/newsfirstlive-kannada/media/post_attachments/wp-content/uploads/2024/08/Mysore-palace.jpg)
ಡಿಜಿಟಲ್​ ಪಾವತಿ ಯುಗವಿದು. ಒಂದೆರಡು ಕ್ಲಿಕ್​ನಲ್ಲಿ ಏನು ಬೇಕಾದರೂ ಮಾಡಬಹುದು. ಮೆಟ್ರೋ ಟಿಕೆಟ್​, ಟ್ರೈನ್​ ಟಿಕೆಟ್​, ಬಸ್​ ಟಿಕೆಟ್​, ಕ್ಯಾಬ್​​​ ಹೀಗೆ ಮೊಬೈಲ್​ನಲ್ಲೇ ಟಿಕೆಟ್​ ಖರೀದಿಸಬಹುದು. ಅಷ್ಟೇ ಏಕೆ ವಿಶ್ವ ವಿಖ್ಯಾತ ಮೈಸೂರು ಅರಮನೆಯನ್ನು ಕಾಣಲು ಸಹ ವಾಟ್ಸ್​ಆ್ಯಪ್​ ಮೂಲಕ ಟಿಕೆಟ್​ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಟೆನ್ಶನ್​ ಇಲ್ಲದೆಯೋ ಅರಮನೆ ಕಣ್ತುಂಬಿಕೊಳ್ಳಬಹುದಾಗಿದೆ.
ಆಗಸ್ಟ್​ 14ರಿಂದ ವಾಟ್ಸ್​ಆ್ಯಪ್​ ಮೂಲಕ ಅರಮನೆಯನ್ನು ಕಾಣುವಂತಹ ಅವಕಾಶ ತೆರೆದಿಟ್ಟಿದೆ. ಮೊಬೈಲ್​ ಯೋಜನೆ ಮೂಲಕ ಅರಮನೆಯ ಟಿಕೆಟ್​​​ ಖರೀದಿಸಬಹುದಾಗಿದೆ. ಆ ಮೂಲಕ ಸಮಯದ ಉಳಿತಾದ ಜೊತೆಗೆ ಟಿಕೆಟ್​ಗಾಗಿ ಕ್ಯೂನಲ್ಲಿ ನಿಲ್ಲುವ ಅವಕಾಶ ದೂರವಾಗಿದೆ.
ಟಿಕೆಟ್​ ಖರೀದಿಸುವುದು ಹೇಗೆ?
ವಾಟ್ಸ್​ಆ್ಯಪ್​ ತೆರೆದು 8884160088ಗೆ ಹಾಯ್​ (Hi) ಎಂದು ಮೆಸೇಜ್​ ಹಾಕಿ. ನಂತರ ಕನ್ನಡ ಅಥವಾ ಇಂಗ್ಲಿಷ್​ನಲ್ಲಿ ಟಿಕೆಟ್​​ ಪಡೆಯಬಹುದಾಗಿದೆ. ಯಾವ ಭಾಷೆಯಲ್ಲೂ ಬೇಕಾದರೂ ಟಿಕೆಟ್​​ ಖರೀದಿಸಬಹುದಾಗಿದೆ. ಬಳಿಕ ಟಿಕೆಟ್​ ದರ ಪಾವತಿಸುವ ಮೂಲಕ ಅರಮನೆ ವೀಕ್ಷಣೆಗೆ ಟಿಕೆಟ್​​ ಖರೀದಿಸಬಹುದಾಗಿದೆ.
ಇದಲ್ಲದೆ, ಇನ್ನೊಂದು ಅವಕಾಶವಿದೆ. ಮೈಸೂರು ಅರಮನೆಯ ಆಡಳಿತ ಮಂಡಳಿ ವೆಬ್​ಸೈಟ್​ ಮೂಲಕ ಅರಮನೆ ಟಿಕೆಟ್​​ ಖರೀದಿಸಬಹುದಾಗಿದೆ. https://mysorepalace.karnataka.gov.in/ ವೆಬ್​ಸೈಟ್​​ಗೆ ಭೇಟಿ ನೀಡಿದಂತೆ ವಾಟ್ಸ್​ಆ್ಯಪ್​ ಕ್ಯೂಆರ್​ ಕೋಡ್​ ಒದಗಿಸುತ್ತದೆ. ಅದನ್ನು ಸ್ಕ್ಯಾನ್​ ಮಾಡುವ ಮೂಲಕ ಟಿಕೆಟ್​​ ಖರೀದಿಸಬಹುದಾಗಿದೆ.
ಇದನ್ನೂ ಓದಿ: ಕೋಲಾರದ ಕೆಂಪು ಸುಂದರಿಗೆ ಸಮಸ್ಯೆ ತಂದೊಡ್ಡಿದ ಬಾಂಗ್ಲಾ ಬಿಕ್ಕಟ್ಟು.. ಟೊಮೊಟೊ ಬೆಲೆ ಶೇ60 ರಷ್ಟು ಕುಸಿತ
ಸದ್ಯ ಅರಮನೆಯನ್ನು ಕಾಣುವ ವಿಧಾನ ತುಂಬಾ ಸರಳವಾಗಿದೆ. ಟಿಕೆಟ್​ಗಾಗಿ ಬಿಸಿಲಿನಲ್ಲಿ, ಮಳೆಯಲ್ಲಿ ಕಾಯುವ ಬದಲು ನೇರವಾಗಿ ಡಿಜಿಟಲ್​ ಪಾವತಿ ಮೂಲಕ ಖರೀದಿಸಬಹುದಾಗಿದೆ. ಸದ್ಯ ಈ ಪ್ರಕ್ರಿಯೆಯಿಂದ ಜನರು ಸಂತಸಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ