/newsfirstlive-kannada/media/post_attachments/wp-content/uploads/2024/10/415th-Jambu-Savari-3.jpg)
ವಿಶ್ವ ವಿಖ್ಯಾತ ಮೈಸೂರು ದಸರಾ ಬಹಳ ಅದ್ಧೂರಿಯಾಗಿ ನೆರವೇರಿದೆ. 415ನೇ ಜಂಬೂ ಸವಾರಿಯನ್ನು ಸಾಂಸ್ಕೃತಿಕ ನಗರಿಯಲ್ಲಿ ಲಕ್ಷಾಂತರ ಜನರು ಕಣ್ತುಂಬಿಕೊಂಡಿದ್ದಾರೆ.
415ನೇ ಜಂಬೂ ಸವಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿ ವಿರಾಜಮನಳಾಗಿದ್ದು ನೋಡೋದೇ ಎಷ್ಟು ಚೆಂದ. ಸತತ 5ನೇ ಬಾರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಅಭಿಮನ್ಯು ಹೊತ್ತು ಸಾಗಿದ್ದಾನೆ.
ನಂದಿ ಪೂಜೆಯ ಬಳಿಕ ಸಿಎಂ ಸಿದ್ದರಾಮಯ್ಯ ಅವರು ನಾಡದೇವತೆಗೆ ಪುಷ್ಪ ನಮನ ಸಲ್ಲಿಸಿದರು. ಸಿಎಂಗೆ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಚಿವರು, ಅಧಿಕಾರಿಗಳು ಸಾಥ್ ನೀಡಿದ್ದರು.
ರಾಜಗಾಂಭೀರ್ಯದಲ್ಲಿ ಅಭಿಮನ್ಯು ಅರಮನೆಯಿಂದ ಜಂಬೂ ಸವಾರಿ ಹೊತ್ತು ಸಾಗಿದ್ದು ಲಕ್ಷಾಂತರ ಜನರು ಕಣ್ತುಂಬಿಕೊಂಡಿದ್ದಾರೆ. ಅಂಬಾರಿ ಮೆರವಣಿಗೆಗೂ ಮುನ್ನ ರಾಜ್ಯದ 31 ಜಿಲ್ಲೆ, 20 ಇಲಾಖೆಗಳ 51 ಸ್ತಬ್ಧಚಿತ್ರಗಳು ಮುಂದೆ ಸಾಗಿದವು.
ಇದನ್ನೂ ಓದಿ: ಮೈಸೂರಿನ ಈ ಆನೆ ಹಾಲಿವುಡ್ ಸಿನಿಮಾದಲ್ಲೂ ನಟಿಸಿತ್ತು.. ಜಂಬೂ ಸವಾರಿಯ ಆನೆಗಳ ಇತಿಹಾಸ ಬಲ್ಲಿರೇನು..?
ಇದನ್ನೂ ಓದಿ: ಇಂದು ಅಂಬಾರಿ ಹೊತ್ತು ದಸರಾ ಸುತ್ತಲಿರೋ ಅಭಿಮನ್ಯು.. ರಾಜ್ಯಗಾಂಭೀರ್ಯದಿಂದ ಹೆಜ್ಜೆ ಹಾಕೋ ಆನೆಗಳ ಪರಿಚಯ ಇಲ್ಲಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ