/newsfirstlive-kannada/media/post_attachments/wp-content/uploads/2025/02/MYS-CHAMUNDI-BETTA.jpg)
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕಿಡಿಗೇಡಿಗಳ ಕೃತ್ಯಕ್ಕೆ ದೊಡ್ಡ ಅನಾಹುತ ಸಂಭವಿಸಿದೆ. ಕಸಕ್ಕೆ ಹಚ್ಚಿದ ಬೆಂಕಿಯಿಂದ ಇಡೀ ಚಾಮುಂಡಿ ಬೆಟ್ಟವನ್ನೇ ಅಗ್ನಿದೇವ ಆವರಿಸಿಕೊಂಡಿದೆ. ತಹಬದಿಗೆ ಬಂದಿದ್ದ ಬೆಂಕಿ ಮತ್ತೆ ಉಲ್ಭಣವಾಗಿ ಆತಂಕಕ್ಕೆ ಕಾರಣವಾಗಿದೆ. ಇದೀಗ ಅಗ್ನಿಯನ್ನ ನಿಯಂತ್ರಣಕ್ಕೆ ತರುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಕನ್ನಡ ಮಾತಾಡಿದ್ದಕ್ಕೆ KSRTC ಕಂಡಕ್ಟರ್ ಮೇಲೆ ಹಲ್ಲೆ.. ಕರ್ನಾಟಕ ಸೇನೆಯಿಂದ ಪಾಠ
ಚಾಮುಂಡಿ ಬೆಟ್ಟದಲ್ಲಿ ನಿಲ್ಲದ ಅಗ್ನಿ ರೌದ್ರನರ್ತನ
ಚಾಮುಂಡಿ ಬೆಟ್ಟಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿರುವ ಅನುಮಾನ ವ್ಯಕ್ತವಾಗಿದೆ. ಬೆಟ್ಟದ ರಸ್ತೆಯ ಎರಡು ಬದಿಗಳಲ್ಲೂ ಬೆಂಕಿ ಹೊತ್ತಿ ಉರಿದಿದ್ದು, ಉತ್ತನಹಳ್ಳಿವರೆಗೂ ಅಗ್ನಿ ದೇವ ಎಲ್ಲವನ್ನೂ ಆಪೋಷನ ಮಾಡಿಕೊಂಡಿದ್ದಾನೆ. ಗಾಳಿ ಹೆಚ್ಚಾಗಿ ಇದ್ದ ಕಾರಣ ಬೆಂಕಿಯೂ ನೂರಾರು ಎಕರೆ ಪ್ರದೇಶದವರೆಗೂ ಹಬ್ಬಿದೆ. ಸಂಜೆ ವೇಳೆಗೆ ತಹಬದಿಗೆ ಬಂದಿದ್ದ ಬೆಂಕಿ ಮತ್ತೆ ದೇವಿಕೆರೆ ಸಮೀಪಕ್ಕೆ ವ್ಯಾಪಿಸಿದ ಬೆಟ್ಟದಲ್ಲಿ ಕಾಣಿಸಿಕೊಂಡಿತ್ತು. ತಕ್ಷಣವೇ ಬೆಂಕಿಯನ್ನ ನಿಯಂತ್ರಿಸಲು ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ರು. ಅಗ್ನಿದೇವನನ್ನ ಕಂಟ್ರೋಲ್‌ಗೆ ತರಲು ಭಾರೀ ಹರಸಾಹಸವನ್ನೇ ಪಟ್ರು. ಸುಮಾರು 200 ಎಕರೆ ಅರಣ್ಯ ನಾಶ.
ಚಾಮುಂಡಿ ಬೆಟ್ಟಕ್ಕೆ ತೆರಳುವ ಮಾರ್ಗ ಬಂದ್
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಬೆಟ್ಟಕ್ಕೆ ತೆರಳುವ ಮಾರ್ಗ ಬಂದ್ ಮಾಡಲಾಗಿತ್ತು. ಬೆಟ್ಟಕ್ಕೆ ರಾತ್ರಿ ಬರೋದಕ್ಕೆ ಪೊಲೀಸರು ನಿರ್ಬಂಧ ಹೇರಿದ್ರು. ಮುನ್ನೆಚ್ಚರಿಕೆ ಕ್ರಮವಾಗಿ ತಾವರೆಕೆರೆ ಗೇಟ್ ಬಳಿ ಸಾರ್ವಜನಿಕರನ್ನ ತಡೆ ಹಿಡಿದು, ಸಂಚಾರವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಬಗ್ಗೆ ಡಿಸಿಎಂ ಅಸಹಾಯಕತೆ ಮಾತು.. ಡಿ.ಕೆ ಶಿವಕುಮಾರ್ ವಿರುದ್ಧ ಬಿಜೆಪಿ ಕೆಂಡ
ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಯಶಸ್ವಿ
ಚಾಮುಂಡಿಬೆಟ್ಟದಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನ ನಂದಿಸಲು ನಿನ್ನೆ ಮಧ್ಯಾಹ್ನದಿಂದ ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಇಲಾಖೆ ಹರಸಾಹಸವನ್ನೇ ಪಟ್ಟಿತ್ತು. ಸಂಜೆ ವೇಳೆಗೆ ಕೊಂಚ ತಗ್ಗಿದ್ದ ಜ್ವಾಲೆ ಮತ್ತೆ ರಾತ್ರಿಯಾಗುತ್ತಿದ್ದಂತೆ ಕಾಣಿಸಿಕೊಂಡಿತ್ತು. ಮತ್ತೆ ಕಾರ್ಯನಿರತವಾಗಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಹುತೇಕ ಭಾಗದಲ್ಲಿ ಬೆಂಕಿ ಸಂಪೂರ್ಣ ತಗ್ಗಿದೆ.
ಇಷ್ಟೊಂದು ಪ್ರಮಾಣದಲ್ಲಿ ಬೆಂಕಿ ಹರಡಲು ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಭಕ್ತರು ಮತ್ತು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾನೆ. ಬೆಂಕಿಯ ಕಿಡಿ ಕಾಣಿಸಿಕೊಳ್ತಿದ್ದಂತೆ ಮೊದಲೇ ಎಚ್ಚೆತ್ತುಕೊಂಡಿದ್ದರೆ, ಅರ್ಧ ಬೆಟ್ಟ ಈ ರೀತಿ ಸುಟ್ಟು ಹೋಗ್ತಿರಲ್ಲ.. ಬೆಟ್ಟದ ಮೇಲಿರುವ ಮನೆಗಳಿಗೆ ಬೆಂಕಿ ವ್ಯಾಪಿಸದಂತೆ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ. ಕಿಡಿಗೇಡಿಗಳ ಕೃತ್ಯವೋ.. ಅಧಿಕಾರಿಗಳ ನಿರ್ಲಕ್ಷ್ಯವೋ? ಮತ್ತೆ ಇಂತಹ ಅವಘಡ ಸಂಭವಿಸದಂತೆ ಎಚ್ಚರವಹಿಸಿದ್ರೆ ಕ್ಷೇಮ.
ಇದನ್ನೂ ಓದಿ: ಗೃಹಲಕ್ಷ್ಮಿ ಹಣಕ್ಕಾಗಿ ಕಾಯ್ತಿರೋರಿಗೆ ಗುಡ್ನ್ಯೂಸ್ ನೀಡಿದ ಸಚಿವೆ ಹೆಬ್ಬಾಳ್ಕರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ