/newsfirstlive-kannada/media/post_attachments/wp-content/uploads/2024/11/mys.jpg)
ಮೈಸೂರು: ಅಮೆರಿಕಾದಲ್ಲಿ ಕನ್ನಡತಿ ಸಖತ್ ಹವಾ ಕ್ರಿಯೇಟ್ ಮಾಡಿದ್ದಾರೆ. ಮೈಸೂರು ಮೂಲದ ಯುವತಿ ಸೂಪರ್ ಮಾಡೆಲ್ ಆಗಿದ್ದಾರೆ. ಅಮೆರಿಕಾದ ಸಿಲಿಕಾನ್ ಸಿಟಿ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ನಯನಾ ವಿಶ್ವ ಕಳೆದ 8 ವರ್ಷಗಳಿಂದ ಅಮೆರಿಕಾದಲ್ಲೇ ವಾಸವಾಗಿದ್ದಾರೆ.
ಇದನ್ನೂ ಓದಿ: ವಿಶ್ವದ ಮೊಟ್ಟ ಮೊದಲ ಮರದ ಉಪಗ್ರಹ ಆಕಾಶಕ್ಕೆ ಜಿಗಿದಿದೆ.. ಇನ್ನೇನಿದ್ದರೂ..
ನಯನಾ ವಿಶ್ವ ಅವರು ಮೈಸೂರಿನ ಗೋಕುಲಂ ನಿವಾಸಿಯಾಗಿರೋ ವಿಶ್ವ ಚೈತನ್ಯ ಮತ್ತು ಭಾವನಿ ದಂಪತಿ ಪುತ್ರಿಯಾಗಿದ್ದಾರೆ. ಇವರು, ಹುಟ್ಟಿ ಬೆಳೆದಿದ್ದು ಎಲ್ಲಾ ಮೈಸೂರಿನಲ್ಲೆ. ಆದರೆ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾಕ್ಕೆ ತೆರಳಿದ್ರು. ಇದೀಗ ನಯನಾ ಅಮೆರಿಕಾದಲ್ಲಿ ಸೂಪರ್ ಮಾಡೆಲ್ ಆಗಿ ಸಖತ್ ಮಿಂಚುತ್ತಿದ್ದಾರೆ. ಅಮೆರಿಕಾದ ಲಾಸ್ ಏಜಂಲೀಸ್ ನಂತಹ ಮಾಯನಗರಿಯಲ್ಲಿ ಭಾರತದ ಪತಾಕೆ ಹಾರಿಸಿದ್ದಾರೆ. ಅಲ್ಲದೇ ಭಾರತ ಭಾವುಟ ಹಿಡಿದು ಱಪ್ ವಾಕ್ ಮಾಡಿದ್ದಾರೆ.
ಮೈಸೂರಿನ ಗೋಕುಲಂ ನಿವಾಸಿಯ ನಯನಾ ವಿಶ್ವ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು, ಪ್ರವೃತ್ತಿಯಲ್ಲಿ ಮಾಡೆಲ್ ಆಗಿದ್ದಾರೆ. ಅಮೆರಿಕಾದ ನಿಯತಕಾಲಿಕಗಳಲ್ಲೂ ಇವರ ಹೆಸರು ಉಲ್ಲೇಖವಾಗಿದೆ. ಅದರಲ್ಲೂ ಮಾಡೆಲ್ ನಯನಾ ವಿಶ್ವಗೆ ಕನ್ನಡ ಅಂದ್ರೆ ಪಂಚ ಪ್ರಾಣ. ಅಮೆರಿಕಾದಲ್ಲಿ ಇದ್ದರು ಕನ್ನಡವನ್ನು ನಿರರ್ಗಳವಾಗಿ ಮಾತಾಡುತ್ತಾರೆ. ನಯನಾ ವಿಶ್ವ ನಟ ಪುನೀತ್ ರಾಜ್ಕುಮಾರ್ ದೊಡ್ಡ ಅಭಿಮಾನಿಯಾಗಿದ್ದಾರೆ. ಅಮೆರಿಕಾದಲ್ಲೇ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ನೋಡಿ ಬೆರಗಾಗಿದ್ದರಂತೆ.
ನಯನಾ ವಿದ್ಯಾಭ್ಯಾಸವೇನು?
ಮಾಡೆಲ್ ನಯನಾ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಕುವೆಂಪು ನಗರದ ಜ್ಞಾನಗಂಗ ಶಾಲೆಯಲ್ಲಿ ಮುಗಿಸಿದ್ದಾರೆ. ಹೈಸ್ಕೂಲ್ ಕಾಲೇಜು ವಿದ್ಯಾಭ್ಯಾಸ ಬೆಂಗಳೂರಲ್ಲಿ ಮುಗಿಸಿದ್ದಾರೆ. ಅಲ್ಲದೇ ಎಂಜಿನಿಯರ್ ಮಾಡಿದ್ದು ಬೆಂಗಳೂರಿನ ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ. ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾದ ಕ್ಯಾಲಿಫೋರ್ನಿಯಾಗೆ ಹಾರಿದ್ದರು. ಅಲ್ಲೇ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿ ಸೇವೆ ಆರಂಭ ಮಾಡಿದ್ದರು. ವೃತ್ತಿಯ ಜೊತೆಗೆ ಪ್ರವೃತ್ತಿಯಾಗಿ ಮಾಡೆಲ್ ಫೀಲ್ಡ್ ಆಯ್ಕೆ ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಅಂತರಾಷ್ಟ್ರೀಯ ಮಟ್ಟದಲ್ಲೂ ಕನ್ನಡ ಸಿನಿಮಾ ಗುರುತಿಸಿಕೊಳ್ಳುತ್ತಿದೆ. ಅದು ತುಂಬ ಖುಷಿಯ ವಿಚಾರ. ಇಂಡಿಯನ್ ಸಿನಿ ಪ್ರೇಕ್ಷಕರಲ್ಲದೇ ಅಮೆರಿಕಾ ಪ್ರೇಕ್ಷಕರನ್ನೂ ನಮ್ಮ ಇಂಡಿಯಾದ ಸಿನಿಮಾಗಳ ಆಕರ್ಷಿಸುತ್ತಿವೆ. ನಾನು ಮುಂದೆ ಮಾಡೆಲ್ ಲೋಕದಲ್ಲಿ ಇನ್ನಷ್ಟು ಎತ್ತೆಕ್ಕೆ ಬೆಳೆಯಬೇಕು. ಮುಂದೆ ನೋಡೋಣ ಸಿನಿಮಾದಲ್ಲಿ ಅವಕಾಶಗಳು ಸಿಕ್ಕರೆ ನಟಿಸುತ್ತೇನೆ. ತಾಯ್ನಾಡಿಗೆ ಏನಾದರೂ ಮಾಡಬೇಕು ಎನ್ನುವ ಆಸೆ ನನ್ನದು ಅಂತ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ