/newsfirstlive-kannada/media/post_attachments/wp-content/uploads/2025/05/Pramoda-devi-donation-to-tirupati-1.jpg)
ತಿರುಪತಿ ತಿಮ್ಮಪ್ಪನಿಗೂ ಮೈಸೂರು ಯದುವಂಶದ ಮಹಾರಾಜರಿಗೂ ಬಹಳ ವರ್ಷಗಳ ಹಿಂದಿನಿಂದಲೂ ನಂಟಿದೆ. 300 ವರ್ಷಗಳ ಹಿಂದೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಿರುಪತಿ ತಿಮ್ಮಪ್ಪನಿಗೆ ನಂದಾದೀಪವನ್ನ ಉಡುಗೊರೆಯಾಗಿ ನೀಡಿದ್ದರು.
300 ವರ್ಷಗಳ ಹಿಂದೆ ನೀಡಿದ್ದ ನಂದಾದೀಪವೇ ಈಗಲೂ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿದೆ. ಹಳೆಯ ನಂದಾದೀಪ ಈಗ ದುರಸ್ಥಿಗೊಂಡಿತ್ತು. ನಂದಾದೀಪದ ದುಸ್ಥಿತಿಯ ಬಗ್ಗೆ ಮೈಸೂರು ರಾಜಮಾತೆ ಪ್ರಮೋದಾದೇವಿ ಒಡೆಯರ್‌ಗೆ TTD ಮಾಹಿತಿ ನೀಡಿತ್ತು.
ಈ ವಿಷಯ ತಿಳಿದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ತಿರುಪತಿಗೆ ಹೊಸ ದೀಪಗಳನ್ನು ರವಾನೆ ಮಾಡಿದ್ದಾರೆ. ಮೈಸೂರು ರಾಜವಂಶಸ್ಥರು ಬರೋಬ್ಬರಿ 100 ಕೆಜಿ ತೂಕದ ಬೆಳ್ಳಿ ನಂದಾದೀಪವನ್ನ ಉಡುಗೊರೆಯಾಗಿ ನೀಡಿದ್ದಾರೆ. ಈ 100 KG ಬೆಳ್ಳಿಯ ನಂದಾದೀಪ ತಯಾರಿಸಲು 2 ತಿಂಗಳು ಬೇಕಾಗಿದೆ. 100 ಕೆಜಿ ಬೆಳ್ಳಿಯ ಬೆಲೆ ಸದ್ಯಕ್ಕೆ 1 ಕೋಟಿ ರೂಪಾಯಿ ಇದೆ.
ಇದನ್ನೂ ಓದಿ: ನಟಿ ರೀಷ್ಮಾ ನಾಣಯ್ಯ ಅಕ್ಕ ಈಗ ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಸೊಸೆ; ಫೋಟೋ ಇಲ್ಲಿದೆ!
ತಿರುಪತಿಗೆ ಭೇಟಿ ನೀಡಿದ್ದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೆ ಮೈಸೂರು ಸಂಸದ ಯದುವೀರ್ ಒಡೆಯರ್ ಕೂಡ ಸಾಥ್ ನೀಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ