ನಿಮಿತ್ತ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವು ಆಗಮಿಸಲಿದೆ. ಬೆಳಗ್ಗೆ 10.15ಕ್ಕೆ ಅರಮನೆ ಶ್ವೇತವರಹ ದೇವಸ್ಥಾನದಲ್ಲಿ ಜಟ್ಟಿಗಳ ಸಿದ್ಧತೆ ಆರಂಭವಾಗಲಿದ್ದು, 10:45 ರಿಂದ 11 ಗಂಟೆ ಒಳಗೆ ಅರಮನೆ ಕರಿಕಲ್ಲು ತೊಟ್ಟಿಯಲ್ಲಿ ಜಟ್ಟಿ ಕಾಳಗ ನಡೆಯಲಿದೆ. 11.20ರಿಂದ 11.45ರವರೆಗೆ ಆನೆ ಬಾಗಿಲನ ಮೂಲಕ ವಿಜಯಯಾತ್ರೆ ಹೊರಡುವ ಕನ್ನಡಾಂಬೆ ದೇವಾಲಯದ ಒಳಭಾಗದಲ್ಲಿರುವ ಬನ್ನಿ ಮರಕ್ಕೆ ಯದುವೀರ್ ಪೂಜೆ ಸಲ್ಲಿಸಲಿದ್ದಾರೆ. ಇದಾದ ಬಳಿಕ ರಾಜವಂಶಸ್ಥರು ಮನೆಗೆ ಮರಳುವ ಮೂಲಕ ನವರಾತ್ರಿಯ 10 ದಿನದ ಧಾರ್ಮಿಕ ಕಾರ್ಯಗಳು ಸಂಪನ್ನಗೊಳ್ಳಲಿವೆ.
/newsfirstlive-kannada/media/post_attachments/wp-content/uploads/2024/10/Mysore-dasara-4.jpg)
ಇದನ್ನೂ ಓದಿ: ಐತಿಹಾಸಿಕ 415ನೇ ಜಂಬೂ ಸವಾರಿಗೆ ಕ್ಷಣಗಣನೆ.. 5ನೇ ಬಾರಿ ಅಂಬಾರಿ ಹೊರಲಿರುವ ಕ್ಯಾ.ಅಭಿಮನ್ಯು!
ಬನ್ನಿಮಂಟಪದಲ್ಲಿ ಸಂಜೆ 7 ಗಂಟೆಗೆ ಪಂಜಿನ ಕವಾಯತು!
ಇನ್ನು, ಪ್ರತಿವರ್ಷದ ಸಂಪ್ರದಾಯದಂತೆ ಪಂಜಿನ ಕವಾಯತು ನಡೆಯಲಿದೆ. ಸಂಜೆ 7 ಗಂಟೆಗೆ ಆಕರ್ಷಕ ಪಂಜಿನ ಕವಾಯತು ಪ್ರದರ್ಶನ ಜರುಗಲಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪಂಜಿನ ಕವಾಯತು ವೀಕ್ಷಿಸಿ, ವಂದನೆ ಸ್ವೀಕರಿಸಲಿದ್ದಾರೆ. ಈ ವೇಳೆ, ಸಿಎಂ ಸಹ ಭಾಗಿ ಆಗಲಿದ್ದು, ಮುಡಾ ಕೇಸ್​ ಬಳಿಕ ಇಬ್ಬರು ಪ್ರಮುಖರು ಬಹಿರಂಗವಾಗಿ ಮುಖಾಮುಖಿ ಆಗಲಿದ್ದಾರೆ.
/newsfirstlive-kannada/media/post_attachments/wp-content/uploads/2024/10/CM-Siddaramaiah.jpg)
ದೀಪಾಲಂಕಾರ ಕಣ್ತುಂಬಿಕೊಂಡ ಸಿಎಂ ಸಿದ್ದರಾಮಯ್ಯ
ಇನ್ನು, ಸಾಂಸ್ಕೃತಿಕ ನಗರಿ ಮದುವಣಗಿತ್ತೆಯಂತೆ ಶೃಂಗಾರಗೊಂಡಿದೆ. ಸಿಎಂ ಸಿದ್ದರಾಮಯ್ಯ ಈ ಸಂಭ್ರಮವನ್ನ ಕಣ್ತುಂಬಿಕೊಂಡ್ರು. ಸಚಿವರ ಜೊತೆ ಅಂಬಾರಿ ಬಸ್​ನಲ್ಲಿ ದಸರಾ ದೀಪಾಲಂಕಾರ ಕಂಡ್ರು. ಸಿಎಂ ಸಂಚರಿಸಿದ ಮಾರ್ಗದುದ್ದಕ್ಕೂ ಸಾರ್ವಜನಿಕರು ಕಿಕ್ಕಿರಿದು ಸೇರಿದ್ರು. ಸಿದ್ದರಾಮಯ್ಯರನ್ನ ನೋಡಿ ಶಿಳ್ಳೆ ಚಪ್ಪಾಳೆಯ ಹೊಡೆದ್ರು. ಈ ವೇಳೆ ಸಿಎಂ ಎದ್ದು ನಿಂತು ಜನರತ್ತ ಕೈಬೀಸಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us