/newsfirstlive-kannada/media/post_attachments/wp-content/uploads/2024/12/KSDL-Soap-Factory-Officer.jpg)
ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿಯ (KSDL) ಅಧಿಕಾರಿ ಅಮೃತ್ ಶಿರೂರ್ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಿದ್ದ ಅಮೃತ್ ಶಿರೂರ್ ಕಳೆದ ಡಿಸೆಂಬರ್ 28ರ ಸಂಜೆ ದುರಂತಕ್ಕೀಡಾಗಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಠಾಣೆಯ ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ಅಮೃತ್ ಶಿರೂರ್ ಅವರ ಮೃತದೇಹ ಮನೆಯಲ್ಲಿ ಪತ್ತೆಯಾಗಿದೆ. ಮನೆ ಮಾಲೀಕ ಗಿರೀಶ್ ಎಂಬುವವರು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಠಾಣೆಯ ಸಿಬ್ಬಂದಿ ಹೋಗಿ ಪರಿಶೀಲನೆ ನಡೆಸಿದಾಗ ಅಮೃತ್ ಶಿರೂರ್ ಅವರ ಕೈಯಲ್ಲಿ ಒಂದು ಡೆತ್ ನೋಟ್ ಕೂಡ ಪತ್ತೆಯಾಗಿದೆ.
KSDL ಅಧಿಕಾರಿ ಅಮೃತ್ ಶಿರೂರ್ ತನ್ನ ಮರಣ ಪತ್ರದಲ್ಲಿ ಒಂದಷ್ಟು ಅಂಶಗಳನ್ನು ಉಲ್ಲೇಖ ಮಾಡಿದ್ದಾರೆ. ನಾನು ಒಳ್ಳೆಯ ಮಗನಾಗಲಿಲ್ಲ. ಪತ್ನಿಗೆ ಗಂಡನಾಗಲಿಲ್ಲ. ನನ್ನ ಅಂತ್ಯಕ್ಕೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: 18 ವರ್ಷ ಸಾಕಿ ಸಲುಹಿದ ಅಮ್ಮನಿಗೆ 2ನೇ ಮದುವೆ ಮಾಡಿಸಿದ ಮಗ; ವಿಡಿಯೋ ಸಖತ್ ವೈರಲ್!
ಅಮೃತ್ ಶಿರೂರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ಅವರು ಮಾಹಿತಿ ನೀಡಿದ್ದಾರೆ. ಮನೆ ಮಾಲೀಕ ಗಿರೀಶ್ ಅವರೇ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಠಾಣೆ ಸಿಬ್ಬಂದಿ ಹೋಗಿ ಪರಿಶೀಲನೆ ನಡೆಸಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
/newsfirstlive-kannada/media/post_attachments/wp-content/uploads/2024/12/KSDL-Soap-Factory-Officer-Case.jpg)
ಅಮೃತ್ ಅವರು ಕಳೆದ 10 ವರ್ಷದಿಂದ ಕೆಎಸ್‌ಡಿಎಲ್‌ನಲ್ಲೇ ಕೆಲಸ ಮಾಡುತ್ತಾ ಇದ್ದರು. ನನ್ನ ಸಾವಿಗೆ ನಾನೇ ಕಾರಣ ಎಂದು ಮರಣ ಪತ್ರದಲ್ಲಿ ಬರೆಯಲಾಗಿದೆ. ಅದರಲ್ಲಿ ಯಾವ ಅಧಿಕಾರಿ ಹೆಸರು ಕೂಡ ಉಲ್ಲೇಖ ಆಗಿಲ್ಲ. ಆದರೆ ನನ್ನ ಕೆಲಸಕ್ಕೆ ನ್ಯಾಯ ಒದಗಿಸಲಾಗುತ್ತಿಲ್ಲ ಎಂದು ಮಾತ್ರ ಉಲ್ಲೇಖಿಸಲಾಗಿದೆ.
ಇನ್ನು ಅಮೃತ್ ಶಿರೂರ್ ದುರಂತದ ಘಟನಾ ಸ್ಥಳ ನೋಡಿದಾಗ ಯಾವುದೇ ರೀತಿಯ ಸಂಶಯ ಕಂಡು ಬಂದಿಲ್ಲ. ಮೆಡಿಕಲ್ ರಿಪೋರ್ಟ್ ಬರಬೇಕಿದೆ. ಅದರ ಆಧಾರದ ಮೇಲೆ ತನಿಖೆ ನಡೆಸಲಾಗುತ್ತೆ. ಅಮೃತ್‌ಗೆ ಮೊದಲ ಡಿವೋರ್ಸ್ ಬಳಿಕ ಮತ್ತೊಂದು ಮದುವೆ ಆಗಿದೆ. 2019ರಲ್ಲಿ 2ನೇ ಮದುವೆಯಾಗಿದ್ದು, ಅದು ಕೂಡ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದೆ. ಸೋಪ್ ಫ್ಯಾಕ್ಟರಿ ಅಧಿಕಾರಿ ಖಿನ್ನತೆಗೆ ಒಳಗಾಗಿರಬಹುದು ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us