/newsfirstlive-kannada/media/post_attachments/wp-content/uploads/2024/08/Dasara.jpg)
ಮೈಸೂರು: ವಿಶ್ವ ವಿಖ್ಯಾತ ದಸರಾ 2024ರ ಸಂಭ್ರಮ ಶುರುವಾಗಿದೆ. ಈ ಬಾರಿ ಅದ್ಧೂರಿಯಾಗಿ ದಸರಾ ಆಚರಣೆ ಮಾಡಲು ಸರ್ಕಾರ ತೀರ್ಮಾನಿಸಿದ್ದು, ದಸರಾ ಮಹೋತ್ಸವಕ್ಕೆ ಮುನ್ನುಡಿ ಬರೆಯುವ ‘ಗಜಪಯಣ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ದೊರೆತಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ನಾಲ್ಕು ಹೆಣ್ಣಾನೆ ಸೇರಿದಂತೆ ಒಟ್ಟು 14 ಆನೆಗಳು ಭಾಗಿಯಾಗುತ್ತಿವೆ. ಈ ಪೈಕಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಗೋಪಿ, ವರಲಕ್ಷ್ಮೀ, ಪ್ರಶಾಂತ, ಲಕ್ಷ್ಮೀ, ಧನಂಜಯ, ಸುಗ್ರೀಮ, ದೊಡ್ಡ ಹರವೆ ಲಕ್ಷ್ಮೀ, ಭೀಮ, ಕಂಜನ್, ಹಿರಣ್ಯಾ, ರೋಹಿತ, ಮಹೇಂದ್ರ ಹಾಗೂ ಹೊಸ ಆನೆ ಏಕಲವ್ಯ ಆಗಮಿಸಲಿವೆ. ದಸರಾ ಉತ್ಸವಕ್ಕೆ ಮೆರುಗು ನೀಡುವ ಆನೆಗಳ ಪರಿಚಯ ಇಲ್ಲಿದೆ.
/newsfirstlive-kannada/media/post_attachments/wp-content/uploads/2024/08/dasara-2024-1.jpg)
ಅಭಿಮನ್ಯು
ಈ ಬಾರಿಯೂ ಅಂಬಾರಿ ಹೊರುವ ಜವಾಬ್ದಾರಿ ಅಭಿಮನ್ಯುವಿನ ಹೆಗಲಿಗೆ ಐದನೇ ಬಾರಿಗೆ ಬಂದಿದೆ. ಮತ್ತಿಗೋಡು ಶಿಬಿರದಲ್ಲಿರುವ 58 ವರ್ಷದ ಅಭಿಮನ್ಯು ಆನೆಯನ್ನು 1970ರಲ್ಲಿ ಕೊಡಗು ಜಿಲ್ಲೆ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು.
ಅಭಿಮನ್ಯು ಪುಂಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಳಗಿದ್ದು, 2012ರಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. 2015ರಲ್ಲಿ ಕರ್ನಾಟಕ ವಾದ್ಯಗೋಷ್ಠಿ ತಂಡದ ಗಾಡಿಯನ್ನು ಜಂಬೂಸವಾರಿ ಮೆರವಣಿಗೆಯಲ್ಲಿ ಎಳೆದಿದ್ದು, 2020 ರಿಂದ ಚಿನ್ನದ ಅಂಬಾರಿ ಹೊರುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದೆ. 2.74 ಮೀಟರ್ ಎತ್ತರ ಇರುವ ಆನೆ, 4700-5000 ಕೆ.ಜಿ.ಗೂ ಹೆಚ್ಚಿನ ತೂಕವಿದೆ. ನಾಡಿಗೆ ಬಂದಿದ್ದ 30ಕ್ಕೂ ಹೆಚ್ಚು ಹುಲಿಗಳಲ್ಲು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾನೆ.
/newsfirstlive-kannada/media/post_attachments/wp-content/uploads/2024/08/dasara-2024.jpg)
ಧನಂಜಯ
ದುಬಾರೆ ಆನೆ ಶಿಬಿರದಲ್ಲಿರುವ 44 ವರ್ಷದ ಧನಂಜಯ ಆನೆಯನ್ನು 2013ರಲ್ಲಿ ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಸೆರೆ ಹಿಡಿಯಲಾಯಿತು. ಕಾಡಾನೆ ಮತ್ತು ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಇದು ಭಾಗವಹಿಸುತ್ತಿದೆ. ಐದು ವರ್ಷದಿಂದ ದಸರಾದಲ್ಲಿ ಭಾಗವಹಿಸುತ್ತಿದೆ. 2.80 ಮೀಟರ್ ಎತ್ತರ ಇರುವ ಆನೆ, 4000-4200 ಕೆ.ಜಿ. ತೂಕವಿದೆ. ಸದ್ಯ ಈ ಬಾರಿ ದಸರೆಯ ನೌಫತ್ ಆನೆಯಾಗಿದೆ.
ಭೀಮ
24ರ ಹರೆಯದ ಮತ್ತಿಗೋಡು ಭೀಮ ಚಿನ್ನದ ಅಂಬಾರಿ ಹೊರಲು ಬೇಕಿರುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾನೆ. ಸದ್ಯ 2.85 ಮೀ. ಎತ್ತರ, 3.05 ಮೀ. ಉದ್ದ ಮತ್ತು 3800-4000 ಕೆ.ಜಿ. ತೂಕವಿರುವ ಈ ಆನೆಯ ದಂತ, ದೇಹ ರಚನೆ, ಸಮತಟ್ಟಾಗಿರುವ ಬೆನ್ನು ಅಂಬಾರಿ ಇಡಲು ಸೂಕ್ತವಾಗಿದೆ. ಈ ಹಿಂದೆ 2022 ಹಾಗೂ 2017ರ ದಸರಾದಲ್ಲಿ ಪಾಲ್ಗೊಂಡಿದ್ದ. 2009ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಹೆತ್ತೂರಿನಲ್ಲಿ ಸೆರೆ ಹಿಡಿಯಲಾದ ಆನೆ ಇದು.
/newsfirstlive-kannada/media/post_attachments/wp-content/uploads/2024/08/dasara-2024-2.jpg)
ಮಹೇಂದ್ರ
41 ವರ್ಷದ ಮಹೇಂದ್ರ ಕೂಡ ಚಿನ್ನದ ಅಂಬಾರಿ ಹೊರಲು ಬೇಕಿರುವ ಎಲ್ಲ ಲಕ್ಷಣಗಳನ್ನೂ ಹೊಂದಿದ್ದಾನೆ. ಮತ್ತೀಗೋಡು ಶಿಬಿರದ ಈ ಆನೆ 2.75 ಮೀ. ಎತ್ತರ, 3.25 ಮೀ. ಉದ್ದ ಮತ್ತು 3800-4000 ಕೆ.ಜಿ. ತೂಕ ಇದ್ದಾನೆ. ಆದ್ದರಿಂದ ಭವಿಷ್ಯದಲ್ಲಿ ‘ಗಜಪಡೆಯ ಕ್ಯಾಪ್ಟನ್’ ಆಗಲಿದೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ. 2022ರಲ್ಲಿ ಶ್ರೀರಂಗಪಟ್ಟಣ ದಸರಾದಲ್ಲೂ ಭಾಗಿ. ಕಾಡಾನೆ ಹಾಗೂ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲೂ ಭಾಗಿ.
ಗೋಪಿ
ದುಬಾರೆ ಶಿಬಿರದ ಗೋಪಿಗೆ 42 ವರ್ಷ. 1990ರಲ್ಲಿ ಹಾಸನದ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಈ ಆನೆಯನ್ನು ಸೆರೆ ಹಿಡಿಯಲಾಯಿತು. 12ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದೆ. 2015ರಲ್ಲಿ ಪಟ್ಟದ ಆನೆಯಾಗಿ ಅರಮಮನೆಯ ಪೂಜಾ ಕೈಂಕರ್ಯದಲ್ಲಿ ಭಾಗಿ. 2.86 ಮೀ.ಎತ್ತರ, 3700-3800 ಕೆ.ಜಿ. ತೂಕ ಇದೆ.
/newsfirstlive-kannada/media/post_attachments/wp-content/uploads/2024/08/dasara-2024-5.jpg)
ಕಂಜನ್
ದುಬಾರೆ ಶಿಬಿರದ ಕಂಜನ್‌ಗೆ ಈಗ 25 ವರ್ಷ. ಕಳೆದ ಬಾರಿ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗಿತ್ತು. ಇದೀಗ ಎರಡನೇ ಬಾರಿ ಭಾಗಿಯಾಗುತ್ತಿದೆ. 2.62 ಎತ್ತರ, 3700-3900 ಕೆ.ಜಿ.ತೂಕ ಇದೆ.
ಲಕ್ಷ್ಮೀ
ದೊಡ್ಡ ಹರವೆ ಶಿಬಿರದ ಲಕ್ಷ್ಮೀಗೆ 53 ವರ್ಷ. 2.52 ಎತ್ತರ, 3000-3200 ಕೆ.ಜಿ.ತೂಕ ಇದೆ. ಅನೇಕ ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದೆ.
/newsfirstlive-kannada/media/post_attachments/wp-content/uploads/2024/08/dasara-2024-3.jpg)
ರೋಹಿತ್
ಈ ಬಾರಿ ದಸರಾ ನಹೋತ್ಸವದಲ್ಲಿ ಭಾಗಿಯಾಗುತ್ತಿರುವ ಗಜಪಡೆಯಲ್ಲಿ ಅತೀ ಚಿಕ್ಕ ವಯಸ್ಸಿನ ಆನೆಗಳಲ್ಲಿ ಇದು ಒಂದು. ರಾಮಪುರ ಶಿಬಿರದ ಈ ಆನೆಗೆ 22 ವರ್ಷ. 2.70 ಮೀ.ಎತ್ತರ, 2900-3000 ತೂಕ ಇದೆ. ಇದು ಕೂಡ ಎರಡನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದೆ.
ಹಿರಣ್ಯಾ
ರಾಮಪುರ ಶಿಬಿರದ ಹೆಣ್ಣಾನೆ ಹಿರಣ್ಯಾಗೆ 47 ವರ್ಷ. 2.50 ಮೀ. ಎತ್ತರ, 3000-3200 ಕೆ.ಜಿ.ತೂಕ ಇದೆ. ಎಡರನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದೆ.
ಪ್ರಶಾಂತ
ದುಬಾರೆ ಶಿಬಿರದ ಪ್ರಶಾಂತ ಆನೆಗೆ 51 ವರ್ಷ. 3 ಮೀ. ಎತ್ತರ, 4000-4200 ಕೆ.ಜಿ.ತೂಕ ಇದೆ. ಇದು ಕೂಡ ಅನೇಕ ಬಾರಿ ದಸರೆಯಲ್ಲಿ ಭಾಗಿಯಾಗಿದೆ.
/newsfirstlive-kannada/media/post_attachments/wp-content/uploads/2024/08/dasara-2024-6.jpg)
ಸುಗ್ರೀವ
ದುಬಾರೆ ಶಿಬಿರದ ಸುಗ್ರೀವ ಆನೆಗೆ 42 ವರ್ಷ. 2.77 ಮೀ. ಎತ್ತರ, 4000-4100 ಕೆ.ಜಿ.ತೂಕ ಇದೆ.
ವರಲಕ್ಷ್ಮೀ
ಭೀಮನಕಟ್ಟೆ ಶಿಬಿರದ ಹೆಣ್ಣಾನೆಯಾದ ವರಲಕ್ಷ್ಮೀಗೆ 68 ವರ್ಷ. 2.36 ಎತ್ತರ, 3300-3500 ಕೆ.ಜಿ.ತೂಕ ಇದೆ. ಈ ಬಾರಿ ದಸರೆಯ ಕುಮ್ಕಿ ಆನೆಯಾಗಿದೆ.
ಏಕಲವ್ಯ
ಮತ್ತಿಗೋಡು ಸಾಕಾನೆ ಶಿಬಿರದ ಏಕಲವ್ಯ ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಭಾಗಿಯಾಗುತ್ತಿರುವ ಹೊಸ ಆನೆ. ಏಕಲವ್ಯನಿಗೆ 39 ವರ್ಷ. 4,150 ಕೆ.ಜಿ. ತೂಕ, 2.83 ಮೀಟರ್ ಎತ್ತರ, 3.70 ಮೀಟರ್ ಉದ್ದವಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us