Advertisment

ದಸರಾ ಮಹೋತ್ಸವಕ್ಕೆ ಸಂಭ್ರಮದ ತೆರೆ.. ಹರ್ಷೋದ್ಘಾರದಲ್ಲಿ ಮಿಂದೆದ್ದ ಜನ; ಅಭಿಮನ್ಯುಗೆ ಅಭಿನಂದನೆ

author-image
Bheemappa
Updated On
ದಸರಾ ಮಹೋತ್ಸವಕ್ಕೆ ಸಂಭ್ರಮದ ತೆರೆ.. ಹರ್ಷೋದ್ಘಾರದಲ್ಲಿ ಮಿಂದೆದ್ದ ಜನ; ಅಭಿಮನ್ಯುಗೆ ಅಭಿನಂದನೆ
Advertisment
  • ಹೆಚ್ಚು ಬಾರಿ ಪುಷ್ಪಾರ್ಚನೆ ಮಾಡಿದ ಏಕೈಕ ಸಿಎಂ ಸಿದ್ದರಾಮಯ್ಯ
  • ಜಂಬೂಸವಾರಿ ಪುಷ್ಪಾರ್ಚನೆಯಲ್ಲಿ ಯದುವೀರ್ ಭಾಗಿಯಾಗಲಿಲ್ಲ
  • ದಸರಾದಲ್ಲಿ ಭಾವುಕರಾದ ಪ್ರಹ್ಲಾದ್ ರಾವ್, ಡಿಎಫ್​​​ಓ ಪ್ರಭುಗೌಡ

ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿ ವೈಭವಪೋತದಿಂದ ಸಂಪನ್ನಗೊಂಡಿದೆ. ದಸರಾ ಮಹೋತ್ಸವ ಸಂಭ್ರಮದಿಂದ ಮುಗಿದಿದೆ. ಈ ಬಾರಿಯ ದಸರೆ ಹಲವು ಕಾರಣಕ್ಕೆ ದಾಖಲೆಗಳನ್ನ ಬರೆದಿದೆ. ಅಭಿಮನ್ಯುಗೆ ಅಭಿನಂದನೆ ಸಲ್ಲಿಕೆ ಆಗ್ತಿದ್ದು, ಭಾವುಕ ಕ್ಷಣಗಳಿಗೂ ಸಾಕ್ಷಿ ಆಗಿದೆ.

Advertisment

publive-image

ಇದನ್ನೂ ಓದಿ: IND vs BAN T20; ಈ ಪಿಚ್​ನಲ್ಲಿ ಸೆಕೆಂಡ್ ಬ್ಯಾಟಿಂಗ್ ಮಾಡಿದ್ರೆ ಸೂರ್ಯಗೆ ಅದೃಷ್ಟ, ಯಾಕೆ?

ದಸರಾ.. ಮೈಸೂರು ದಸರಾ.. ಅದು ವಿಶ್ವವಿಖ್ಯಾತ.. 415ನೇ ದಸರಾ ಮೆರವಣಿಗೆ ಜಂಬೂಸವಾರಿ ಯಶಸ್ವಿ ಆಗಿದೆ. ಕ್ಯಾಪ್ಟನ್​​ ಅಭಿಮನ್ಯು 5ನೇ ಬಾರಿ ಅಂಬಾರಿ ಹೊತ್ತು ಸಾಗಿದ್ದಾನೆ. 750 ಕೆ.ಜಿ ತೂಕದ ಸ್ವರ್ಣದ ಅಂಬಾರಿಯಲ್ಲಿ ವಿರಾಜಮಾನಳಾದ ನಾಡ ಅಧಿದೇವತೆ ಚಾಮುಂಡಿ ದಿಗ್ದ್​ದರ್ಶನ ತೋರಿದಳು.

ದಸರಾದಲ್ಲಿ ಭಾಗಿಯಾಗಿ ದಾಖಲೆ ಬರೆದ ಸಿದ್ದರಾಮಯ್ಯ!

ಇನ್ನು, ಈ ಬಾರಿ ಸಿದ್ದರಾಮಯ್ಯ ಹೊಸ ದಾಖಲೆ ಬರೆದಿದ್ದಾರೆ. ಅಂಬಾರಿ ಏರಿದ ತಾಯಿ ಚಾಮುಂಡಿಗೆ ಹೆಚ್ಚು ಬಾರಿ ಮುಖ್ಯಮಂತ್ರಿಯಾಗಿ ಪುಷ್ಪಾರ್ಚನೆ ಅರ್ಪಿಸಿದ ಭಾಗ್ಯಕ್ಕೆ ಪಾತ್ರರಾಗಿದ್ದಾರೆ. ಸಿದ್ದರಾಮಯ್ಯ ಈವರೆಗೆ ಒಟ್ಟು 7 ಬಾರಿ ಪುಷ್ಪಾರ್ಚನೆ ಮಾಡಿದ ದಾಖಲೆ ಬರೆದಿದ್ದು, ಈ ಅದೃಷ್ಟಕ್ಕೆ ತಮ್ಮ ಪಾಲಿಗೆ ಒದಗಿ ಬಂದಿದ್ದಕ್ಕಾಗಿ ಸಿಎಂ ಸಿದ್ದರಾಮಯ್ಯ ಕೃತಜ್ಞತೆ ಸಲ್ಲಿಸಿದ್ದಾರೆ.

Advertisment

ಇದನ್ನೂ ಓದಿ: 415ನೇ ಅದ್ಧೂರಿ ಜಂಬೂ ಸವಾರಿ.. ಮೈಸೂರು ದಸರಾದ ಟಾಪ್ 10 ಫೋಟೋಗಳು ಇಲ್ಲಿದೆ

publive-image

ಚಾಮುಂಡಿಗೆ ಪುಷ್ಟಾರ್ಚನೆಯಲ್ಲಿ ಯದುವೀರ್​ ಗೈರು!

ಅಂದ್ಹಾಗೆ ದಸರಾ ಜಂಬೂಸವಾರಿ ಪುಷ್ಪಾರ್ಚನೆಯಲ್ಲಿ ಭಾಗಿ ಆಗ್ತಿದ್ದ ಯದುವೀರ್​​​ ಒಡೆಯರ್​​​​, ಈ ಬಾರಿ ಗೈರಾಗಿದ್ರು. ಕಾರಣ ಈ ಬಾರಿ ಹಬ್ಬದ ವೇಳೆ ಯದುವೀರ್‌ ಹಾಗೂ ತ್ರಿಷಿಕಾ ಕುಮಾರಿ ದಂಪತಿಗೆ 2ನೇ ಮಗು ಜನನವಾಗಿದೆ. ಯದುವೀರ್‌ ಕಂಕಣಧಾರಣೆ ನಂತ್ರ ಮಗು ಜನಿಸಿದ್ರಿಂದ ಧಾರ್ಮಿಕ ಕಾರ್ಯಗಳು ಮುಂದುವರಿದಿದ್ವು. ಆದ್ರೆ, ಕಂಕಣ ವಿಸರ್ಜನೆ ಬಳಿಕ ಮತ್ತೆ ಜನನ ಸೂತಕ ಅನ್ವಯ ಕಾರಣ ಜಂಬೂಸವಾರಿ ಪುಷ್ಪಾರ್ಚನೆಯಲ್ಲಿ ಯದುವೀರ್‌ ಪಾಲ್ಗೊಳ್ಳಲಿಲ್ಲ ಅಂತ ಗೊತ್ತಾಗಿದೆ.

publive-image

ದಸರೆಯ ಯಶಸ್ಸಿನ ಬಳಿಕ ಭಾವುಕರಾದ ಡಿಎಫ್​​​ಓ ಪ್ರಭುಗೌಡ!

ಇತ್ತ, ದಸರಾ ಯಶಸ್ವಿ ಆಗಿ ಮುಗಿದಿದ್ದು, ಭಾವುಕ ಕ್ಷಣಗಳಿಗೂ ಸಾಕ್ಷಿ ಆಗಿದೆ. ದಸರೆಯನ್ನ ನೆನೆದು ಆನೆ ಅರ್ಚಕ ಪ್ರಹ್ಲಾದ್ ರಾವ್ ಭಾವುಕರಾಗಿದ್ದಾರೆ. ಇನ್ನು, ಜಂಬೂ ಸವಾರಿ ಜವಾಬ್ದಾರಿ ಹೊತ್ತಿದ್ದ DFO ಪ್ರಭುಗೌಡ ಸಹ ಭಾವುಕರಾದ್ರು. ಅಂಬಾರಿಯ ಸಂಪೂರ್ಣ ಹೊಣೆ ಹೊತ್ತಿದ್ದ ಅಭಿಮನ್ಯು ತನ್ನ ಮೇಲಿನ ವಿಶ್ವಾಸವನ್ನ ಉಳಿಸಿದ್ದಾನೆ. ನಾಡ ಅಧಿದೇವತೆ ಚಾಮುಂಡಿ ಹೊತ್ತು ತಂದ ಅಭಿಮನ್ಯುವಿಗೆ ಧನ್ಯತೆ ಅರ್ಪಣೆ ಆಗ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment