/newsfirstlive-kannada/media/post_attachments/wp-content/uploads/2024/10/Shreaya-Goshal.jpg)
ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮೆರಗನ್ನು ಕಳೆದ ರಾತ್ರಿಯಿಂದ ಆರಂಭವಾದ ಯುವ ದಸರಾ ಮತ್ತಷ್ಟು ಹೆಚ್ಚಿಸಿದೆ. ಯುವ ಸಮೂಹ ಖ್ಯಾತ ಗಾಯಕಿಯ ಮೋಡಿಗೆ ಹುಚ್ಚೆದ್ದು ಕುಣಿದಿದೆ. ಹಾಗಿದ್ರೆ ಮೊದಲ ದಿನದ ಯುವ ದಸರೆಯ ಝಲಕ್ ಹೇಗಿತ್ತು ಎಂಬುದರ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಹಾಕಿರುವ ಬೃಹತ್ ವೇದಿಕೆ. ವೇದಿಯಲ್ಲಿ ತನ್ನ ಕಂಠ ಸಿರಿಯಲ್ಲಿ ಮೋಡಿ ಮಾಡುತ್ತಿರುವ ಗಾಯಕಿ ಶ್ರೇಯಾ ಘೋಷಾಲ್. ಇಂಪಾದ ಗಾಯನವನ್ನು ತಣ್ಣನೆಯ ಗಾಳಿಯಲ್ಲಿ ಕೂತು ಎಂಜಾಯ್ ಮಾಡ್ತಿರುವ ಯುವಸ್ತೋಮ. ಈ ದೃಶ್ಯ ಕಂಡು ಬಂದಿದ್ದು ಸಾಂಸ್ಕೃತಿಕ ನಗರಿ ಮೈಸೂರಿನ ಯುವ ದಸರಾ ಕಾರ್ಯಕ್ರಮದಲ್ಲಿ.
ಇದನ್ನೂ ಓದಿ: ಐವರು ಸಾವು, 200ಕ್ಕೂ ಹೆಚ್ಚು ಜನ ಆಸ್ಪತ್ರೆಗೆ.. ಚೆನ್ನೈ ಏರ್ ಶೋದಲ್ಲಿ ಆಗಿದ್ದೇ ಬೇರೆ!
ದಸರಾಗೆ ಚಾಲನೆ ಸಿಕ್ಕಿ 3 ದಿನಗಳಾಗಿದ್ರೂ ಸೆಂಟ್ರಾಫ್ ಅಟ್ರಾಕ್ಷನ್ ಅಂದ್ರೆ ಯುವ ದಸರಾ. ಯುವಕರ ಅಚ್ಚು ಮೆಚ್ಚಿನ ಯುವ ದಸರಾಗೆ ಕಳೆದ ರಾತ್ರಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಚಾಲನೆ ನೀಡಿದರು. ಇದೇ ಮೊದಲ ಬಾರಿಗೆ ಮಹಾರಾಜ ಕಾಲೇಜು ಮೈದಾನ ಬಿಟ್ಟು ಮೈಸೂರು ನಗರದ ಹೊರವಲಯ ಉತ್ತನಹಳ್ಳಿ ಬಳಿ ಬೃಹತ್ ವೇದಿಕೆ ನಿರ್ಮಾಣ ಮಾಡಿ ಯುವ ದಸರಾವನ್ನು ಆಯೋಜಿಸಲಾಗಿದೆ. 5 ದಿನ ನಡೆಯುವ ಯುವ ದಸರಾ ಮೊದಲ ದಿನವೇ ಯುವ ಮನಸ್ಸುಗಳನ್ನು ಕದ್ದು ಕಮಾಲ್ ಮಾಡಿತು.
ಯುವ ದಸರಾಗೆ ಚಾಲನೆ ಸಿಕ್ಕುತ್ತಿದ್ದಂತೆ ನಟಿಯರಾದ ಜಾನ್ವಿ, ಮಾನ್ವೀತ ಟಪ್ಪಾಂಗುಚ್ಚಿ ಹಾಡಿಗೆ ಸಖತ್ ಸ್ಟೇಪ್ ಹಾಕಿ ಪಡ್ಡೆ ಯುವಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು. ನಂತರ ವೇದಿಕೆಗೆ ಕಿರಿಕ್ ಪಾರ್ಟಿ ಸಿನಿಮಾ ಕಾಗದ ದೋಣಿಯಲ್ಲಿ ಎಂಬ ಗೀತೆಯೊಂದಿಗೆ ಬಂದ ಗಾಯಕ ವಾಸುಕಿ ವೈಭವ್ ಜನರನ್ನು ರಂಜಿಸಿದರು.
ಇದನ್ನೂ ಓದಿ: ಲಾಯರ್ ಜಗದೀಶ್ಗೆ ‘LOVE YOU SIR’ ಎಂದ ಕಿಚ್ಚ ಸುದೀಪ್.. ಅಸಲಿಗೆ ನಡೆದಿದ್ದೇನು?
ಬಳಿಕ ನಡೆದದ್ದು ಗಾಯಕಿ ಶ್ರೇಯಾ ಘೋಷಾಲ್ ಕಮಾಲ್. ಆರಂಭದಲ್ಲಿ ಹಿಂದಿ ಗೀತೆಗಳೊಂದಿಗೆ ವೇದಿಕೆಗೆ ಬಂದ ಶ್ರೇಯಾ ಘೋಷಾಲ್ ಬಳಿಕ ಕನ್ನಡದ ಮೆಲೋಡಿ ಹಾಡುಗಳ ಮೂಲಕ ತಣ್ಣನೆಯ ಗಾಳಿಯಲ್ಲಿ ಕೂತಿದ್ದ ಯುವ ಮನಸ್ಸುಗಳಿಗೆ ಮುದ ನೀಡಿದರು. ಕೋಟಿಗೊಬ್ಬ 2 ಸಿನಿಮಾದ ಸಾಲುತ್ತಿಲ್ಲವೆ ಹಾಡಿಗೆ ಯುವ ಜನ ಫಿದಾ ಆದ್ರು. ಗಗನವೇ ಭಾಗಿ, ಹೂವಿನ ಬಾಣದಂತೆ, ಮುಂಗಾರು ಮಳೆ ಹಾಡು ಸೇರಿ ಹಲವು ಸಾಂಗ್ಗಳು ಮೂಡಿ ಬಂದವು. ಇನ್ನು ಶ್ರೇಯಾಗೆ ಅಭಿನಂದನೆ ಸಲ್ಲಿಸಲು ಜನರು ತಮ್ಮ ಮೊಬೈಲ್ ಟಾರ್ಚ್ ಆನ್ ಮಾಡಿದ್ದು ಕ್ಯಾಮೆರಾ ಕಣ್ಣಿನಲ್ಲಿ ನಕ್ಷತ್ರಗಳಂತೆ ಕಂಡುಬಂತು.
ಒಟ್ಟಾರೆ ದಸರಾ ಮಹೋತ್ಸವದಲ್ಲಿ ಹತ್ತಾರು ಕಾರ್ಯಕ್ರಮಗಳಿದ್ದರೂ ಯುವಸ್ತೋಮವನ್ನು ಅಟ್ರಾಕ್ಟ್ ಮಾಡೋದು ಯುವ ದಸರಾ. ಮೊದಲ ದಿನದ ವೇದಿಕೆಯಲ್ಲಿ ಶ್ರೇಯಾ ಘೋಷಾಲ್ ಕಮಾಲ್ ಮಾಡಿದ್ದಾರೆ. ಇಂದು ಸಂಗೀತ ನಿರ್ದೇಶಕ ರವಿ ಬಸ್ರೂರ್ ತಂಡದ ಮ್ಯೂಸಿಕ್ ಇವೆಂಟ್ ಇದ್ದು ಈಗಲೇ ಮೈ ರೋಮಾಂಚನಗೊಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ