ಹೊಟ್ಟೆ‌ನೋವು ಅಂತ ಆಸ್ಪತ್ರೆಗೆ ಹೋದ ಯುವತಿ ದುರಂತ.. ಮೈಸೂರಲ್ಲಿ ಸಂಬಂಧಿಕರ ಆಕ್ರೋಶ; ಆಗಿದ್ದೇನು?

author-image
Gopal Kulkarni
Updated On
ಹೊಟ್ಟೆ‌ನೋವು ಅಂತ ಆಸ್ಪತ್ರೆಗೆ ಹೋದ ಯುವತಿ ದುರಂತ.. ಮೈಸೂರಲ್ಲಿ ಸಂಬಂಧಿಕರ ಆಕ್ರೋಶ; ಆಗಿದ್ದೇನು?
Advertisment
  • ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದಳಾ 14 ವರ್ಷದ ಮೈಸೂರಿನ ಯುವತಿ
  • ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ 14 ವರ್ಷದ ಲಕ್ಷ್ಮೀ
  • ಎಕ್ಸ್​ರೇ, ಸ್ಕ್ಯಾನ್ ಇಲ್ಲದೇ ಆಪರೇಷನ್​ ಮಾಡಲು ಮುಂದಾದ ವೈದ್ಯರು!

ಅಧಿಕ ಪ್ರಮಾಣದಲ್ಲಿ ಅನಸ್ತೇಶಿಯಾ ನೀಡಿದ ಪರಿಣಾಮ ಯುವತಿ ಸಾವನ್ನಪ್ಪಿದ ಘಟನೆ ಮೈಸೂರಿನ ಜನತಾನಗರದಲ್ಲಿರುವ ಮೌರ್ಯ ಆಸ್ಪತ್ರೆಯಲ್ಲಿ ನಡೆದಿದೆ. ಯುವತಿಯ ಮನೆಯವರು ವೈದ್ಯರು ಅಧಿಕ ಪ್ರಮಾಣದ ಅನಸ್ತೇಶಿಯಾ ನೀಡಿದ್ದರಿಂದ ನಮ್ಮ ಹುಡುಗಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಪೋಷಕರೇ ಎಚ್ಚರ.. ಆಟವಾಡುತ್ತಿದ್ದ ಮಗು ನೀರಿನ ಬಕೆಟ್​ಗೆ ಬಿದ್ದು ದಾರುಣ ಅಂತ್ಯ

14 ವರ್ಷದ ಯುವತಿ ಲಕ್ಷ್ಮೀ ಹೊಟ್ಟೆನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಎಕ್ಸ್​ರೇ, ಸ್ಕ್ಯಾನ್ ಮಾಡದೇ ಏಕಾಏಕಿ ಆಪರೇಷನ್ ಮಾಡಿದ್ದಾರೆ ವೈದ್ಯರು ಎಂದು ಯುವತಿಯ ಪೋಷಕರು ಆರೋಪ ಮಾಡಿದ್ದಾರೆ. ಮೈಸೂರಿನ ಶಾರದಾ ನಗರದ ನಿವಾಸಿಯಾಗಿದ್ದ ಲಕ್ಷ್ಮೀ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಈ ಒಂದು ಘಟನೆ ನಡೆದಿದೆ.

ಇದನ್ನೂ ಓದಿ:ಒಂದೇ ಕುಟುಂಬದ 6 ಮಂದಿ ದುರಂತ.. ಹುಟ್ಟೂರಲ್ಲಿ ಸಾಮೂಹಿಕ ಸಂಸ್ಕಾರ; ಮುಗಿಲು ಮುಟ್ಟಿದ ಆಕ್ರಂದನ

ಯುವತಿಯ ಸಾವಿನ ಹಿನ್ನೆಲೆ ಯುವತಿಯ ಪೋಷಕರು ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆಯ ಮುಂಭಾಗದಲ್ಲಿ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಯುವತಿಯ ಸಾವು ಆಗಿದೆ ಎಂದು ಆರೋಪಿಸಿದ್ದಾರೆ. ಸರಿಯಾಗಿ ಚಿಕಿತ್ಸೆ ನೀಡದೇ ನಮ್ಮ ಮಗಳನ್ನು ಸಾಯಿಸಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment