/newsfirstlive-kannada/media/post_attachments/wp-content/uploads/2025/02/MYS-FARMER-2.jpg)
ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಕಕ್ಕನಹಟ್ಟಿ ಗ್ರಾಮದ ರೈತರೊಬ್ಬರು ತಮ್ಮ ಕೃಷಿ ಜಮೀನಿಗೆ ದೃಷ್ಟಿ ಆಗಬಾರದೆಂದು ಮಾಡಲ್ಗಳ ಫೋಟೋಗಳನ್ನು ಅಳವಡಿಸಿದ್ದಾರೆ. ಇದು ದಾರಿಹೋಕರ ಗಮನ ಸೆಳೆಯುತ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗ್ತಿದೆ.
ಕಕ್ಕನಹಟ್ಟಿ ಗ್ರಾಮದ ರೈತ ಸೋಮೇಶ್ ಜಮೀನಿನಲ್ಲಿ ಮಾಡೆಲ್ಗಳ ಫೋಟೋಗಳನ್ನು ಪ್ರತಿಷ್ಠಾಪಿಸಿದ್ದಾರೆ. ಅರೆ ಬೆತ್ತಲೆಯಾಗಿ ಇರುವ ಮಾಡೆಲ್ಗಳ ಫೋಟೋಗಳನ್ನ ತಮ್ಮ ನಾಲ್ಕು ಎಕರೆ ಜಮೀನಿನ ಸುತ್ತ ಅಳವಡಿಸಿದ್ದಾರೆ.
ಇದನ್ನೂ ಓದಿ: ದಿಗ್ಗಜರ ನಡುವೆ ಶಿಷ್ಯರ ಮೇಲೆ ಗಂಭೀರ್ಗೆ ಪ್ರೀತಿ; ಪ್ಲೇಯಿಂಗ್ 11 ವಿಚಾರದಲ್ಲಿ ಭಾರೀ ಗೊಂದಲ..!
ತನ್ನ ನಾಲ್ಕು ಎಕರೆಯಲ್ಲಿ ಬೆಳೆದ ಬಾಳೆ ಬೆಳೆ ನಿರೀಕ್ಷೆಗೂ ಮೀರಿ ಫಸಲು ಬಂದಿದೆ. ಬೆಳೆ ಮೇಲೆ ಸಾರ್ವಜನಿಕರು ಮತ್ತು ದಾರಿಹೋಕರ ದೃಷ್ಟಿ ಬೀಳಬಾರದು ಎಂಬ ಕಾರಣಕ್ಕೆ ದೃಷ್ಟಿ ಬೊಂಬೆಗಳನ್ನ ಅಳವಡಿಸುವ ಬದಲು ಮಾಡೆಲ್ಗಳ ಅರೆಬೆತ್ತಲೆ ಫೋಟೋಗಳನ್ನ ಅಳವಡಿಸಿದ್ದಾನೆ. ಜಮೀನಿನ ಸುತ್ತ ಸುಮಾರು 10 ಸ್ಥಳಗಳಲ್ಲಿ ಮಾಡೆಲ್ಗಳ ಚಿತ್ರಗಳು ರಾರಾಜಿಸುತ್ತಿವೆ.
ಇದನ್ನೂ ಓದಿ: ಹುಂಜಾ ವಿರುದ್ಧ ರೊಚ್ಚಿಗೆದ್ದ ವೃದ್ಧ; ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು.. ಮುಂದೆ ಆಗಿದ್ದೇನು?
ಸಾರ್ವಜನಿಕರು ಈ ಜಮೀನು ಸುತ್ತಮುತ್ತ ಹೋಗುವಾಗ ತೋಟದ ಬೆಳೆಗಳನ್ನು ನೋಡದೇ, ಅಲ್ಲಿ ಅಳವಡಿಸಿರುವ ಮಾಡೆಲ್ಗಳನ್ನು ಕುಣ್ತುಂಬಿಕೊಂಡು ಹೋಗ್ತಿದ್ದಾರೆ. ಆ ಮೂಲಕ ಕೆಟ್ಟ ಕಣ್ಣುಗಳು ನನ್ನ ಬೆಳೆ ಮೇಲಿ ಬೀಳುತ್ತಿಲ್ಲ ಎನ್ನುತ್ತಿದ್ದಾರೆ ರೈತ ಸೋಮೇಶ್.
ಇದನ್ನೂ ಓದಿ: ಮುಡಾ ಕೇಸ್ನಲ್ಲಿ ಲೋಕಾಯುಕ್ತದಿಂದ ಕ್ಲೀನ್ ಚಿಟ್; ಸಿಎಂ ಸಿದ್ದರಾಮಯ್ಯ ಮತ್ತಷ್ಟು ಸ್ಟ್ರಾಂಗ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ