ಖಾಸಗಿ ವಿಡಿಯೋ ತೋರಿಸಿ, ಬೆದರಿಸಿ ಗರ್ಭಪಾತ.. ತಾಳಿ, ಕಾಲುಂಗುರ ಬಿಚ್ಚಿಸಿ ರಸ್ತೆಯಲ್ಲಿ ಬಿಟ್ರು -ಸಂತ್ರಸ್ತ ವೈದ್ಯೆ ಆರೋಪ

author-image
Ganesh
Updated On
ಖಾಸಗಿ ವಿಡಿಯೋ ತೋರಿಸಿ, ಬೆದರಿಸಿ ಗರ್ಭಪಾತ.. ತಾಳಿ, ಕಾಲುಂಗುರ ಬಿಚ್ಚಿಸಿ ರಸ್ತೆಯಲ್ಲಿ ಬಿಟ್ರು -ಸಂತ್ರಸ್ತ ವೈದ್ಯೆ ಆರೋಪ
Advertisment
  • ಮದುವೆಯಾದ ಎರಡೇ ತಿಂಗಳಲ್ಲಿ ವರದಕ್ಷಿಣೆಗಾಗಿ ಕಿರುಕುಳ ಆರೋಪ
  • ಡಿವೋರ್ಸ್ ಕೊಡ್ತೀನಿ ಮಗುಗೆ ಏನೂ ಮಾಡ್ಬೇಡಿ ಅಂದ್ರೂ ಕೇಳಲಿಲ್ಲವಂತೆ
  • ಅದ್ದೂರಿಯಾಗಿ ಮಗಳ ಮದುವೆ ಮಾಡಿದ್ದ ಪೋಷಕರು ಕಂಗಾಲು

ವೈದ್ಯರಿಂದ ವೈದ್ಯೆಗೆ ಗರ್ಭಪಾತ ಮಾಡಿಸಿರುವ ಕೇಸ್ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ವರದಕ್ಷಿಣೆ ತರಲಿಲ್ಲ ಅಂತಾ ಗರ್ಭಪಾತ ಮಾಡಿಸಿರುವ ಆರೋಪ ಕೇಳಿಬಂದಿದೆ.

ಆರೋಪ ಏನು..?

ಮದ್ವೆಯಾದ ಎರಡು ತಿಂಗಳಲ್ಲಿ ನನ್ನ ಗಂಡ ಹಾಗೂ ಅವರ ಮನೆಯವ್ರ ಕರಾಳ‌ ಮುಖವನ್ನು ನೋಡಿಬಿಟ್ಟೆ. ಹಣದ ಆಸೆಗೆ ಕೊಡಬಾರದ ಚಿತ್ರಹಿಂಸೆ ನೀಡಿದರು. ತಿರುಪತಿಗೆ ಹೋಗೋಣ ಅಂತಾ ಸುಳ್ಳು ಹೇಳಿ ಗರ್ಭಪಾತ ಮಾಡಿಸಿದ್ರು. ತಾಳಿ, ಕಾಲುಂಗುರ ಎಲ್ಲವನ್ನೂ‌ ಬಿಚ್ಚಿಸಿ ನಡು ರಸ್ತೆಯಲ್ಲಿ ಬಿಟ್ಟು ಹೋದರು.

ಐದು ಲಕ್ಷ ವರದಕ್ಷಿಣೆ ತರಲಿಲ್ಲ, ನಿನಗೆ ಮಗು ಯಾಕೆ ಬೇಕೆಂದು ಪ್ರಶ್ನೆ ಮಾಡಿದರು. ಮದ್ವೆಯಾದ ಎರಡೇ ತಿಂಗಳಿಗೆ ಸ್ಟೇಟಸ್ ಅಂತ ಹಿಂಸೆ ನೀಡಿದರು. ನನ್ನ ಅಪ್ಪ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ನಾನು ಕೂಡ ವೈದ್ಯೆ, ಮದುವೆಗೆ ಮುಂಚೆ ಕೆಲಸಕ್ಕೆ ಹೋಗ್ತಿದ್ದೆ. ಮದುವೆ ಸಮಯದಲ್ಲಿ ಕೆಲಸ ಬೇಡ ಅಂತಾ ಬಿಡಿಸಿದ್ರು. ಮದುವೆಯಾಗಿ ಒಂದು ವಾರ ಚೆನ್ನಾಗಿ ನೋಡಿಕೊಂಡ್ರು. ಒಂದೊಂದು ದಿನ ಒಂದೊಂದು ರೀತಿಯಲ್ಲಿ ಹಿಂಸೆ ಕೊಟ್ರು. ನಮ್ಮ ಸ್ಟೇಟಸ್​ಗೆ ನೀನು ಸರಿ ಹೋಗಲ್ಲ ಎಂದು ಕುಟುಂಬವನ್ನೂ ಬೈದುಕೊಂಡರು.

ನಾನು ಗರ್ಭಿಣಿ ಎಂದು ಗೊತ್ತಾದ್ಮೇಲೆ ಮಗು ತೆಗೆಸುವಂತೆ ಬಲವಂತ ಮಾಡಿಸಿದ್ರು. ಎಷ್ಟೇ ಬೇಡ ಅಂದರೂ ಗರ್ಭಪಾತ ಮಾಡಿಸಿದ್ದಾರೆ. ಗಂಡ ಅಭಿಷೇಕ್, ಅತ್ತೆ ಲತಾ, ಮಾವ ಗೋವಿಂದರಾಜು ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ. ನೀವು ಬೇರೆ ಮದುವೆಯಾಗಿ. ನಾನು ನಿಮ್ಮ ತಂಟೆಗೆ ಬರಲ್ಲ, ಡಿವೋರ್ಸ್ ಕೊಡ್ತೀನಿ. ಆದರೆ ಮಗುವಿಗೆ ಏನೂ ಮಾಡಬೇಡಿ ಎಂದಿದ್ದೆ. ನನ್ನ ಖಾಸಗಿ ವಿಡಿಯೋ ಇಟ್ಕೊಂಡು ಹೆದರಿಸಿದರು. ನನ್ನ ಅಪ್ಪ-ಅಮ್ಮನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದರು. ಬಲವಂತದಿಂದ ಮಗುವನ್ನು ಕೊಂದಿದ್ದಾರೆ ಎಂದು ದೂರಿದ್ದಾರೆ -ಸಂತ್ರಸ್ತೆ

ಇದನ್ನೂ ಓದಿ: ಸಿಂಪಲ್ ಸುನಿ ಶೂಟಿಂಗ್​ನಲ್ಲಿ ಅನಾಹುತ.. ಆಯ ತಪ್ಪಿ ರೋಪ್​ನಿಂದ ಕೆಳಗೆ ಬಿದ್ದ ನಟಿ ಶ್ರಾವ್ಯ ರಾವ್

publive-image

ಪ್ರಕರಣದ ಹಿನ್ನೆಲೆ

ಕೆ.ಆರ್.ಪೇಟೆಯ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯೆಯಾಗಿ ಕೆಲಸ ಮಾಡ್ತಿದ್ದರು. ಕೆ.ಆರ್.ನಗರದ ನಿವಾಸಿ ಮಹದೇವ ತಮ್ಮ ಮಗಳಾದ ನವ್ಯಾರನ್ನು ಎರಡು ತಿಂಗಳ ಹಿಂದೆ ಬರೋಬ್ಬರಿ 80 ಲಕ್ಷ ರೂಪಾಯಿ ಖರ್ಚು ಮಾಡಿ ಬಿಳಿಕೆರೆಯ ನಿವಾಸಿ ಚಿನ್ನದ ವ್ಯಾಪಾರಿ ಗೋವಿಂದರಾಜು ಪುತ್ರ ಅಭಿಷೇಕ್​​ಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಎರಡು ತಿಂಗಳಲ್ಲೇ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ. ಅಲ್ಲದೇ, ಅಬಾರ್ಷನ್ ಕೂಡ ಮಾಡಿಸಿದ್ದಾರೆ ಎಂಬ ಆರೋಪ ಇದೆ.

ಇದನ್ನೂ ಓದಿ: ಪತ್ನಿಗೆ ಅಶ್ಲೀಲ ಮೆಸೇಜ್.. ಕಾಮುಕನಿಗೆ ಬುದ್ಧಿ ಕಲಿಸಿದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ

publive-image

ಎಫ್​ಐಆರ್ ದಾಖಲು

ಖಾಸಗಿ ಆಸ್ಪತ್ರೆ ವೈದ್ಯೆ, ಆಸ್ಪತ್ರೆ ಎಂಡಿ ಸೇರಿ 5 ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ನವ್ಯಾಳ ಗಂಡ ಅಭಿಷೇಕ್, ಮಾವ ಗೋವಿಂದರಾಜ್, ಅತ್ತೆ ಲತಾ, ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಜ್ಞಾನಶೇಖರ್, ವೈದ್ಯೆ ಲತಾ ಸೇರಿ ಐವರ ಮೇಲೆ ಎಫ್​ಐಆರ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment