/newsfirstlive-kannada/media/post_attachments/wp-content/uploads/2024/06/MYS-BOY.jpg)
ಮೈಸೂರು: ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರದಲ್ಲಿ ಯುವಕನ ಬರ್ಬರ ಕೊಲೆ ನಡೆದಿದ್ದು, ಇಡೀ ಮೈಸೂರೇ ಬೆಚ್ಚಿ ಬೀಳುವಂತಿದೆ. ಅರ್ಬಾಜ್ ಖಾನ್ (18) ಕೊಲೆಯಾದ ಯುವಕ.
ಕಾರಣ ಏನು..?
ಯಾವುದಕ್ಕೂ ಮುನ್ನ ಯುವಕನ ಕೊನೆ ಕ್ಷಣದ ವಿಡಿಯೋ ಇದೀಗ ವೈರಲ್​ ಆಗಿದ್ದು, ಅದು ಭಯ ಹುಟ್ಟಿಸುತ್ತಿದೆ. ಗುರಾಯಿಸಿದ್ದಕ್ಕೆ ಯುವಕರ ನಡುವೆ ಗಲಾಟೆ ಆಗಿದೆ. ಇದು ವಿಕೋಪಕ್ಕೆ ತಿರುಗಿ ನಾಲ್ವರು ಯುವಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಇದನ್ನೂ ಓದಿ:ಗುದದ್ವಾರದಲ್ಲಿ ಬರೋಬ್ಬರಿ ಒಂದು ಕೆಜಿ ಚಿನ್ನ ಇಟ್ಕೊಂಡು ವಿಮಾನ ಹತ್ತಿದ್ದ ಗಗನ ಸಖಿ ಅರೆಸ್ಟ್..!
ಪರಸ್ಪರ ಗಲಾಟೆಯಲ್ಲಿ ಪ್ರಮುಖ ಆರೋಪಿ ಶಹಬಾಜ್‌ಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಾಂತಿನಗರದ ಲಾಲ್ ಮಸೀದಿ ಬಳಿ ಅರ್ಬಾಜ್ ಖಾನ್ ಗುರಾಯಿಸಿದ ಎಂದು ಗಲಾಟೆ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಪಾಪಿ ಗಂಡ.. ಹೆಂಡತಿಯ ತಲೆಗೆ ಸ್ಕ್ರೂಡ್ರೈವರ್​ನಿಂದ 20 ಬಾರಿ ಚುಚ್ಚಿಚುಚ್ಚಿ ಸಾಯಿಸಿದ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us