/newsfirstlive-kannada/media/post_attachments/wp-content/uploads/2024/05/Myore-Swimming-dearh.jpg)
ಮೈಸೂರು: ಬೇಸಿಗೆ ಹಿನ್ನೆಲೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲಾದ ಘಟನೆ ನಂಜನಗೂಡು ತಾಲ್ಲೂಕಿನ ಕೋಣನೂರು ಗ್ರಾಮದ ಕೆರೆಯಲ್ಲಿ ನಡೆದಿದೆ. ಚಾಮರಾಜನಗರದ ರಾಮಸಮುದ್ರ ಗ್ರಾಮದ ದೊಡ್ಡ ಬೀದಿ ನಿವಾಸಿ ಗುಣಶೇಖರ್(22) ಮೃತ ದುರ್ದೈವಿ.
ಗುಣಶೇಖರ್ ಸ್ನೇಹಿತರೊಂದಿಗೆ ಕೆರೆಗೆ ಈಜಲು ಹೋಗಿದ್ದನು. ಕಪಿಲಾ ನದಿಯಿಂದ ಕೆರೆಗೆ ನೀರು ಹರಿಯುತ್ತಿದ್ದು, ನೀರಿನ ಬುಗ್ಗೆಯ ಮೇಲೆ ಜಿಗಿದಿದ್ದಾನೆ. ಸುಮಾರು 20 ಅಡಿ ಎತ್ತರದಿದ್ದ ನೀರು ಚಿಮ್ಮುವ ಬುಗ್ಗೆಗೆ ಮೇಲಿನಿಂದ ಕೆಳಗೆ ಜಂಪ್ ಮಾಡಿದ್ದಾನೆ.ಮೇಲಿಂದ ಜಂಪ್ ಪರಿಣಾಮ ಕೆಳಗಡೆ ಬಿದ್ದವನು ಮತ್ತೆ ಮೇಲೆ ಹೇಳಲೇ ಇಲ್ಲ.
ಇದನ್ನೂ ಓದಿ: ಸ್ಟೇರಿಂಗ್ ಕಟ್.. ಹಳ್ಳಕ್ಕೆ ಜಾರಿದ 50 ಪ್ರಯಾಣಿಕರಿದ್ದ KSRTC ಬಸ್
ಸ್ಥಳದಲ್ಲಿಯೇ ಯುವಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ನೀರು ಬರುವ ಸ್ಥಳ ಅಪಾಯಕಾರಿಯಾಗಿದ್ದು, ಈ ಸ್ಥಳದಲ್ಲಿ ಸಾಕಷ್ಟು ಯುವಕರು ಪ್ರಾಣವನ್ನು ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣಕಾಂತ ಕೋಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ