newsfirstkannada.com

‘ರಾಮಲಲ್ಲಾ ಶಿಲೆ ಸಿಕ್ಕ ಜಾಗದಲ್ಲಿ ಗಲಾಟೆ ಮಾಡಿದ್ದೇ ಕಾಂಗ್ರೆಸ್ಸಿಗರು’- ಮೈಸೂರಲ್ಲಿ ಪ್ರತಾಪ್ ಸಿಂಹ ಕಿಡಿ

Share :

Published January 22, 2024 at 10:55am

    ರಾಮಲಲ್ಲಾ‌ ಮೂರ್ತಿ ನಿರ್ಮಿಸಲು ಶಿಲೆ ಸಿಕ್ಕ ಸ್ಥಳದಲ್ಲಿ ಗಲಾಟೆ

    ಕಾಂಗ್ರೆಸ್‌ನ ಪುಡಾರಿಗಳಿಂದ ಗಲಾಟೆ ನಡೆದಿದೆ ಎಂದು ಪ್ರತಾಪ್ ಸಿಂಹ

    ‘ಇಂತಹ ಗಲಾಟೆಗಳು ಮುಂದೆನೋ ನಡೆಯುತ್ತೆ ಇದಕ್ಕೆಲ್ಲಾ ಹೆದರುವುದಿಲ್ಲ’

ಮೈಸೂರು: ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ದಿನವೇ ರಾಮಲಲ್ಲಾ ಮೂರ್ತಿಯ ಶಿಲೆ ಸಿಕ್ಕ ಜಾಗದಲ್ಲಿ ಗಲಾಟೆ ನಡೆದಿದ್ದು, ರಾಜಕೀಯ ಬಣ್ಣ ಪಡೆದುಕೊಂಡಿದೆ. ರಾಮಲಲ್ಲಾ‌ ಮೂರ್ತಿ ನಿರ್ಮಿಸಲು ಶಿಲೆ ಸಿಕ್ಕ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ಇಂದು ಭೂಮಿ ಪೂಜೆ ನಡೆಯಬೇಕಿತ್ತು. ಈ ತಯಾರಿ ವೇಳೆ ಭೂಮಿ ಪೂಜೆಗೆ ಬಂದಿದ್ದ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ಹೊರಹಾಕಲಾಗಿದೆ.

ಹೆಚ್‌.ಡಿ ಕೋಟೆ ತಾಲೂಕಿನ ಹಾರೋಹಳ್ಳಿ ಗಲಾಟೆಗೆ ಬಿಜೆಪಿ ಸಂಸದ ಪ್ರತಾಪ ಸಿಂಹ ಕಿಡಿ ಕಾರಿದ್ದಾರೆ. ನಾನು ಈ ಕ್ಷಣಕ್ಕೂ ಮಹಿಷಾ ದಸರಾ ವಿರೋಧಿಯಾಗಿದ್ದೇನೆ. ಹೀಗಾಗಿ ಕಾಂಗ್ರೆಸ್‌ನ ಪುಡಾರಿಗಳಿಂದ ಗಲಾಟೆ ನಡೆದಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Breaking: ರಾಮಲಲ್ಲಾ ಶಿಲೆ ಸಿಕ್ಕ ಜಾಗದಲ್ಲಿ ಗಲಾಟೆ.. ಸಂಸದ ಪ್ರತಾಪ್ ಸಿಂಹಗೆ ಮುತ್ತಿಗೆ

ಇನ್ನು, ಯಾರೋ ನಾಲ್ಕು ಜನ ಮಹಿಷನ ಭಕ್ತರಿದ್ದಾರೆ. ಚಾಮುಂಡಿ ತಾಯಿಯ ಭಕ್ತರು ಕೋಟ್ಯಾಂತರ ಮಂದಿ ಇದ್ದಾರೆ. ನಾನು ಚಾಮುಂಡಿಯ ಭಕ್ತ. ನನ್ನನ್ನು ಈ ಚುನಾವಣೆಯಲ್ಲಿ ಕಾಂಗ್ರೆಸ್‌ನವರಿಂದ ಸೋಲಿಸಲು ಸಾಧ್ಯವಿಲ್ಲ. ಈ ಕಾರಣಕ್ಕೆ ಇಂತಹ ಗಲಾಟೆಗಳು ಮುಂದೆನೋ ನಡೆಯುತ್ತೆ. ಇದಕ್ಕೆಲ್ಲಾ ಹೆದರುವುದಿಲ್ಲ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ರಾಮಲಲ್ಲಾ ಶಿಲೆ ಸಿಕ್ಕ ಜಾಗದಲ್ಲಿ ಗಲಾಟೆ ಮಾಡಿದ್ದೇ ಕಾಂಗ್ರೆಸ್ಸಿಗರು’- ಮೈಸೂರಲ್ಲಿ ಪ್ರತಾಪ್ ಸಿಂಹ ಕಿಡಿ

https://newsfirstlive.com/wp-content/uploads/2024/01/Pratap-Simha-Mysore.jpg

Load More