/newsfirstlive-kannada/media/post_attachments/wp-content/uploads/2025/02/Mysore-Family-Tragedy-6.jpg)
ಮೈಸೂರು ವಿಶ್ವೇಶ್ವರಯ್ಯನಗರದ ಅಪಾರ್ಟ್‌ಮೆಂಟ್‌ನಲ್ಲಿ ಇಡೀ ರಾಜ್ಯವೇ ಬೆಚ್ಚಿ ಬೀಳುವ ಘಟನೆ ನಡೆದಿದೆ. ಒಂದೇ ಕುಟುಂಬದ ನಾಲ್ವರು ದಾರುಣ ಅಂತ್ಯ ಕಂಡಿದ್ರೆ ಮನೆ ಯಜಮಾನನೇ ತಾಯಿ, ಪತ್ನಿ, ಮಗನಿಗೆ ವಿಷವಿಕ್ಕಿ ಸಾಯದಿದ್ದಾಗ ಕೊಂದು ತಾನು ಸಾವಿಗೆ ಕೊರಳೊಡ್ಡಿದ್ದಾನೆ.
ಚೇತನ್ ಎಂಬ ಈ ವ್ಯಕ್ತಿ ರಾತ್ರಿಯಿಡೀ ಸ್ಕೆಚ್ ಹಾಕಿ ಮೂವರ ಹತ್ಯೆ ಮಾಡಿದ್ದಾನೆ. ಮೊದಲಿಗೆ ಮೂವರಿಗೂ ವಿಷವುಣಿಸಿ ಸಾಯಿಸೋದಕ್ಕೆ ಯತ್ನಿಸಿದ್ದಾನೆ. ಆದರೆ ಅವರು ಸಾಯುತ್ತಿಲ್ಲ ಅಂತ ಕೈ, ಕಾಲು ಕಟ್ಟಿ ಹಾಕಿದ್ದಾನೆ.
ಮಗನ ಕಾಲನ್ನ ಹಗ್ಗದಿಂದ ಕಟ್ಟಿ, ನಂತರ ಪ್ಲಾಸ್ಟರ್ ಸುತ್ತಿ ಹತ್ಯೆ ಮಾಡಿದ್ದಾನೆ. ಹೆಂಡತಿ ರೂಪಾಲಿಯ ಮುಖಕ್ಕೆ ಪ್ಲಾಸ್ಟರ್ ಸುತ್ತಿ ಕೊಲೆಗೈದಿದ್ದು, ನಂತರ ಚೇತನ್ ಕೂಡ ಸಾವಿಗೆ ಶರಣಾಗಿದ್ದಾನೆ.
/newsfirstlive-kannada/media/post_attachments/wp-content/uploads/2025/02/Mysore-Family-Tragedy-4.jpg)
ಚೇತನ್​ ಚರಿತ್ರೆ ಏನು?
ಮೈಸೂರಲ್ಲಿ ಮೂವರ ಕೊಲೆ ಮಾಡಿ ಸಾವಿಗೆ ಶರಣಾದ ಚೇತನ್ ಅವರು ಹಾಸನದ ಗೊರೂರಿನವರು. 2008ರಲ್ಲಿ ಚೇತನ್ ಅರೇಬಿಯಾದ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದ. ಮದುವೆಯಾದ ನಂತರ ಭಾರತಕ್ಕೆ ವಾಪಸ್ ಬಂದಿದ್ದ.
ತಾಯ್ನಾಡಿಗೆ ಮರಳಿದ ಚೇತನ್, ಉಡುಪಿ ಎಲ್&ಟಿ ಕಂಪನಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಕೊಂಡ. ನಂತರ ಮಧ್ಯಪ್ರದೇಶ, ಹೈದರಬಾದ್​ನಲ್ಲೂ ಕಾರ್ಯ ನಿರ್ವಹಿಸಿದ್ದ. ಇದಾದ ನಂತರ ಚೇತನ್ ಮತ್ತೆ ಫ್ಯಾಮಿಲಿ ಸಮೇತ ಸೌದಿ ಅರೇಬಿಯಾದ ರಿಯಾದ್‌ಗೆ ಹೋಗಿದ್ದ. ರಿಯಾದ್‌ನಲ್ಲೇ ಚೇತನ್ 6 ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದ. ಕೋವಿಡ್ ಸಮಯದಲ್ಲಿ ಚೇತನ್​ ಭಾರತಕ್ಕೆ ವಾಪಸ್ ಬಂದಿದ್ದ.
ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ಸಂಕಲ್ಪ್ ಅಪಾರ್ಟ್​ಮೆಂಟ್​ನ 2 ಫ್ಲಾಟ್‌ನಲ್ಲಿ ಚೇತನ್​ ಕುಟುಂಬ ವಾಸವಿತ್ತು. ಚೇತನ್​ ತಂದೆ ಮಂಜುನಾಥ್ ಕಳೆದ 12 ವರ್ಷಗಳ ಹಿಂದೆ ಸಾವನ್ನಪ್ಪಿದ್ರು. ತಾಯಿ ಪ್ರಿಯಂವದಾ ಜತೆ ಅಪಾರ್ಟ್​ಮೆಂಟ್​ನಲ್ಲಿ ಚೇತನ್ ವಾಸವಾಗಿದ್ದರು.
/newsfirstlive-kannada/media/post_attachments/wp-content/uploads/2025/02/Mysore-Family-Tragedy-5.jpg)
ಚೇತನ್ ತನ್ನ ಹೆಂಡತಿ ರೂಪಾಲಿ ಹೆಸರಿನಲ್ಲಿ ಕಂಪನಿಯೊಂದನ್ನ ತೆರೆದಿದ್ದರು. ತನ್ನ ಮನೆಯಲ್ಲಿಯೇ ಆಫೀಸ್ ಮಾಡಿಕೊಂಡು ಕೆಲಸ ಮಾಡಿಕೊಂಡಿದ್ದರು. ಚೇತನ್ ಹೊರ ದೇಶಕ್ಕೆ ಕೆಲಸಗಾರರನ್ನು ಕಳುಹಿಸಿಕೊಡುತ್ತಿದ್ದರು. 6 ತಿಂಗಳ ಹಿಂದೆ ಚೇತನ್​ ಪತ್ನಿ ರೂಪಾಲಿ ಹಣದ ಸಮಸ್ಯೆ ಬಗ್ಗೆ ತಿಳಿಸಿದ್ದಳು. ತನ್ನ ತಂದೆಯ ಬಳಿ ಗಂಡನ ಮನೆಯಲ್ಲಿ ಸ್ವಲ್ಪ ಹಣದ ತೊಂದರೆ ಇರುವ ಬಗ್ಗೆ ಹೇಳಿಕೊಂಡಿದ್ದಳು.
ಇದನ್ನೂ ಓದಿ: ಮೈಸೂರಲ್ಲಿ ಒಂದೇ ಕುಟುಂಬದ ನಾಲ್ವರ ದುರಂತ.. ತಾಯಿ, ಪತ್ನಿ, ಮಗನ ಕೊಲೆ! ಸಾವಿಗೂ ಮುನ್ನ ನಡೆದಿದ್ದೇನು?
ನಾಲ್ವರ ಸಾವಿನ ಸತ್ಯ ರಿವೀಲ್​​!
ತಾಯಿ, ಪತ್ನಿ, ಮಗನನ್ನು ಕೊಂದಿರುವ ಚೇತನ್ ಕುಟುಂಬದ ದುರಂತಕ್ಕೆ ಐಷಾರಾಮಿ ಬದುಕು, ಆರ್ಥಿಕ ಸಂಕಷ್ಟವೇ ಕಾರಣ. ಡೆತ್​​ನೋಟ್ ಬರೆದಿಟ್ಟಿರುವ ಚೇತನ್, ಸಾಲದ ಸುಳಿಯಲ್ಲಿ ಸಿಲುಕಿ ನರಳಾಡುತ್ತಿದ್ದ ಬಗ್ಗೆ ಉಲ್ಲೇಖಿಸಿದ್ದಾರೆ.
ವಿದೇಶದಲ್ಲಿದ್ದಾಗ ಉತ್ತಮ ವ್ಯವಹಾರ ನಡೆಸ್ತಿದ್ದ ಚೇತನ್ ಭಾರತಕ್ಕೆ ಬಂದ ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದುರ. ಸಾಲದಿಂದ ಚೇತರಿಸಿಕೊಳ್ಳದೆ ಪರದಾಡುತ್ತಿದ್ದ ಚೇತನ್, ಪತ್ನಿ, ಮಗ, ಹೆತ್ತ ತಾಯಿಯ ಉಸಿರು ನಿಲ್ಲಿಸಿರೋದು ಘೋರ ದುರಂತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us