newsfirstkannada.com

ಕ್ಯಾಪ್ಟನ್ ಅರ್ಜುನ ಸಾವಿನ ಬಗ್ಗೆ ಹಲವು ಅನುಮಾನ; ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ

Share :

Published December 5, 2023 at 8:19am

    ನಿನ್ನೆ ಸಕಲೇಶಪುರ ಅರಣ್ಯದಲ್ಲಿ ಕಾರ್ಯಾಚರಣೆ ವೇಳೆ ಸಾವು

    ಇಂದು ಅರಮನೆಯ ಪುರೋಹಿತರಿಂದ ಅಂತಿಮ ವಿಧಿ ವಿಧಾನ

    ಆನೆ ಅರ್ಜುನ ಸಾವಿಗೆ ಅರಣ್ಯಾಧಿಕಾರಿಗಳ ವಿರುದ್ಧ ಭುಗಿಲೆದ್ದ ಆಕ್ರೋಶ

ಹಾಸನ: ಕಾಡಾನೆಯನ್ನು ಸೆರೆ ಹಿಡಿಯುವ ವೇಳೆ ಸಾವನ್ನಪ್ಪಿರುವ ಅರ್ಜುನ ಆನೆ ಸುತ್ತ ಹಲವು ಅನುಮಾನಗಳು ಮೂಡಿದ್ದು, ಈ ಬಗ್ಗೆ  ತನಿಖೆಯಾಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಏನಿದು ಆರೋಪ..?

ಅರ್ಜುನ ಆನೆಯು ಕಾಡಾನೆ ದಾಳಿಯಿಂದ ಮೃತಪಟ್ಟಿಲ್ಲ. ಅಧಿಕಾರಿಗಳು ಸಿಡಿಸಿದ ಗುಂಡು ಅರ್ಜುನನ ಕಾಲಿಗೆ ಬಿದ್ದಿದೆಯಂತೆ. ಪರಿಣಾಮ ಬಲ ಕಳೆದುಕೊಂಡು ಆನೆ ಸಾವನ್ನಪ್ಪಿದೆ ಎಂಬ ಆರೋಪ ಕೇಳಿಬಂದಿದೆ. ಕಾಡಾನೆಯನ್ನು ಸೆರೆ ಹಿಡಿಯುವಾಗ 4 ಆನೆಗಳು ಚೆನ್ನಾಗಿಯೇ ಇದ್ದವು. ಕಾಡಾನೆಗಳ ಹತೋಟಿಗೆ ತೆಗೆದುಕೊಳ್ಳಲು ಪೈಪೋಟಿ ನಡೆಸುತ್ತಿದ್ದವು.

ಇದನ್ನೂ ಓದಿ: ದಸರಾ ಆನೆ ಅರ್ಜುನ ಸಾವು.. ಇಂದು ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ.. ರಾಜವಂಶಸ್ಥರಿಂದಲೂ ಅಂತಿಮ ನಮನ

ಕಾಡಾನೆ ಜೊತೆ ಫೈಟ್​ ಬಿದ್ದಾಗ ಅರ್ಜುನನ ಕಾಲಿಗೆ ಒಬ್ಬರು​ ಸಿಡಿಸಿದ ಗುಂಡು ತಗುಲಿದೆ ಎಂಬ ಶಂಕೆ ಇದೆ. ಇದರಿಂದ ಅರ್ಜುನ ಮೃತಪಟ್ಟಿದ್ದಾನೆ. ಇದೇ ವೇಳೆ ಪ್ರಶಾಂತ್ ಆನೆಗೂ ಅನೆಸ್ತೇಸಿಯಾ ಚುಚ್ಚುಮದ್ದು ಕೊಡಲಾಗಿತ್ತು. ಮತ್ತೆ ಅದನ್ನು ರಿವರ್ಸ್ ತೆಗೆದುಕೊಂಡು ವಾಪಸ್ ಕರೆದುಕೊಂಡು ಬರಲಾಗಿದೆ. ಆದರೆ ಗುಂಡೇಟು ಬಿದ್ದಿದ್ದರಿಂದ ಅರ್ಜುನ ಬಲ ಕಳೆದುಕೊಂಡು ಬರಲಾಗದೇ ಸಾವನ್ನಪ್ಪಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿಸತತ 22 ವರ್ಷ ದಸರಾ ಮೆರವಣಿಗೆಯಲ್ಲಿ ಕಂಗೊಳಿಸಿದ್ದ ಕ್ಯಾಪ್ಟನ್‌.. ಅರ್ಜುನನ ವೀರಮರಣಕ್ಕೆ ಕನ್ನಡಿಗರ ಕಣ್ಣೀರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ಯಾಪ್ಟನ್ ಅರ್ಜುನ ಸಾವಿನ ಬಗ್ಗೆ ಹಲವು ಅನುಮಾನ; ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ

https://newsfirstlive.com/wp-content/uploads/2023/12/ARJUN_LOSS.jpg

Load More