Advertisment

Mysuru Dasara: ಮೈಸೂರು ಅರಮನೆಗೂ ಇತ್ತಾ ಸುರಂಗ ಮಾರ್ಗ? ವೀಕ್ಷಣೆಗೆ ಅವಕಾಶವಿದೆಯಾ?

author-image
AS Harshith
Updated On
Mysuru Dasara: ಮೈಸೂರು ಅರಮನೆಗೂ ಇತ್ತಾ ಸುರಂಗ ಮಾರ್ಗ? ವೀಕ್ಷಣೆಗೆ ಅವಕಾಶವಿದೆಯಾ?
Advertisment
  • ವಿಜಯದಶಮಿಯ ಸಂಭ್ರಮದಲ್ಲಿ ತೇಲಾಡುತ್ತಿರುವ ಮೈಸೂರಿನ ಜನತೆ
  • ಅರಮನೆಗೆ ಸಂಬಂಧಪಟ್ಟ ಸುರಂಗ ಮಾರ್ಗವಿದೆಯಾ? ವೀಕ್ಷಣೆ ಮಾಡಬಹುದಾ?
  • ಭಾರತೀಯ ವಿಜ್ಞಾನ ಸಂಸ್ಥೆ ಏನು ಹೇಳಿದೆ? ಈ ಸುರಂಗ ಮಾರ್ಗ ಸಂಪರ್ಕಿಸುವುದೆಲ್ಲಿ?

ಮೈಸೂರು:ನಾಡಹಬ್ಬ ದಸರಾ ಸಡಗರ ಸದ್ಯ ಕೊನೆಘಟ್ಟಕ್ಕೆ ತಲುಪಿದೆ. ದಶ ದಿನದ ಕ್ಷಣಕ್ಕೆ ಸಾಕ್ಷಿಯಾಗಲು ಲಕ್ಷಗಟ್ಟಲೆ ಪ್ರವಾಸಿಗರು ಮೈಸೂರಿನತ್ತ ಹೆಜ್ಜೆ ಹಾಕ್ತಿದ್ದಾರೆ. 750 ಕೆ.ಜಿ.ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗೋ ತಾಯಿ ಚಾಮುಂಡಿ ನಾಡಿನ ಜನಕ್ಕೆ ದರ್ಶನ ತೋರಲಿದ್ದಾಳೆ.

Advertisment

ಇಂದಿನ ವಿಶೇಷ ದಿನವನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ. ಈ ಪವಿತ್ರ ಹಬ್ಬದ ಭಾಗವಾಗಿ ನಿಮ್ಮ ಮುಂದೆ ನಾವು ಒಂದಷ್ಟು ವಿಶೇಷ ಲೇಖನಗಳನ್ನು ಹೊತ್ತು ತಂದಿದ್ದೇವೆ. ಅದರಲ್ಲೊಂದು ಕುತೂಹಲ ಸಂಗತಿಯಾಗಿರುವ ಮೈಸೂರು ಅರಮನೆಗೆ ಸಂಬಂಧಪಟ್ಟ ಸುರಂಗ ಮಾರ್ಗದ ಬಗ್ಗೆ ಮಾಹಿತಿ ಇಲ್ಲಿದೆ.

publive-image

ಅರಮನೆಗೂ ಇತ್ತಾ ಸುರಂಗ ಮಾರ್ಗ?

ಹೌದು, ನಗರದ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಬಳಿ ಸುರಂಗ ಮಾರ್ಗ ಇದೆ. ಅರಮನೆ ಸನಿಹದಲ್ಲಿರೋ ಗನ್ ಹೌಸ್‌ನಲ್ಲಿ ಈ ಗುಹೆ ಇದೆ. ಒಂದು ತುದಿ ಚಾಮುಂಡಿ ಬೆಟ್ಟಕ್ಕೆ, ಇನ್ನೊಂದು ತುದಿ ಅಬಾವಿಲಾಸ ಅರಮನೆಯನ್ನು ಸಂಪರ್ಕಿಸುತ್ತದೆ ಎಂದು ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯೇ ಅಧ್ಯಯನ ನಡೆದಿದೆ.

ಮೈಸೂರಿನಲ್ಲೇಕೆ ಸುರಂಗ ಮಾರ್ಗ?

ಸುರಂಗ ಮಾರ್ಗಗಳನ್ನು ರಾಜರು ಕೊರೆಸುತ್ತಿದ್ದರು. ಕಾರಣ ಬೇರೆ ರಾಜ್ಯದವರು ತಮ್ಮ ಮೇಲೆ ದಂಡೆತ್ತಿ ಬಂದಾಗ ಸುರಂಗ ಮಾರ್ಗದ ಮೂಲಕ ಗೌಪ್ಯ ಪ್ರದೇಶಗಳಿಗೆ ಹೋಗಬಹುದು ಎಂಬುದು ಅದರ ಉದ್ದೇಶವಾಗಿತ್ತು. ಅದರಲ್ಲೂ ಅರಮನೆಯಿಂದ ನೇರವಾಗಿ ಚಿನ್ನ, ವಜ್ರ ಸಾಗಿಸಿದರೆ ಕಳ್ಳರು ದಾಳಿ ಮಾಡುತ್ತಾರೆ. ಹಾಗಾಗಿ ನಮಗೆ ಬೇಕಾದ ಕಡೆಗೆ ಸುರಂಗ ಮಾರ್ಗದ ಮೂಲಕ ಸಾಗಿಸಿದರೆ ಸೇಫ್ ಎಂಬುದು ಕೂಡ ಅವರ ಪ್ಲಾನ್​ ಆಗಿತ್ತು​​.

Advertisment

ಇದನ್ನೂ ಓದಿ: Mysore Dasara: ಮೈಸೂರು ದಸರಾ ಶುರುವಾಗಿದ್ದು ಹೇಗೆ? ಯಾವಾಗ? ಇಂಟ್ರೆಸ್ಟಿಂಗ್‌ ವಿಷಯಗಳು ಇಲ್ಲಿವೆ

publive-image

ಕರ್ನಾಟಕದಲ್ಲೂ ಹಲವು ಸುರಂಗ ಮಾರ್ಗಗಳು ಇವೆ. ಮೈಸೂರಿನಲ್ಲಂತೂ ಮೂರು ಸುರಂಗ ಮಾರ್ಗಗಳು ಇವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯೇ ಅಧಿಕೃತವಾಗಿ ತಿಳಿಸಿದೆ. ಅರಮನೆಯಿಂದ ರಾಣಿ ಬಂಗಲೆಗೆ ಒಂದು, ಅರಮನೆಯಿಂದ ಶ್ರೀರಂಗಪಟ್ಟಣಕ್ಕೆ ಮತ್ತೊಂದು, ಅರಮನೆಯಿಂದ ಚಾಮುಂಡಿ ಬೆಟ್ಟಕ್ಕೊಂದು; ಹೀಗೆ ಮೂರು ಸುರಂಗಗಳು ಇವೆ ಎಂದು ವರದಿಯಾಗಿದೆ.

ಇದನ್ನೂ ಓದಿ: Mysore Dasara 2024: ವಿಜಯದಶಮಿಯಂದು ಪೂಜಾ ವಿಧಾನಗಳು ಹೇಗೆ ನಡೆಯುತ್ತೆ? ಇಲ್ಲಿದೆ ಮಾಹಿತಿ

Advertisment

ಕೇವಲ ಇಷ್ಟು ಮಾತ್ರವಲ್ಲ ಮೈಸೂರು ಅರಮನೆಯಲ್ಲಿ ಹಲವಾರು ಕೊಠಡಿಗಳಿಗೆ ಬೀಗ ಹಾಕಲಾಗಿದೆ. ಪೂರ್ವಿಕರು ಸಂಪಾದಿಸಿದ ಚಿನ್ನ, ವಜ್ರ, ಬೆಳ್ಳಿ ಹೀಗೆ ಎಲ್ಲವೂ ಅದೇ ಕೊಠಡಿಗಳಲ್ಲೇ ಇಡಲಾಗಿದೆ. ಹೀಗಾಗಿ ಆ ಕೊಠಡಿಗಳಿಂದಲೂ ಬೇರೆ ನಗರಗಳಿಗೆ ಸಂಪರ್ಕಿಸೋ ಸುರಂಗ ಮಾರ್ಗಗಳು ಇರಬಹುದು ಅನ್ನೋ ಮಾತುಗಳು ಕೂಡ ಕೇಳಿ ಬಂದಿವೆ.

ಎಷ್ಟು ವರ್ಷಗಳ ಹಳೆಯವು ಇವು..?

ಸದ್ಯ ನ್ಯೂಸ್​ಫಸ್ಟ್​ಗೆ ಲಭ್ಯವಾದ ಮಾಹಿತಿ ಪ್ರಕಾರ ಸುರಂಗ ಮಾರ್ಗವನ್ನು ಸುಮಾರು 150 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಯುದ್ಧದಲ್ಲಿ ರಾಜರು ಸೋಲುವ ಸ್ಥಿತಿ ಬಂದರೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ಸುರಂಗ ಮಾರ್ಗಗಳನ್ನು ಕೊರೆಯಲಾಗಿತ್ತು. ಈ ಮೂಲಕ ರಾಜರು ತಪ್ಪಿಸಿಕೊಳ್ಳುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ. ಈ ಸುರಂಗಗಳು ಸುಮಾರು 3 ಅಡಿ ಅಗಲ ಹಾಗೂ 4-5 ಅಡಿ ಎತ್ತರವಿದೆ. ಒಬ್ಬ ವ್ಯಕ್ತಿ ಸುಲಭವಾಗಿ ನುಸುಳಿ ಹೋಗಲು ಅವಕಾಶ ಇದೆ. ಇವುಗಳನ್ನು ಇಟ್ಟಿಗೆ ಮತ್ತು ಸುಣ್ಣದ ಗಾರೆ ಉಪಯೋಗಿಸಿ ನಿರ್ಮಿಸಲಾಗಿದೆ. ಗುಹೆಯ ಕೆಲವೆಡೆ ಮೆಟ್ಟಿಲುಗಳು ಕಂಡುಬಂದಿವೆ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಸದ್ಯ ಈ ಸುರಂಗ ಮಾರ್ಗ ವೀಕ್ಷಣೆಗೆ ಅವಕಾಶವಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment