/newsfirstlive-kannada/media/post_attachments/wp-content/uploads/2024/10/MYS_SIDDARAMAIAH_HAMPA.jpg)
ಮೈಸೂರು: ನಾಡ ಅಧಿದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಂಭ್ರಮದಿಂದ ಚಾಲನೆ ನೀಡಲಾಯಿತು. ಬೆಳಗ್ಗೆ 9.15 ರಿಂದ 9.45 ರ ವೃಶ್ಚಿಕ ಲಗ್ನದಲ್ಲಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಅಧಿಕೃತವಾಗಿ ದಸರಾ 2024ರ ಸಮಾರಂಭಕ್ಕೆ ಚಾಲನೆ ಸಿಕ್ಕಿತು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಾಹಿತಿ ಹಂಪನಾಗರಾಜಯ್ಯ ಅವರು ನಾಡ ದೇವಿಗೆ ಪುಷ್ಪಾರ್ಚನೆ ಮಾಡಿದರು. ಜಿ.ಟಿ.ದೇವೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುಷ್ಪಾರ್ಚನೆ ವೇಳೆ ಸಚಿವ ಹೆಚ್​.ಸಿ ಮಹಾದೇವಪ್ಪ, ಕಾನೂನು ಸಚಿವ ಹೆಚ್​.ಕೆ ಪಾಟೀಲ್, ಕೆ.ಹೆಚ್ ಮುನಿಯಪ್ಪ, ತನ್ವೀರ್ ಸೇಠ್ ಸೇರಿದಂತೆ ಇತರೆ ಗಣ್ಯರು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಸ್ತೆಯಲ್ಲಿ ಬರುವಾಗ ದೇವರಿಗೆ ನಮಸ್ಕರಿಸಿದ ಸಿಎಂ ಸಿದ್ದರಾಮಯ್ಯ ಅವರು ಈಡುಗಾಯಿ ಒಡೆದರು. ಈ ವೇಳೆ ಸಾಹಿತಿ ಹಂಪನಾಗರಾಜಯ್ಯ ಜೊತೆಯಲ್ಲಿದ್ದರು.
ದಸರಾ ಚಾಲನೆಗೂ ಮೊದಲು ನಾಡಿನ ಅಧಿದೇವತೆಗೆ ಬ್ರಾಹ್ಮಿ ಮುಹೂರ್ತದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಬೆಳಗ್ಗೆಯಿಂದ ಎಲ್ಲ ಕೆಲಸಗಳನ್ನು ಪೂರ್ಣ ಮಾಡಿದ್ದೇವೆ. ತಾಯಿ ಹಂಸವಾಹಿನಿ ಅಲಂಕಾರದಲ್ಲಿ ದೇವಿ ದರ್ಶನವಾಗಿದೆ. ನವರಾತ್ರಿಯ ಮೊದಲ ದಿನವಾದ ಇಂದು ಚಾಮುಂಡಿದೇವಿಗೆ ವಿಶೇಷ ಪೂಜೆಗಳನ್ನ ಮಾಡಲಾಗಿದೆ. 9 ದಿನಗಳು ದೇವಿ ವಿಶೇಷವಾಗಿ ಕಾಣಿಸಿಕೊಳ್ಳಲಿದ್ದಾಳೆ ಎಂದು ದೇವಸ್ಥಾನದ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ